ಸುಲೈಮಾನ್ ಅಲ್-ಉಬೈದ್ – ಪ್ಯಾಲೆಸ್ಟೀನಿಯನ್ ಪೀಲೆ ಎಂಬ ಪ್ರಸಿದ್ಧಿ ಪಡೆದ ಹೆಮ್ಮೆಯ ಆಟಗಾರ. ಗಾಝಾ ಸಮುದ್ರ ಕಿನಾರೆಯ ಮರಳಿನ ಮೇಲೆ ಚೆಂಡನ್ನು ಒದೆಯಲು ಪ್ರಾರಂಭಿಸಿ, ನಂತರ ಬೀಚ್ ಸರ್ವೀಸಸ್ ಕ್ಲಬ್ನಲ್ಲಿ ಗಾಝಾ ಸ್ಪೋರ್ಟ್ಸ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದವರು. ರಾಷ್ಟಿçÃಯ ತಂಡಕ್ಕಾಗಿ ನೂರಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಸುಲೈಮಾನ್, 2010ರ ಪಶ್ಚಿಮ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಯೆಮೆನ್ ವಿರುದ್ಧದ ತನ್ನ ಕತ್ತರಿ ಕಿಕ್ ಗೋಲಿನೊಂದಿಗೆ ಮತ್ತೆ ಸೆಲೆಬ್ರಿಟಿಯಾದರು. ಅವರು ಸ್ಥಳೀಯ ಮಕ್ಕಳಿಗೆ ತರಬೇತುದಾರರಾಗಿದ್ದಾರಲ್ಲದೆ 24 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ಯಾಲೆಸ್ಟೀನಿಯನ್ ಧ್ವಜವನ್ನು ಹೊತ್ತಿದ್ದರು.
ಇಷ್ಟೆಲ್ಲಾ ಇದ್ದು ಕೊನೆಗೆ ಏನಾಯಿತು? ಅವರು ಹುಟ್ಟಿದ ಸ್ಥಳ ಗಾಝಾ ಆಗಿಹೋಯಿತು. ಕಲೆ/ಕ್ರೀಡೆಗಳ ಮೇಲಿನ ಪ್ರೀತಿಯು ಮಾನವೀಯತೆ ಹೊಂದಿರುವವರಿಗೆ ಮಾತ್ರ ಇರುವ ಗುಣಗಳಾಗಿವೆ. ಹಸಿವಿನ ಬೆಂಕಿಯ ವಿರುದ್ಧ ಹೋರಾಡುತ್ತಿರುವ ಗಾಝಾದ ಮಕ್ಕಳನ್ನು ಜನಾಂಗೀಯ ಬಾಣಲೆಯಲ್ಲಿ ಉರಿಯುವ ಪೈಶಾಚಿಕ ವೀರರಿಗೆ ಫುಟ್ಬಾಲ್ ಆದರೇನು? ಅದರ ಆಟಗಾರ ಆದರೇನು ಮುಗ್ಧ ಮಕ್ಕಳಾದರೇನು ಎಲ್ಲವೂ ಒಂದೇ, ಸುಲೈಮಾನ್ ಅಲ್-ಉಬೈದ್ ಅವರ ದೃಷ್ಟಿಯಲ್ಲಿ ಕೇವಲ ಮರಣ ಕೂಪಕ್ಕೆ ಒದೆಯಲ್ಪಡಬೇಕಾದ ಓರ್ವ ಗಾಝಾದ ವ್ಯಕ್ತಿ ಮಾತ್ರ. ಇತ್ತೀಚೆಗೆ ಫೆಲೆಸ್ತೀನ್ನಲ್ಲಿ ಇಸ್ರೇಲ್ ನಡೆಸಿದ ಶೆಲ್ ದಾಳಿಯಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ವಿಶ್ವವಿಖ್ಯಾತ ಆಟಗಾರ ಕೊಲ್ಲಲ್ಪಟ್ಟರು. ಫೆಲಸ್ತೀನ್ನಲ್ಲಿ ಕೊಲ್ಲಲ್ಪಟ್ಟ 61400 ಮನುಷ್ಯರ ಪೈಕಿ ಒಂದು ಅಂಕೆ ಆದರು.
