ಹೆಣ್ಣು ಮಕ್ಕಳ ಸಾಧನೆಗೆ ಹೆಮ್ಮೆ ಪಡುವ ಬದಲಿಗೆ ಕೆಲವರು ಅದನ್ನು ಅಪಮಾನವೆಂದೂ, ಹೆತ್ತವರ ಗೌರವಕ್ಕೆ ಭಂಗವೆಂದು ಪರಿಗಣಿಸುತ್ತಿರುವುದು ಎಷ್ಟೊಂದು ದುಃಖದ ಸಂಗತಿಯಾಗಿದೆ. ಗುರುಗಾಂವ್‌ನಲ್ಲಿ ಟೆನಿಸ್ ಆಟಗಾರ್ತಿಯ ಹತ್ಯೆ, ಸಾಂಸ್ಕೃತಿಕ ಮೌಲ್ಯಗಳ ಬಲಿ ಸಮಾಜದ ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಅಲ್ಲ; ಅದು ಮಾನವೀಯ ಮೌಲ್ಯಗಳ ಗಾಢ ಬೆಳೆತವನ್ನೂ ಒಳಗೊಂಡಿರಬೇಕು.ಇತ್ತೀಚೆಗೆ ಹರಿಯಾಣದ ಗುರುಗಾಂವ್‌ನಲ್ಲಿ ನಡೆದ ದಾರುಣ ಘಟನೆ ಈ ಮಾತಿಗೆ ಉಜ್ವಲ ಸಾಕ್ಷಿ. ರಾಷ್ಟ್ರಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ಅವಳನ್ನು ಅವಳ ತಂದೆ ದೀಪಕ್ […]