ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಂಪೂರ್ಣ ಜವಾಬ್ದಾರಿ ಮತ್ತು ಪುರಾವೆಗಳೊಂದಿಗೆ ಚುನಾವಣಾ ಆಯೋಗದ ವಿರುದ್ಧ “ಮತದಾನದಲ್ಲಿ ಅಕ್ರಮ ನಡೆದಿದೆ” ಎಂದು ನೀಡಿರುವ ದೂರಿಗೆ, ಚುನಾವಣಾ ಆಯೋಗವು ನೀಡಿರುವ ಪ್ರತಿಕ್ರಿಯೆಯು ಅನುಮಾನಗಳನ್ನು ಹುಟ್ಟು ಹಾಕುವಂತಿದೆ. ಆಯೋಗದ ಸ್ವಂತ ದಾಖಲೆಗಳು ಮತ್ತು ದತ್ತಾಂಶಗಳನ್ನು ಪರಿಶೀಲಿಸಿ ಆರು ತಿಂಗಳ ಬಳಿಕ ಪತ್ರಿಕಾಗೋಷ್ಠಿಯ ಮೂಲಕ ವಿವರವಾದ ವರದಿಯನ್ನು ರಾಷ್ಟ್ರಕ್ಕೆ ಮಂಡಿಸಿರುವ ರಾಹುಲ್ ಗಾಂಧಿಯವರಿಗೆ ಅಫಿದಾವಿತ್‌ನಲ್ಲಿ ನೀಡುವಂತೆ ಆಯೋಗ ನಿರ್ದೇಶಿಸಿದೆ. ರಾಹುಲ್ ಹೇಳಿದ್ದು ತಪ್ಪು ಎಂದು ಹೇಳಲು […]