ಫೆಲೆಸ್ತೀನ್ನಲ್ಲಿ ಹುತಾತ್ಮರಾದ ಸಾವಿರಾರು ಫೆಲೆಸ್ತೀನಿಯನ್ನರಂತೆ, ಸುಲೇಮಾನ್ ಸುಂದರ ಜೀವನದ ಕನಸು ಕಂಡಿದ್ದರು. ಫುಟ್ಬಾಲ್ ಅವರ ಸರ್ವಸ್ವವಾಗಿತ್ತು. ಗಾಝಾ ಯುದ್ಧಭೂಮಿಯಲ್ಲಿ ಇಸ್ರೇಲಿ ಬೆಂಕಿಯ ಮಳೆ ಸುರಿಯುತ್ತಿದ್ದಾಗ ಫುಟ್ಬಾಲ್ ಆಡುತ್ತಿದ್ದ ಸುಲೇಮಾನ್ಗೆ, ಅವನ ಹೆಂಡತಿ ದುವಾ ಮತ್ತು ಐದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಜವಾಬ್ದಾರಿ ಇತ್ತು ಐವತ್ತು ವರ್ಷದವರೆಗೆ ಫುಟ್ಬಾಲ್ ಆಡುವುದು, ತನ್ನ ಮಕ್ಕಳನ್ನು ರಾಷ್ಟ್ರ ಹೆಮ್ಮೆಪಡುವಂತಹ ವ್ಯಕ್ತಿತ್ವಗಳಾಗಿ ಬೆಳೆಸುವುದು – ಇವು ನಲವತ್ತೊಂದು ವರ್ಷದ ಸುಲೇಮಾನ್ ಕನಸಾಗಿತ್ತು. ಕಲಾವಿದರು, ಕ್ರೀಡಾಪಟುಗಳು, ವಿವಿಧ ತಜ್ಞರು ಮತ್ತು ಮಾಧ್ಯಮ ಕಾರ್ಯಕರ್ತರು ಸೇರಿದಂತೆ ಫೆಲೆಸ್ತೀನಿಯನ್ನರು ಸಾವು ಬರುವವರೆಗೂ ಇಂತಹ ಸುಂದರ ಕನಸಿನೊಂದಿಗೆ ಬದುಕುತ್ತಿರುತ್ತಾರೆ.
ಕುಟುಂಬದ ಹಸಿವು ತಣಿಸಲು ಸುಲೇಮಾನ್ ನಿರಾಶ್ರಿತರ ಶಿಬಿರದ ಬಳಿಯ ಆಹಾರ ವಿತರಣಾ ಕೇಂದ್ರದಲ್ಲಿ ಸರದಿಯಲ್ಲಿ ಕಾಯುತ್ತಿದ್ದರು. ಆಹಾರಕ್ಕಾಗಿ ಸರದಿ ಸಾಲಿನಲ್ಲಿ ನಿಂತವರ ಮೇಲೆ ಪ್ರಪಂಚದ ಮೌನ ಬೆಂಬಲದೊಂದಿಗೆ ಜಿಯೋನಿಸ್ಟ್ ಸೈನ್ಯವು ಕ್ಷಿಪಣಿಗಳ ಮಳೆ ಸುರಿಸಿದಾಗ ಕೊಲ್ಲಲ್ಪಟ್ಟ 1,500 ಜನರಲ್ಲಿ ಸುಲೇಮಾನ್ ಅಲ್-ಒಬೈದ್ ಒಬ್ಬರು. ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ (UEFA) ಕಾಟಾಚಾರಕ್ಕೆ ಎರಡು ಗೆರೆಯ ಸಂತಾಪ ಸೂಚಿಸಿತು. “ಫೆಲಸ್ತೀನ್ ಪೀಲೆ ಸುಲೇಮಾನ್ ಅಲ್-ಒಬೈದ್ಗೆ ಭಾವಪೂರ್ಣ ವಿದಾಯ ಅವರು ಕತ್ತಲೆಯ ಕಾಲದಲ್ಲೂ ಅಸಂಖ್ಯಾತ ಮಕ್ಕಳಿಗೆ ಭರವಸೆಯ ಕಿರಣ ಮೂಡಿಸಿದ ಪ್ರತಿಭಾವಂತ” ಎಂದು UEFAಯ Xನಲ್ಲಿ ಬರೆಯಿತು. ಈ ಸಂದೇಶವು ಸುಲೇಮಾನ್, ಗಾಝಾವನ್ನು ಪ್ರೀತಿಸುವ ಮತ್ತು ಮಾನವೀಯತೆಯನ್ನು ಪ್ರೀತಿಸುವವರಿಗೆ ಅರಗಿಸಿಕೊಳ್ಳಲಾಗಲಿಲ್ಲ.
