ಅನುಪಮ ಮಹಿಳಾ ಮಾಸಿಕದ ನೂತನ ಪ್ರಧಾನ ಸಂಪಾದಕಿಯಾಗಿ “ಸಬೀಹ ಫಾತಿಮಾ”ರನ್ನು ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ನೇಮಕ ಮಾಡಿದೆ., ಕಳೆದ 25 ವರ್ಷಗಳಿಂದ ಅನುಪಮದ ಪ್ರಧಾನ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದ ಶಹನಾಝ್ ಎಂ ಅವರ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಕ್ಕೆ ಸಬೀಹ ಫಾತಿಮಾ ಅವರನ್ನು ನೇಮಕ ಮಾಡಲಾಗಿದೆ. ಕಳೆದ 25 ವರ್ಷಗಳಲ್ಲಿ ಶಹನಾಝ್ ಎಂ. ಅವರು ಅತ್ಯುತ್ತಮವಾಗಿ ಹೊಣೆಗಾರಿಕೆ ನಿರ್ವಹಿಸಿದ್ದಾರೆ ಎಂದು ಟ್ರಸ್ಟ್ ಸ್ಮರಿಸಿದೆ. ಸಬೀಹ ಫಾತಿಮಾ ಅವರು ಅನುಪಮ ಮಾಸಿಕದ ಸ್ಥಾಪಕ ಉಪಸಂಪಾದಕಿಯಾಗಿದ್ದು, ಲೇಖನಗಳು ಮತ್ತು ತಮ್ಮ ಭಾಷಣಗಳ […]










