ಪುತ್ತೂರು (ದಕ್ಷಿಣ ಕನ್ನಡ): ಶಾಯಿಯಲ್ಲಿ ಅದ್ದುವ ಪೆನ್ ಬಳಸಿ, ಕುರ್ ಆನ್ ಬರೆದು ತಾಲ್ಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದಾರೆ. ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್ ಅವರು ಪವಿತ್ರ ಕುರ್‌ಆನ್‌ನ 30 ಕಾಂಡಗಳನ್ನು ಕೈಯಲ್ಲಿ ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಸಾಧನೆಯ ಹಿಂದೆ ಸುಮಾರು 5 ವರ್ಷಗಳ ನಿರಂತರ ಪರಿಶ್ರಮವಿದೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್ ಹಾಜಿ ಮತ್ತು ಝಹ್‌ರಾ ಜಾಸ್ಮಿನ್ ದಂಪತಿಯ ಪುತ್ರಿಯಾಗಿರುವ […]