ಸುಲೇಮಾನ್ ನಿವೃತ್ತರಾದದ್ದಲ್ಲ, ಅವರು ವೃದ್ಧಾಪ್ಯದಿಂದ ಸಾಯಲಿಲ್ಲ, ಅವರು ಮೈದಾನದಲ್ಲಿ ಆಘಾತದಿಂದ ಸತ್ತದ್ದಲ್ಲ. ಅವರನ್ನು ಇಸ್ರೇಲ್ ಎಂಬ ಕ್ರೂರ ಸೈನ್ಯವು ಕೊಂದು ಹಾಕಿದ್ದು ಎಂಬುದು ಹಾಡು ಹಗಲಿನಂತೆ ಸ್ಪಷ್ಟವಾಗಿದ್ದರೂ ಕೊಂದ ಹಂತಕರ ಹೆಸರನ್ನು ಉಲ್ಲೇಖಿಸಲು ಹಿಂಜರಿಕೆ ಏಕೆ ಎಂಬುದೇ ಎಲ್ಲರ ಪ್ರತಿಕ್ರಿಯೆಯಾಗಿತ್ತು. ಫೆಲೆಸ್ತೀನ್ನ ಎಲ್ಲಾ ಕಹಿ ಮತ್ತು ನೋವನ್ನು ತನ್ನ ಎದೆಗೆ ಹಾಕಿಕೊಂಡಿರುವ ಲಿವರ್ಪೂಲ್ನ ಈಜಿಪ್ಟ್ ತಾರೆ ಮೊಹಮ್ಮದ್ ಸಲಾಹ್, UEFA ಅಥವಾ ಅವರಂತೆಯೇ ನಿದ್ರಿಸುತ್ತಿರುವ ಇಡೀ ಜಗತ್ತನ್ನು ಕೇಳುತ್ತಿದ್ದಾರೆ, “ಅವರು ಎಲ್ಲಿ, ಹೇಗೆ ಮತ್ತು ಏಕೆ ಸತ್ತರು ಎಂದು ನೀವು ನಮಗೆ ಹೇಳಬಲ್ಲಿರಾ?” ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದ ಸಂದೇಶವಾಗಿತ್ತದು, ಇಸ್ರೇಲಿಗೆ ಮಾಮೂಲಿಯಾಗಿದ್ದ ಒಂದು ಹತ್ಯೆಯನ್ನು ಜಗತ್ತನ್ನು ನಡುಗಿಸುವ ಪ್ರಶ್ನೆಯನ್ನಾಗಿ ಪರಿವರ್ತಿಸಲು ಇದಕ್ಕೆ ಸಾಧ್ಯವಾಯಿತು.
ಜಿಯೋನಿಸ್ಟ್ ಭಯೋತ್ಪಾದನೆಯ ವಿರುದ್ಧ ಮೊದಲ ದಿನದಿಂದಲೂ ಸಲಾಹ್ ಫೆಲಸ್ತೀನಿಯನ್ನರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.
ಮುಗ್ಧ ಜೀವಗಳು ಸೇರಿದಂತೆ 62,000ಕ್ಕೂ ಹೆಚ್ಚು ಮಾನವ ಜೀವಗಳ ಸಾಮೂಹಿಕ ಹತ್ಯೆಯ ಹೊರತಾಗಿಯೂ ರಕ್ತಪಿಪಾಸು ಆಗಿಯೇ ತನ್ನ ಆಕ್ರಮಣವನ್ನು ಮುಂದುವರಿಸುತ್ತಿರುವ ಇಸ್ರೇಲ್ ಅನ್ನು ತಹಬಂದಿಗೆ ತರಲು ಜಗತ್ತಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಅವರ ಪ್ರಶ್ನೆ.
