ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ವಾರ್ತಾ ಮಾಧ್ಯಮಗಳಲ್ಲಿ ಒಂದು ಟ್ವೀಟ್ ಸಂದೇಶ ಬಹಳ ವೈರಲ್ ಆಗಿದೆ. ಅದು ಗಾಝ ನಗರದಾದ್ಯಂತ ಇಸ್ರೇಲ್ ಎಂಬ ನರಹಂತಕರ ಬಾಂಬರ್ ಮತ್ತು ಮಿಸೈಲ್ ಆಕ್ರಮಣದ ಲೈವ್ ರಿಪೋರ್ಟ್ ಮಾಡುತ್ತಿದ್ದ ಅಲ್ ಜಝೀರ ಚಾನೆಲ್ನ ಅನಸ್ ಅಲ್ ಶರೀಫ್ ಅವರ ಬರಹ.
ನಿರೀಕ್ಷೆಯಂತೆ ಏಕದೇವೋಪಾಸನೆಯನ್ನು ಉಚ್ಚರಿಸುತ್ತಾ ರಕ್ತದಾಹಿಗಳ ಮಿಸೈಲ್ಗಳಿಗೆ ತಲೆಯೊಡ್ಡಿ ವೀರ ಮರಣವನ್ನಪ್ಪಿದ ಅನಸ್ ಅಲ್ ಶರೀಫ್ ಅವರ ಹುತಾತ್ಮತೆಯು ಕಸ್ತೂರಿಯ ಪರಿಮಳದಂತೆ ಜಗತ್ತಿನಾದ್ಯಂತ ಪಸರಿಸಿದೆ. ಗಾಝ ನಗರದಾದ್ಯಂತ (ವಂಶಹತ್ಯೆಯ ರಣಭೂಮಿ) ಓಡಾಡುತ್ತಾ ಅಲ್ ಜಝೀರಾದ ಕ್ಯಾಮರ ಮತ್ತು ಮೈಕ್ ನೊಂದಿಗೆ ವಂಶಹತ್ಯೆಯ ದೃಶ್ಯವನ್ನು ಹೊರಜಗತ್ತಿಗೆ ತಿಳಿಸುತ್ತಿದ್ದ ಆ ಧೀರ ಯೋಧ ತನ್ನ ಸಂದೇಶವನ್ನು ಉಯಿಲು ಬರೆದು ಇನ್ನಿಲ್ಲದ ಲೋಕಕ್ಕೆ ಮರಳಿದ್ದಾರೆ.
ಇದು ಅವರ ಟ್ವೀಟ್ ಸಂದೇಶದ ಸಾರಾಂಶ
ಇದು ನನ್ನ ಕೊನೆಯ ಉಯಿಲು ಮತ್ತು ಸಂದೇಶ. ನನ್ನ ಈ ಮಾತು ನಿಮಗೆ ತಲುಪುವುದಿದ್ದರೆ ನನ್ನ ಶಬ್ದವನ್ನಡಗಿಸುವುದರಲ್ಲಿ ಮತ್ತು ನನ್ನನ್ನು ವಧಿಸುವುದರಲ್ಲಿ ಇಸ್ರೇಲ್ ಯಶಸ್ಸಿಯಾಗಿದೆ ಎಂದು ತಿಳಿಯಿರಿ. ಸರ್ವಶಕ್ತನ ಶಾಂತಿ ಮತ್ತು ಕರುಣೆ ನಿಮ್ಮ ಮೇಲಿರಲಿ. ಜಬಾಲಿಯ ಅಭಯಾರ್ಥಿ ಶಿಬಿರದಲ್ಲಿ ಮತ್ತು ಪರಿಸರದಲ್ಲಿ ನಾನು ಬದುಕಿಗೆ ಕಣ್ಣು ತೆರೆದಂದಿನಿAದ ನಾನು ನನ್ನ ಶಕ್ತಿ ಮತ್ತು ಸಾಮರ್ಥ್ಯಕ್ಕನುಸಾರ ಎಲ್ಲಾ ರೀತಿಯ ಕಠಿಣ ಪ್ರಯತ್ನ ಮತ್ತು ಸಹಕಾರ ನನ್ನ ಜನರಿಗೆ ನಾನು ನೀಡುತ್ತಾ ಬಂದಿದ್ದೇನೆ ಎಂದು ಸೃಷ್ಟಿಕರ್ತನಿಗೆ ಗೊತ್ತು. ನನ್ನ ಕುಟುಂಬ ಮತ್ತು ತಾಯ್ನಾಡಿನ ಜನತೆಯೊಂದಿಗೆ ನನ್ನ ಹುಟ್ಟೂರಾದ ಅಶ್ಕಲೋನಿಯಾಗೆ ಮರಳಲು ಸಾಧ್ಯವಾಗುವ ರೀತಿಯಲ್ಲಿ ನನ್ನ ಆಯಸ್ಸು ಹೆಚ್ಚಾಗಲಿ ಮತ್ತು ನನ್ನ ಮರಣ ಸಂಭವಿಸದಿರಲಿ ಎಂದು ನಾನು ಬಯಸಿದ್ದೆ. ಆದರೆ ವಿಧಿಯಾಟವನ್ನು ಬಲ್ಲವರಾರು. ಸೃಷ್ಟಿಕರ್ತನ ತೀರ್ಮಾನ ಬೇರೆಯೇ ಆಗಿತ್ತು. ಅವನ ಇಚ್ಛೆಯೇ ಅಂತಿಮ.
