ಮುಹಮ್ಮದರು(ಸ) ಪ್ರವಾದಿಯಾಗಿದ್ದರು. ದೇವನು ಇವರನ್ನು ಜನರಿಗೆ ದೇವನ ಆದೇಶ ಮತ್ತು ಸದ್ವಿವೇಕವನ್ನು ಕಲಿಸಿ ಕೊಡಲಿಕ್ಕಾಗಿ ಕಳುಹಿಸಿಕೊಟ್ಟರು. ಇವರು ಜಗತ್ತು ಕಂಡ ಅದ್ವಿತೀಯ ಶಿಕ್ಷಕರಾಗಿದ್ದರು. ಮುಹಮ್ಮದರು ಮೊತ್ತ ಮೊದಲು ಮದೀನಾದ ಮಸೀದಿಯ ಒಂದು ಭಾಗದಲ್ಲಿ ಶಿಕ್ಷಣ ಕೇಂದ್ರವನ್ನು ಆರಂಭಿಸಿದರು. ಅಲ್ಲಿ ಸರಿ ಸುಮಾರು 70ರಿಂದ 80 ವಿದ್ಯಾರ್ಥಿಗಳಿದ್ದರು. ಪ್ರವಾದಿಯವರಿಂದ ನೇರವಾಗಿ ಶಿಕ್ಷಣ ಮತ್ತು ತರಬೇತಿಯನ್ನು ಗಳಿಸಿದವರಿಗೆ ಅವರ ಪ್ರತಿಭೆ ಸಾಮರ್ಥ್ಯಗಳ ಆಧಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಅವರ ಪೈಕಿ ಕೆಲವರು ಶಿಕ್ಷಕರಾಗಿಯೇ ಮುಂದುವರಿದರು. ಕೇವಲ ಮದೀನಾದಲ್ಲಿ ಮಾತ್ರವಲ್ಲ ಜಗತ್ತಿನ […]