ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಂಪೂರ್ಣ ಜವಾಬ್ದಾರಿ ಮತ್ತು ಪುರಾವೆಗಳೊಂದಿಗೆ ಚುನಾವಣಾ ಆಯೋಗದ ವಿರುದ್ಧ “ಮತದಾನದಲ್ಲಿ ಅಕ್ರಮ ನಡೆದಿದೆ” ಎಂದು ನೀಡಿರುವ ದೂರಿಗೆ, ಚುನಾವಣಾ ಆಯೋಗವು ನೀಡಿರುವ ಪ್ರತಿಕ್ರಿಯೆಯು ಅನುಮಾನಗಳನ್ನು ಹುಟ್ಟು ಹಾಕುವಂತಿದೆ. ಆಯೋಗದ ಸ್ವಂತ ದಾಖಲೆಗಳು ಮತ್ತು ದತ್ತಾಂಶಗಳನ್ನು ಪರಿಶೀಲಿಸಿ ಆರು ತಿಂಗಳ ಬಳಿಕ ಪತ್ರಿಕಾಗೋಷ್ಠಿಯ ಮೂಲಕ ವಿವರವಾದ ವರದಿಯನ್ನು ರಾಷ್ಟ್ರಕ್ಕೆ ಮಂಡಿಸಿರುವ ರಾಹುಲ್ ಗಾಂಧಿಯವರಿಗೆ ಅಫಿದಾವಿತ್ನಲ್ಲಿ ನೀಡುವಂತೆ ಆಯೋಗ ನಿರ್ದೇಶಿಸಿದೆ. ರಾಹುಲ್ ಹೇಳಿದ್ದು ತಪ್ಪು ಎಂದು ಹೇಳಲು ಅಥವಾ ವಿವರಿಸಲು ಆಯೋಗ ಸಿದ್ದವಿಲ್ಲ. ಅನಗತ್ಯ ವಾದಗಳನ್ನು ಮುಂದಿರಿಸಿ ಅದನ್ನು ಎದುರಿಸುವಷ್ಟು ಆರೋಪಗಳು ಕ್ಷುಲ್ಲಕವಲ್ಲ. ಆಯೋಗವು ಮತದಾರ ಪಟ್ಟಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ನೀಡದ ಕಾರಣ ಮುದ್ರಿತ ಪುಟಗಳ ಭಂಡಾರವನ್ನೇ ಪರಿಶೀಲಿಸಬೇಕಾಯಿತು. ಆದ್ದರಿಂದ ಹೆಚ್ಚಿನ ತಪಾಸಣೆಯನ್ನು ಕರ್ನಾಟಕದ ಬೆಂಗಳೂರು ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸಲ್ಲಿಸಲು ಸಾಧ್ಯವಾಗಿದೆ. ಇದರಲ್ಲಿ ಬಹಿರಂಗಗೊAಡಿರುವ ಅಕ್ರಮಗಳು ಇತರ ಹಲವು ಕ್ಷೇತ್ರಗಳಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ನಡೆದಿರಲು ಸಾಧ್ಯತೆ ಇದೆ ಎಂದು ರಾಹುಲ್ ಗಮನ ಸೆಳೆದಿದ್ದಾರೆ.