ಬದುಕಿನ ಎಲ್ಲಾ ಸಂಕಟದಲ್ಲೂ ಮತ್ತು ಸಂಕಷ್ಟದಲ್ಲೂ ನಾನು ತುಂಬಾ ನೊಂದಿದ್ದೇನೆ. ಆದರೂ ನನ್ನ ವೃತ್ತಿಯಲ್ಲಿ ಯಾವುದೇ ಕಳಂಕ ಮತ್ತು ಅಸತ್ಯದ ಹಾದಿಯನ್ನು ನಾನು ಆಯ್ಕೆ ಮಾಡಿರಲಿಲ್ಲ. ಸತ್ಯವನ್ನು ಅದರ ನಿಜಾರ್ಥದಲ್ಲಿ ಜನರ ಮುಂದಿಡಲು ನಾನು ಹಿಂದೇಟು ಹಾಕಿರಲಿಲ್ಲ. ನಮ್ಮನ್ನು ನಿರ್ಮೂಲನ ಮಾಡಲು ಸಂಕಲ್ಪ ಮತ್ತು ಪ್ರತಿಜ್ಞೆ ಮಾಡಿದವರೊಂದಿಗೆ ಮೌನ ವಹಿಸಿದವರು, ಉಸಿರು ಬಿಗಿಹಿಡಿದವರು, ನಮ್ಮ ಮಕ್ಕಳು ಮತ್ತು ಸ್ತ್ರೀಯರ ಮಾರಣಹೋಮ ಮತ್ತು ಅವುಗಳ ಅವಶೇಷಗಳನ್ನು ನೋಡಿ ಹೃದಯ ಕಂಪಿಸದವರು, ಒಂದೂವರೆ ವರ್ಷಗಳಿಂದ ನಮ್ಮ ಜನತೆ ಅನುಭವಿಸುತ್ತಿರುವ ವಂಶಹತ್ಯೆಯನ್ನು ಮಾಡುವ ಮತ್ತು ಅದನ್ನು ಪ್ರೋತ್ಸಾಹಿಸುವವರ ವಿರುದ್ಧ ಸೃಷ್ಟಿಕರ್ತನು ಸಾಕ್ಷಿಯಾಗಲಿ.
ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ಹೃದಯ ಮಿಡಿತವಾದ ಫೆಲೆಸ್ತೀನ್ ಅನ್ನು ನಾನು ನಿಮಗೆ ವಹಿಸುತ್ತಿದ್ದೇನೆ. ಸ್ವತಂತ್ರ ಫೆಲೆಸ್ತೀನಿನ ಕನಸು ಮತ್ತು ಸುರಕ್ಷಿತವಾಗಿ ಮತ್ತು ಶಾಂತಿ ಹಾಗೂ ಸಮಾಧಾನದಿಂದ ಬದುಕುವ ಅವಕಾಶವನ್ನು ನಿಷೇಧಿಸಲ್ಪಟ್ಟ ಫೆಲೆಸ್ತೀನ್ ಜನತೆಯ ಮತ್ತು ಪುಟ್ಟ ಮಕ್ಕಳ ಹಾಗೂ ಮರ್ದಿತರನ್ನು ನಾನು ನಿಮಗೆ ಬಿಟ್ಟು ಹೋಗುತ್ತಿದ್ದೇನೆ. ಅವರ ಪವಿತ್ರವಾದ ಶರೀರಗಳು ಮತ್ತು ಅವಶೇಷಗಳು ಗಾಝದ ಬಿರುಕುಬಿಟ್ಟ ಮತ್ತು ಹುಡಿ ಹುಡಿಯಾಗಿ ನೆಲಕ್ಕಪ್ಪಳಿಸಿದ ಕಟ್ಟಡಗಳ ರಾಶಿಗಳ ಮಧ್ಯೆ ಗುರುತು ಪತ್ತೆ ಹಚ್ಚಲ್ಪಡದ ರೀತಿಯಲ್ಲಿ ಅಪ್ಪಚ್ಚಿಯಾಗಿ ಬಿದ್ದುಹೋಗಿವೆ. ಗಡಿ ರೇಖೆಯಲ್ಲಿ ನಿರ್ಬಂಧಗಳ ಕಾರಣದಿಂದ ತಡೆಯಲ್ಪಡಬಾರದೆಂದೂ ನಿಯಂತ್ರಣದ ಕಾರಣದಿಂದ ಮೌನ ವಹಿಸಬಾರದೆಂದೂ ನಾನು ನಿಮಗೆ ಉಪದೇಶಿಸುತ್ತಿದ್ದೇನೆ.