ಅತ್ಯಂತ ಸಣ್ಣ ಪ್ರದೇಶದಲ್ಲಿ. ಯುದ್ಧ ಭೀತಿಯ ನಡುವೆ, ನಿರಂತರ ದಿಗ್ಬಂಧನದ ನಡುವೆಯೂ ಅದನ್ನು ಲೆಕ್ಕಿಸದೆ ತಾವು ಇಷ್ಟಪಟ್ಟ ರಂಗಗಳಲ್ಲಿ ಗಾಝಾದ ಜನತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅತ್ಯುತ್ತಮ ವೈದ್ಯಕೀಯ ತಜ್ಞರು, ಪ್ರಸಿದ್ಧ ಶಿಕ್ಷಣ ತಜ್ಞರು, ಅಂತರಾಷ್ಟಿçÃಯವಾಗಿ ಗುರುತಿಸಲ್ಪಟ್ಟ ಕಲಾವಿದರು ಮತ್ತು ಪತ್ರಕರ್ತರು ಮರಣ ಭೀತಿಯ ನಡುವೆಯು ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್ಗೆ ತಮ್ಮನ್ನು ಅರ್ಪಿಸಿಕೊಂಡ ಯುವಕರು… ಹೀಗೆ ಗಾಝಾದ ಜನತೆಯು ವಿಶ್ವದ ಅಸಾಧಾರಣ ಹಾಗೂ ಅದ್ಭುತವಾದ ಮಾನವ ಸಂಪನ್ಮೂಲವಾಗಿದೆ.
ಇಸ್ರೇಲ್, ಕ್ಷಿಪಣಿಗಳು ಮತ್ತು ಹಸಿವಿನಿಂದ ಅವರನ್ನು ನಾಶಪಡಿಸುತ್ತಿದೆ ಅವರು ಇಲ್ಲಿಯವರೆಗೆ ಗಾಝಾದಲ್ಲಿ 103 ಮಕ್ಕಳು ಸೇರಿದಂತೆ 421 ಫುಟ್ಬಾಲ್ ಆಟಗಾರರನ್ನು ಕೊಂದಿದ್ದಾರೆ. ದೊಡ್ಡ ಕ್ರೀಡಾಂಗಣಗಳು ಮತ್ತು ಸಣ್ಣವುಗಳು ಸೇರಿದಂತೆ 268 ಕ್ರೀಡಾಂಗಣಗಳನ್ನು ಕೆಡವಿದ್ದಾರೆ. ಝಿಯೋನಿಸ್ಟ್ ನರಮೇಧವು ಗಾಝಾದಲ್ಲಿ ಹತ್ತಾರು ಸಾವಿರ ಮುಗ್ಧ ಜನರನ್ನು ಕೊಲ್ಲುತ್ತಿದೆ. ಹಸಿವು ಹಾಗೂ ಬಾಂಬುಗಳ ಭೀತಿಯ ನಡುವೆ ಅವರು ನಿರ್ಮಿಸಿರುವ ಮಹಾನ್ ಮಾನವ ನಾಗರಿಕತೆಯನ್ನು ಸಹ ನಾಶಪಡಿಸುತ್ತಿದೆ. ಮೊಹಮ್ಮದ್ ಸಲಾಹ್ ಅವರು ಎತ್ತಿರುವ ಪ್ರಶ್ನೆಯು ಒಂದು ಸಣ್ಣ ಬೆರಳನ್ನು ಎತ್ತಲೂ ಕೂಡ ಸಾಧ್ಯವಾಗದೇ ಲೋಕದಲ್ಲಿ ಮೆರೆದಾಡುತ್ತಿರುವ ಅಧಿಕಾರ ಶಾಹಿ ಜಗತ್ತಿನ ಮುಂದೆ, ಅದರ ಕಪಟತೆಯ ವಿರುದ್ಧ ಬೀಸಿದ ಚಾಟಿಯೇಟು ಆಗಿದೆ.
ಮುರ್ಶಿದ್ ಅಲಿ