12ನೇ ಜೂನ್ 2025ರಂದು ಗುಜರಾತಿನ ಸರದಾರ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನಿಗೆ ಪ್ರಯಾಣಕ್ಕಾಗಿ ಹಾರಾಟ ನಡೆಸಿದ ವಿಮಾನ ದುರಂತ ಅಂತ್ಯ ಕಂಡಿದೆ. ದುರಂತದಲ್ಲಿ 265 ಜೀವಗಳು ಬಲಿಯಾಗಿವೆ ಎಂಬ ಮಾಹಿತಿ ಹೊರ ಬಂದಿದೆ. ಇದು ವಾಯು ಯಾನದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿದೆ.
ಗುಜರಾತಿನ ಅಹಮದಾಬಾದಿನ ಸರದಾರ ವಲ್ಲಭಬಾಯಿ ಪಟೇಲ್ ಅಂತರಾಷ್ಟಿçÃಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಬೋಯಿಂದ್ 787 ಡ್ರೀಮ್ ಲೈನರ್ ಮಧ್ಯಾಹ್ನ 1.30ಕ್ಕೆ ಲಂಡನಿಗೆ ತನ್ನ ಹಾರಾಟ ಪ್ರಾರಂಭಿಸುತ್ತದೆ. 9 ಗಂಟೆಗಳ ಸುದೀರ್ಘ ಪ್ರಯಾಣಕ್ಕೆ ಅಗತ್ಯವಾದ ಇಂಧನವು ವಿಮಾನದಲ್ಲಿತ್ತು. 169 ಭಾರತೀಯರು, 53 ಬ್ರಿಟಿಷರು, 7 ಮಂದಿ ಪೋರ್ಚುಗೀಸರು ಹಾಗೂ ಓರ್ವ ಕೆನಡಾ ಪ್ರಜೆಯು ವಿಮಾನದಲ್ಲಿದ್ದರು. 12 ಮಂದಿ ಸಿಬ್ಬಂದಿಗಳೂ ಇದ್ದರು. 8,200 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಪೈಲಟ್ ಂI – 171 ವಿಮಾಣವನ್ನು ಚಲಾಯಿಸುತ್ತಿದ್ದರು. ಹಾರಾಟ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಸ್ವಲ್ಪವೇ ಎತ್ತರಕ್ಕೇರಿದ ವಿಮಾನವು ಕೆಳಗೆ ಬರುತ್ತದೆ. ಮೇಲ್ಮುಖವಾಗಿ ಹಾರಬೇಕಾಗಿದ್ದ ವಿಮಾನ ಕೆಳ ಮುಖವಾಗುತ್ತದೆ. ರನ್ವೇಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪೈಲಟ್ ನಿಲ್ದಾಣಕ್ಕೆ ವಿಪತ್ತಿನ ಕರೆಯಾದ ಮೇಡೇ'ಯನ್ನು ಮಾಡಿರುತ್ತಾರೆ. ಅದಕ್ಕೆ ಉತ್ತರಿಸಿದ ನಿಲ್ದಾಣದ ಸಿಬ್ಬಂದಿಗೆ ಪೈಲಟ್ ಸಂಪರ್ಕ ದೊರೆಯುವುದಿಲ್ಲ.
ಮೇಡೇ’ ಎನ್ನುವುದು ತೀರಾ ವಿಪತ್ತಿನ ಸಂದರ್ಭದಲ್ಲಿ ಪೈಲಟ್ ಮಾಡುವ ಕರೆಯಾಗಿದೆ. ತನ್ನಿಂದ ನಿಯಂತ್ರಣ ತಪ್ಪುತ್ತಿದೆ ಹಾಗೂ ಅಪಾಯದ ಮುನ್ಸೂಚನೆ ದೊರೆತಾಗ ಪೈಲಟ್ ನಿಲ್ದಾಣಕ್ಕೆ ಈ ಕರೆಯನ್ನು ಮಾಡಿದ್ದರು. ಆದರೆ ಇದಕ್ಕೆ ಸಮರ್ಪಕ ಉತ್ತರ ದೊರೆಯುವ ಮೊದಲೇ ವಿಮಾನ ಪತನಗೊಂಡಿತ್ತು. ಸ್ಫೋಟಗೊಂಡು ದೊಡ್ಡ ಬೆಂಕಿಯುAಡೆಯಾಗಿ ಮಾರ್ಪಟ್ಟಿತ್ತು. ದೀರ್ಘ ಪ್ರಯಾಣಕ್ಕಾಗಿ ಶೇಖರಿಸಿದ್ದ ಇಂಧನ ಅತ್ಯಧಿಕ ಪ್ರಮಾಣದ ಪರಿಣಾಮ ಅಗ್ನಿಯ ಜ್ವಾಲೆಯು ಹೆಚ್ಚಾಗಿತ್ತು. 