ನಮ್ಮ ಕೈಯಿಂದ ಕಿತ್ತು ತೆಗೆದ ಫೆಲೆಸ್ತೀನ್ ಎಂಬ ಮಾತೃಭೂಮಿಯ ಗೌರವ ಮತ್ತು ಅಭಿಮಾನ ಹಾಗೂ ಸ್ವಾತಂತ್ರ್ಯದ ಪ್ರಕಾಶವಾಗುವ ರೀತಿಯಲ್ಲಿ ನೀವು ಅದರ ವಿಮೋಚನೆಯ ವಾಹಕರಾಗಬೇಕು. ನನ್ನ ಕುಟುಂಬ ಮತ್ತು ನನ್ನ ಬದುಕಿನ ಕಣ್ಣು ಎಂದು ವಿಶ್ಲೇಷಿಸುವ ನನ್ನ ಮುದ್ದಿನ ಮಗಳು ಶಾಮ್ ಇದುವರೆಗೂ ಕನಸು ಕಾಣದಿದ್ದ ಅವಳನ್ನು ನಾನು ನಿಮ್ಮ ಕೈಗಿಡುತ್ತಿದ್ದೇನೆ. ನನ್ನ ಅಮ್ಮನನ್ನ ನಿಮಗೆ ವಹಿಸಿಕೊಡುತ್ತಿದ್ದೇನೆ. ಅವರ ಪ್ರಾರ್ಥನೆ ನನಗೆ ಅನುಗ್ರವಾದೀತು. ನನ್ನ ಪ್ರಿಯ ಪತ್ನಿ ಉಮ್ಮು ಸಲಾಹ್ ಬಯಾನ್ ಳನ್ನು ಕೂಡ ನಾನು ನಿಮಗೆ ವಹಿಸಿಕೊಡುತ್ತಿದ್ದೇನೆ. ಯುದ್ಧ ನಮ್ಮಿಬ್ಬರನ್ನು ತಿಂಗಳುಗಳ ಕಾಲ ಬೇರ್ಪಡಿಸಿತು. ಆದರೂ ಅವಳು ಸನ್ನಿವೇಶವನ್ನರಿತು ಓಲಿವ್ ವೃಕ್ಷದ ಹಾಗೆ ಗಟ್ಟಿಯಾಗಿ ನಿಂತಳು. ಸೃಷ್ಟಿಕರ್ತನ ಹೊರತಾಗಿ ನೀವು ಅವಳನ್ನು ಸುತ್ತುವರಿದು ಅವಳ ಸಂರಕ್ಷಣೆಯನ್ನು ವಹಿಸಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇನೆ.
