ಮಬ್ಬು ಬೆಳಕಿನ ನಿಯಂತ್ರಣ ಕೊಠಡಿಗಳಲ್ಲಿ ಕುಳಿತಿದ್ದು, ದಾಳಿಯ ಚಲನ ವಲನಗಳನ್ನು ವಿಶ್ಲೇಷಿಸುತ್ತಾ, ನಿಯಂತ್ರಿಸುತ್ತಾ, ಉಡಾವಣೆ ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಾ, ಅತ್ಯಂತ ಶಿಸ್ತು ಮತ್ತು ನಿಖರತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದದ್ದು ಹಿಜಾಬ್ ಧರಿಸಿದ ಇರಾನಿನ ಮಹಿಳೆಯರು. ಖತಮ್ ಅಲ್-ಅಂಬಿಯಾ ಏರೋಸ್ಪೇಸ್ ಸಂಸ್ಥೆಗಳಲ್ಲಿ ಇರಾನಿನ ಮಹಿಳೆಯರು ಡೇಟಾ ವಿಶ್ಲೇಷಕರು, ಸಿಸ್ಟಂ ಪ್ರೋಗ್ರಾಮರ್‌ಗಳು ಮತ್ತು ನಿಯಂತ್ರಣ ಕೊಠಡಿಗಳ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಾಫ್ಟ್ವೇರ್ ವ್ಯವಸ್ಥೆಗಳನ್ನು, ಉಪಗ್ರಹ ನಕ್ಷೆಗಳನ್ನು ಮತ್ತು ಉಡಾವಣೆ ಸಮನ್ವಯಗಳನ್ನು ನಿಖರವಾಗಿ ನಿರ್ವಹಿಸುತ್ತಿದ್ದಾರೆ. ಅವರು ಇರಾನಿನ ರಕ್ಷಣಾ ರಚನೆಯೊಳಗೆ ಸಕ್ರಿಯ ಮತ್ತು […]