ಮಹದೇವಪುರ ಕ್ಷೇತ್ರದ ಆರೂವರೆ ಲಕ್ಷ ಮತಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳು ನಕಲಿ. ನಕಲಿ ಹೆಸರುಗಳು, ವಿಳಾಸಗಳು ಮತ್ತು ಫೋಟೋಗಳು ಮುಂತಾದ ವಿವಿಧ ಕುಶಲತೆಯ ಮೂಲಕ ಮತದಾರರ ಪಟ್ಟಿಯನ್ನು ಉಬ್ಬಿಸಲಾಗಿದೆ. ಪರಿಶೀಲಿಸಿದರೆ ಇತರ ಹಲವು ಕ್ಷೇತ್ರಗಳಲ್ಲಿ ಇಂತಹ ಕ್ರಿಮಿನಲ್ ಭ್ರಷ್ಟಾಚಾರ ಬಯಲಾಗುತ್ತದೆ. ದಾಖಲೆಗಳು ಡಿಜಿಟಲ್ ರೂಪದಲ್ಲಿ ಇರಬೇಕೆಂದು ರಾಹುಲ್ ಒತ್ತಾಯಿಸುತ್ತಾರೆ. ಈ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡದೆ ಮೌನವಾಗಿದೆ. ಆರೋಪಗಳು ಚುನಾವಣಾ ಆಯೋಗದ ಅಧಿಕೃತ ದಾಖಲೆಗಳನ್ನು ಆಧರಿಸಿವೆ. ಮಾತ್ರವಲ್ಲದೆ ಅವು ಇದ್ದಕ್ಕಿದ್ದಂತೆ ಹೊರಹೊಮ್ಮಿದ ದೂರುಗಳಲ್ಲ. ಸಂವಿಧಾನವು ಚುನಾವಣಾ ಆಯೋಗವನ್ನು ಸರಕಾರದ ನಿಯಂತ್ರಣದಿಂದ ಸ್ವತಂತ್ರವಾದ ಮತ್ತು ಸ್ವಾಯತ್ತ ಸಂಸ್ಥೆಯಾಗಿ ರೂಪಿಸಿದೆ. ಆದರೂ ಪ್ರಸಕ್ತ ಸರಕಾರವು ಅದರ ಸ್ವತಂತ್ರ ರೂಪವನ್ನು ನಾಶಪಡಿಸಿದೆ. ಕೇಂದ್ರ ಸರಕಾರದ ಪರವಾಗಿರುವ ಮತ್ತು ಅಧೀನ ಅಧಿಕಾರಗಳಲ್ಲಿ ಆಯುಕ್ತರಾಗಿ ನೇಮಿಸಲು ಸಾಧ್ಯವಾಗುವ ರೀತಿಯಲ್ಲಿ ಸರಕಾರವು ನೇಮಕಾತಿ ನಿಯಮಗಳನ್ನು ಬದಲಿಸಿದೆ.
ಚುನಾವಣಾ ಆಯೋಗವು ಮುದ್ರಣಕ್ಕೆ ಎಷ್ಟು ಶ್ರಮ ಮತ್ತು ವೆಚ್ಚವನ್ನು ವಹಿಸಿರಬಹುದು? ತಪಾಸಣೆಯನ್ನು ತಡೆಯಲು ಆಯೋಗವು ಇಷ್ಟೊಂದು ತೊಂದರೆಯನ್ನು ಅನುಭವಿಸುವ ನಿರ್ಧಾರದ ಹಿಂದಿನ ಉದ್ದೇಶವೇನು? ಮುಂತಾದ ವಿಷಯದಲ್ಲಿ ಪಾರದರ್ಶಕತೆ ತರಲು ಒಂದೇ ಒಂದು ಮಾರ್ಗವಿದೆ. ಅದು ಸುಪ್ರೀಂ ಕೋರ್ಟ್ ಹಸ್ತಕ್ಷೇಪ ನಡೆಸುವುದಾಗಿದೆ. ಚುನಾವಣಾ ಬಾಂಡ್ಗಳ ಬೃಹತ್ ಭ್ರಷ್ಟಾಚಾರವನ್ನು ನ್ಯಾಯಾಲಯ ಹಸ್ತಕ್ಷೇಪದ ಮೂಲಕ ತೆಗೆಯಲಾಯಿತು. ಈಗ ಚುನಾವಣೆಯಲ್ಲಿ ಗಮನಾರ್ಹ ವಂಚನೆ ನಡೆದಿದೆ ಎಂಬುದಕ್ಕೆ ಆಯೋಗದ ದಾಖಲೆಗಳಿಂದ ಪುರಾವೆಗಳು ಲಭ್ಯವಾಗಿವೆ. ದೇಶ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಸ್ವಯಂ ಪ್ರೇರಿತ ತನಿಖೆ ನಡೆಸುವುದು ಸುಪ್ರೀಂಕೋರ್ಟಿನ ಕರ್ತವ್ಯವಾಗಿದೆ .ನ್ಯಾಯಾಂಗವು ಹಾಗೆ ಮಾಡುವ ಅಧಿಕಾರ ಮತ್ತು ಹಕ್ಕು ಮಾತ್ರವಲ್ಲ ಬಾಧ್ಯತೆಯನ್ನು ಸಹ ಹೊಂದಿದೆ..
ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ಗೌಡ ದುರಂತವು ಯುವ ನಾಯಕರಿಗೆ ಪಾಠವಾಗಬೇಕಾಗಿದೆ. ಖಾಸಗಿ ಕೋಣೆಯೊಳಗೆ ಒಪ್ಪಿತ ಅನೈತಿಕ ಲೈಂಗಿಕ ಸಂಬಂಧವನ್ನು ಗುಟ್ಟಾಗಿ ಚಿತ್ರೀಕರಿಸಿ ಅವರನ್ನು ಬ್ಲಾಕ್ ಮೇಲ್ ಮಾಡುವುದು ಮಹಾ ಅಪರಾಧವಾಗಿದೆ. ಪ್ರಜ್ವಲ್ ಪ್ರಕರಣ ಬಹಳ ಭಿನ್ನವಾದದ್ದು ಮಾತ್ರವಲ್ಲ ಆಘಾತಕಾರಿಯಾದದ್ದು .ಇಲ್ಲಿ ನಡೆದಿರುವುದು ಒಪ್ಪಿತ ಲೈಂಗಿಕ ಕ್ರಿಯೆಗಳಲ್ಲ. ಬದಲಿಗೆ ಅತ್ಯಾಚಾರ ಎನ್ನುವುದು ಮೊದಲ ಆರೋಪ. ಎರಡನೆಯದು ಈ ಅಕ್ರಮಗಳನ್ನು ಸೆರೆಹಿಡಿದಿರುವುದು ಯಾರೋ ವಿರೋಧ ಪಕ್ಷದ ನಾಯಕರ ಜನರಲ್ಲ. ಸ್ವತಹ ಪ್ರಜ್ವಲನೇ ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಸೆರೆಹಿಡಿದು ತನ್ನ ಮೊಬೈಲ್ ನಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದ. ತನ್ನ ಕೆಲಸದ ಅಳುಗಳ ಜೊತೆ, ಪಕ್ಷದ ಕಾರ್ಯಕರ್ತೆಯ ಜೊತೆ ಅತ್ಯಂತ ಕೀಳಾಗಿ ವರ್ತಿಸಿದ ದೃಶ್ಯಗಳು ಆತನ ಮೊಬೈಲ್ನಲ್ಲಿ ಇದ್ದವು. ಜೊತೆಗೆ ಅದನ್ನು ಆತ ಪೆನ್ ಡ್ರೈವ್ನಲ್ಲಿ ತೆಗೆದಿಟ್ಟುಕೊಂಡಿದ್ದ. ಈ ಪೆನ್ಡ್ರೆöÊವ್ಗಳನ್ನು ಮುಂದಿಟ್ಟು ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡಿರುವ ಸಾಧ್ಯತೆಗಳು ಇವೆ. ಆತನ ಕೃತ್ಯಗಳಲ್ಲಿ ಒಬ್ಬ ಸೈಕೋಪಾತ್ನ ಲಕ್ಷಣಗಳಿದ್ದವು. ತನ್ನ ನೀಚ ಕೃತ್ಯವನ್ನು ಕುಟುಂಬ ಬಲ, ಜಾತಿ, ಹಣಬಲಗಳಿಂದ ಆತ ಧಕ್ಕಿಸಿಕೊಂಡಿದ್ದ. ಆದರೆ ಇದೀಗ ಪ್ರಜ್ವಲ್ ತಾನು ಮಾಡಿದ ಕರ್ಮಕ್ಕೆ ಶಿಕ್ಷೆ ಅನುಭವಿಸುತ್ತಿರುವನು. ಇದು ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಜೊತೆಗೆ ಯುವ ನಾಯಕರಿಗೆ ಪಾಠವಾಗಿದೆ.