ನನಗೆ ತಪ್ಪು ಸಂಭವಿಸಿದ್ದರೆ ನೀವು ನನಗೆ ಕ್ಷಮಿಸಬೇಕು. ನಾನು ನನ್ನ ಕರಾರನ್ನು ಪಾಲಿಸಿದ್ದೇನೆ. ನಾನು ವಹಿಸಿರುವ ದೌತ್ಯವನ್ನು ಚೆನ್ನಾಗಿ ನಿಭಾಯಿಸಿದೆನೆಂಬ ಸಂತೃಪ್ತಿ ನನಗಿದೆ. ಗಾಝವನ್ನು ನೀವೆಂದೂ ಮರೆಯಬಾರದು. ಅದರ ವಿಮೋಚನೆಗಾಗಿ ಮತ್ತು ಸ್ವತಂತ್ರ ಫೆಲೆಸ್ತೀನ್ ಗಾಗಿ ಹಾಗೂ ಫೆಲೆಸ್ತೀನ್ ಜನತೆ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಸುಮಾರು ಒಂದುವರೆ ವರ್ಷದಿಂದ ಫೆಲೆಸ್ತೀನ್ ಜನತೆ ಇಸ್ರೇಲಿನ ವಂಶಹತ್ಯೆ, ಆಹಾರೋತ್ಪನ್ನಗಳ ತಡೆ, ನಿರಂತರ ಮರ್ದನ, ಲೈಂಗಿಕ ದೌರ್ಜನ್ಯಗಳಿಂದ ಕಂಗೆಟ್ಟು ಹೋಗಿದ್ದಾರೆ. ವಿಶ್ವಸಂಸ್ಥೆ ಮತ್ತು ವಿಶ್ವ ಮಾನವ ಹಕ್ಕು ಹೋರಾಟಗಾರರು ಅಸಾಹಾಯಕರಾಗಿದ್ದಾರೆ. ಇಸ್ರೇಲ್ ಮತ್ತು ಅದಕ್ಕೆ ಬೆನ್ನೆಲುಬಾಗಿ ನಿಂತ ಅಮೇರಿಕ ವಂಶಹತ್ಯೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವೆಲ್ಲವನ್ನೂ ಮೂಕವಾಗಿ ನೋಡುತ್ತಿರುವ ಜಗತ್ತಿನ ಇತರೆಲ್ಲಾ ಸ್ವತಂತ್ರ ರಾಷ್ತ್ರಗಳು ಮೌನವಹಿಸಿವೆ. ಗಾಝ ನಗರದಲ್ಲಿ ಇನ್ನು ಬಾಂಬ್ ವರ್ಷಿಸಲು ಸ್ಥಳವೇ ಇಲ್ಲ ಎಂಬಷ್ಟರ ಮಟ್ಟಿಗೆ ನಶಿಸಿ ಹೋಗಿವೆ.
ಗಾಝದ ಜನರಿಗೆ ಪತ್ರಕರ್ತರೆಂದರೆ ಎಲ್ಲಿಲ್ಲದ ಸಿಟ್ಟು. ಆದಕ್ಕೆ ಕಾರಣವೂ ಇದೆ. ಸುಳ್ಳು ಸುದ್ಧಿ ಮತ್ತು ಇಸ್ರೇಲ್ ಕಿರಾತಕರು ನಿರಂತರವಾಗಿ ಸುರಿಸುವ ಬಾಂಬರ್ಗಳು ಮತ್ತು ಮಿಸೈಲ್ಗಳಿಂದ ಸಂಕಷ್ಟದಿAದ ಬದುಕು ಮುನ್ನಡೆಸುತ್ತಿರುವ ಫೆಲೆಸ್ತೀನಿಯರಿಗೆ ಆಹಾರದ ಅಲಭ್ಯತೆಯನ್ನು ಕೂಡ ಸರಿಯಾದ ರೀತಿಯಲ್ಲಿ ವಾರ್ತೆ ನೀಡದಿರುವುದೇ ಅದಕ್ಕೆ ಕಾರಣ. ಮಾತ್ರವಲ್ಲ ಅವರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಾ ಮಹಿಳೆಯರ ಮತ್ತು ಮಕ್ಕಳ ವಂಶ ಹತ್ಯೆಯನ್ನು ವಿಜೃಂಭಿಸುವ ಪತ್ರಕರ್ತರನ್ನು ಅವರಿಗೆ ಕಂಡರಾಗದು. ಆದರೆ ಅನಸ್ ಇವೆಲ್ಲದಕ್ಕಿಂತಲೂ ವಿಭಿನ್ನ. ಅವರು ಸತ್ಯದ ವಾಹಕರು. ಫೆಲೆಸ್ತೀನಿ ಜನತೆಯನ್ನು ಹತ್ತಿರದಿಂದ ತಿಳಿದವರು ಹಾಗೂ ತನ್ನವರಿಗಾಗಿ ಸದಾ ಮಿಡಿಯುವ ಹೃದಯವಂತರು.
