ಆಹಾರ ಪದಾರ್ಥಗಳ ಪ್ಯಾಕೆಟ್ಗಳ ಮೇಲೆ ಪೌಷ್ಟಿಕಾಂಶದ ವಿವರಗಳನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಮುಂಭಾಗದಲ್ಲೇ ಪ್ರದರ್ಶಿಸಬೇಕು ಎಂದು ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಪ್ರಮುಖ ಶಿಫಾರಸು ಮಾಡಿದೆ. ಪ್ರಸ್ತುತ ಹೆಚ್ಚಿನ ಕಂಪನಿಗಳು ಪೌಷ್ಟಿಕಾಂಶದ ಮಾಹಿತಿಯನ್ನು ಪ್ಯಾಕೆಟ್ನ ಹಿಂಭಾಗದಲ್ಲಿ ಅತ್ಯಂತ ಸಣ್ಣ ಅಕ್ಷರಗಳಲ್ಲಿ ನೀಡುತ್ತಿದ್ದು, ಇದು ಸಾಮಾನ್ಯ ಗ್ರಾಹಕರಿಗೆ ಓದಲು ಅಥವಾ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದೆ. ಆದ್ದರಿಂದ, ಗ್ರಾಹಕರು ತಾವು ಸೇವಿಸುವ ಆಹಾರದಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಂಶ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ‘ಫ್ರಂಟ್ ಆಫ್ ಪ್ಯಾಕೇಜ್ […]