242 ಪ್ರಯಾಣಿಕರ ಪೈಕಿ ಓರ್ವ ಪವಾಡ ಸದೃಶರಾಗಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ವಿಮಾನ ಅಹಮದಾಬಾದಿನ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲಿನ ಊಟದ ಹಾಲಿಗೆ ಅಪ್ಪಳಿಸಿದ ಪರಿಣಾಮ ಅಲ್ಲಿ ಊಟ ಮಾಡುತ್ತಿದ್ದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ದುರ್ಘಟನೆಗೆ ಬಲಿಯಾಗಿದಾರೆ. 4 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯಿದೆ. ಂI – 171 ವಿಮಾನ ದುರ್ಘಟನೆಯನ್ನು ಕೇವಲ ಒಂದು ದುರ್ಘಟನೆ ಎಂದು ತಳ್ಳಿ ಬಿಡುವಂತಿಲ್ಲ. ವಿಮಾನದ ಒಂದು ಇಂಜಿನ್ ಹಾಳಾದರೆ ಇನ್ನೊಂದು ಇಂಜಿನ್ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವ ಕ್ಷಮತೆಯನ್ನು ಹೊಂದಿರುತ್ತದೆ. ಈ ವಿಮಾನದಲ್ಲಿ ಎರಡೂ ಎಂಜಿನ್ಗಳೂ ಏಕಕಾಲಕ್ಕೆ ಹೇಗೆ ಹಾಳಾದವು? ಸಮಸ್ಯೆ ಎಲ್ಲಿತ್ತು? ವಿಮಾನದ ತಾಂತ್ರಿಕ ಸಮಸ್ಯೆಗಳಾ? ಅಥವಾ ನಿರ್ವಹಣಾ ದೋಷವಾ? ಅಥವಾ ಪೈಲೆಟಿನ ದೋಷವಾ? ಪ್ರಶ್ನೆಗಳಿಗೆ ಉತ್ತರ ದೊರಕಬೇಕಾಗಿದೆ.
ವಿಶ್ವದಾದ್ಯಂತ ಟೇಕ್ ಆಫ್ ಸಂದರ್ಭ ವಿಮಾನಗಳು ದುರಂತಕ್ಕೆ ಈಡಾಗುವ ಹಲವು ಪ್ರಕರಣಗಳು ನಮ್ಮ ಮುಂದಿದೆ. ಅದೇ ರೀತಿ ವಿಮಾನ ಇಳಿಯುವ ಸಂದರ್ಭ ಕೂಡಾ ದುರ್ಘಟನೆಗಳು ಸಂಭವಿಸಬಹುದು. 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ವಿಮಾನ ದುರಂತಕ್ಕೀಡಾಗಿ 185 ಮಂದಿ ಮೃತಪಟ್ಟಿದ್ದರು. 8 ಮಂದಿ ಆ ದುರ್ಘಟನೆಯಲ್ಲಿ ಬದುಕುಳಿದಿದ್ದರು. ಇಂದಿನ ದುರ್ಘಟನೆಯಲ್ಲಿ ಬಲಿಯಾದವರದು ಒಬ್ಬೊಬ್ಬದು ಒಂದೊAದು ಕಥೆ. ಖುಶಿಯಿಂದ ಬೀಳ್ಕೊಂಡ ಮನೆ ಮಂದಿಯನ್ನು ದುರಂತ. ಕಣ್ಣೀರಿನಲ್ಲಿ ಮುಳುಗಿಸಿದೆ. ಒಂದೆಡೆ ಮನೆಯವರನ್ನು ಕಳೆದುಕೊಂಡ ದುಃಖ, ಅದರ ಜೊತೆಗೆ ಮೃತದೇಹ ದೊರಕದೇ ಪರದಾಡಬೇಕಾದ ಪರಿಸ್ಥಿತಿ. ಸುಟ್ಟು ಕರಕಲಾಗಿರುವ ಮೃತದೇಹಗಳನ್ನು ಡಿಎನ್ಎ ಪರೀಕ್ಷೆಗಳ ಮೂಲಕ ಪರಿಶೀಲಿಸಿ ಕೌಟುಂಬಿಕರಿಗೆ ಹಸ್ತಾಂತರಿಸಲಾಗುತ್ತದೆ. ಜೊತೆಗೆ ತೆರೆದು ನೋಡಬೇಡಿ, ನೋಡುವಂತೆ ಇಲ್ಲ ಎಂಬ ಭಿನ್ನಹವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.
ದುರಂತದ ತನಿಖೆ ಪ್ರಗತಿಯಲ್ಲಿದೆ. ಕಪ್ಪು ಪೆಟ್ಟಿಗೆ ದೊರೆತ ಬಳಿಕ ಪರಿಶೀಲನೆಯ ನಂತರ ಎಲ್ಲ ಪ್ರಶ್ನೆಗಳಿಗೂ ಉತ್ತರ ಲಭಿಸಬಹುದು. ಮೃತರಿಗೆ ಸರಕಾರ ತಲಾ 1 ಕೋಟಿ ಪರಿಹಾರ ಘೋಷಿಸಿದೆ. ಆದರೆ ಹೋದ ಜೀವ ಮರಳಿ ಬರುವುದೇ…?