ಇತ್ತೀಚಿಗೆ ವರದಿ ಮಾಡುತ್ತಿದ್ದ ವೇಳೆ ಅನಸ್ ಬಳಲಿ ತನ್ನ ಕ್ಯಾಮಾರದೊಂದಿಗೆ ಕೆಳಗೆ ಬಿದ್ದಾಗ ಜನರು ಈ ರೀತಿ ಆಡುತ್ತಿದ್ದರು. ಅನಸ್ ಎದೆಗುಂದದಿರು, ಸ್ಥೆöÊರ್ಯದಿಂದಿರು. ಧೀರವಾಗಿ ಮುನ್ನುಗ್ಗಿ ದೌತ್ಯವನ್ನು ನಿರ್ವಹಿಸು. ಅನಸ್ ನಂತಹ ನೂರಾರು ಅನಸ್ಗಳು ಫೆಲೆಸ್ತೀನ್ನಲ್ಲಿ ಹುಟ್ಟಿ ಬರಬಹುದು ಆದರೆ ಅವರಾರು ಅನಸ್ಗಳಾಗಲು ಸಾಧ್ಯವಿಲ್ಲ. ಏಕೆಂದರೆ ಅನಸ್ರ ವ್ಯಕ್ತಿತ್ವ, ಆತ್ಮ ಸ್ಥೆöÊರ್ಯ ಹಾಗೂ ವೀರಾವೇಶದಿಂದ ತನ್ನ ಕೆಲಸವನ್ನು ನಿರ್ವಹಿಸುವ ಶೈಲಿ ಅದ್ಭುತವಾಗಿತ್ತು.
ಜನವರಿ ತಿಂಗಳಲ್ಲಿ ಕದನ ವಿರಾಮ ಘೋಷಿಸಲಾಗಿತ್ತು. ಆದರೆ ಇಸ್ರೇಲ್ ಅದನ್ನು ಉಲ್ಲಂಘಿಸಿ ನಿರಂತರವಾಗಿ ಬಾಂಬ್ ಗಳನ್ನು ಸುರಿದ ಪರಿಣಾಮ ಅನಸ್ ಮತ್ತು ಅವರ ಸ್ನೇಹಿತರು ಸೇರಿದಂತೆ ಒಟ್ಟು ಐದು ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ 28 ವರ್ಷ ಪ್ರಾಯದ ಅನಸ್ ಗಾಝದ ಹೆಸರಾಂತ ಪತ್ರಕರ್ತನಾಗಿದ್ದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ನಿಷೇಧ ಹೇರಿದ್ದರೂ ಬಹಳ ಅಚ್ಚುಕಟ್ಟಾಗಿ ಧೈರ್ಯದಿಂದ ಅನಸ್ ತನ್ನ ದೌತ್ಯವನ್ನು ನಿರ್ವಹಿಸುತ್ತಿದ್ದರು. ಅವರ ವಧೆ ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಪ್ರತಿಭಟನೆಗೆ ಕಾರಣವಾಗಿದೆ.
ಇಂದಿನ ಜಗತ್ತು ರಕ್ತದಾಹಿಗಳ ರಣಭೂಮಿಯಾಗಿದೆ, ಯುದ್ಧ ಸರಕು ಮತ್ತು ಆಯುಧ ವ್ಯಾಪಾರಿಗಳ ಮಾರುಕಟ್ಟೆಯಾಗಿದೆ. ಮಾನವೀಯತೆ ನಶಿಸಿ ಹೋದ, ವಂಶಹತ್ಯೆಯನ್ನೇ ಬಂಡವಾಳವಾಗಿಸಿದ ದುರುಳರು ಇಂದು ಜಗತ್ತನ್ನು ಆಳುತ್ತಿದ್ದಾರೆ. ಅದನ್ನು ನೋಡುತ್ತಾ ಮೌನ ಸಮ್ಮತಿಯನ್ನು ನೀಡುವವರು ಅದಕ್ಕಿಂತಲೂ ನೀಚರು. ಅಸಹಾಯಕರಾದ ಬಡಪಾಯಿಗಳನ್ನು ನಿಷ್ಕಾರುಣ್ಯವಾಗಿ ವಧಿಸುವ ವ್ಯಾಘ್ರರಿಗೆ ಗಾಝದ ಜನತೆ ತಕ್ಕ ಪಾಠ ಕಲಿಸುವಂತಾಗಲಿ ಮತ್ತು ಅದಕ್ಕಾಗಿ ಲಕ್ಷಾಂತರ ಅನಸ್ಗಳು ಜನ್ಮ ತಾಳಲಿ. ತನ್ನ ಹೊಣೆಗಾರಿಕೆಯನ್ನು ನಿಭಾಯಿಸಿ ವೀರ ಮರಣವನ್ನಪ್ಪಿದ ಹುತಾತ್ಮತೆಯ ಉತ್ತುಂಗಕ್ಕೇರಿದ ಅನಸ್ರಂತಹ ಮುತ್ತುರತ್ನಗಳು ಸಮಾಜಕ್ಕೆ ಮಾದರಿಯಾಗಲಿ ಎಂಬ ಹಾರೈಕೆ.
ಅಬ್ದುಸ್ಸಲಾಮ್ ದೇರಳಕಟ್ಟೆ