ಹಿಟ್ಟಿಗಿರುವ ಸಾಮಗ್ರಿಗಳು:
- ಮೈದ- ೩೧/೨ ಕಪ್,
- ಬಿಸಿ ನೀರು- ೧೧/೪ ಕಪ್,
- ಇನ್ಸ್ಟನ್ಟ್ ಈಸ್ಟ್- ೧ ಟೀ.ಸ್ಪೂ.,
- ಸಕ್ಕರೆ- ೧ ಟೀ.ಸ್ಪೂ.,
- ಉಪ್ಪು- ೧೧/೨ ಟೀ.ಸ್ಪೂ.,
- ಓಲಿವ್ ಆಯಿಲ್- ೨ ಟೀ.ಸ್ಪೂ.
- ಕೀಮ ಮಾಡಲಿಕ್ಕಿರುವ ಸಾಮಗ್ರಿಗಳು:
- ಮಟನ್ ಕೀಮ- ೪೦೦ ಗ್ರಾಮ್,
- ಈರುಳ್ಳಿ ದೊಡ್ಡದು- ೧,
- ಬೆಳ್ಳುಳ್ಳಿ- ೩-೪ ಎಸಳು (ಚೆನ್ನಾಗಿ ಅರೆದದ್ದು),
- ಟೊಮೆಟೊ- ೨,
- ಕೆಂಪು ಕ್ಯಾಪ್ಸಿಕಮ್- ೧ (ಸಣ್ಣದು),
- ಹಸಿರು ಕ್ಯಾಪ್ಸಿಕಮ್- ೧ (ಸಣ್ಣದು),
- ಹಸಿಮೆಣಸಿನ ಕಾಯಿ- ೧,
- ಟೊಮೆಟೊ ಪೇಸ್ಟ್- ೧೧/೨ ಟೀ.ಸ್ಪೂ.
- ಕೆಂಪು ಮೆಣಸಿನ ಪೇಸ್ಟ್- ೧ ಟೀ.ಸ್ಪೂ.
- (ಅಗತ್ಯ ಬಿದ್ದರೆ ಹೆಚ್ಚು ಬಳಸಬಹುದು),
- ಪುದಿನ ಎಲೆ- ೧/೨ ಕಪ್ (ಸಣ್ಣಗೆ ಕತ್ತರಿಸಿದ್ದು),
- ತಾಪ್ರಿಕ ಪೌಡರ್- ೧ ಟೀ.ಸ್ಪೂ.,
- ಜೀರಿಗೆ ಹುಡಿ- ೧/೨ ಟೀ.ಸ್ಪೂ.,
- ಕರಿಮೆಣಸಿನ ಹುಡಿ- ೧/೨ ಟೀ.ಸ್ಪೂ.,
- ಉಪ್ಪು- ರುಚಿಗೆ,
- ಆಲಿವ್ ಎಣ್ಣೆ- ೩ ಟೀ.ಸ್ಪೂ.,
- ಲಿಂಬೆರಸ- ೧ ಟೀ.ಸ್ಪೂ.
ಹಿಟ್ಟು ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಮೈದ, ಬಿಸಿ ನೀರು, ಉಪ್ಪು, ಸಕ್ಕರೆ, ಈಸ್ಟ್, ಆಲಿವ್ ಆಯಿಲ್ ಎಲ್ಲ ಸೇರಿಸಿ ಚೆನ್ನಾಗಿ ಕಲಸಿರಿ. (ಚಪಾತಿ ಹಿಟ್ಟಿನ ಹಾಗೆ) ಇದನ್ನು ೪೦-೬೦ ನಿಮಿಷ ಚೆನ್ನಾಗಿ ಒದ್ದೆ ಬಟ್ಟೆಯಿಂದ ಸುತ್ತಿ ಇಡಿ.
ಕೀಮ ತಯಾರಿಸುವ ವಿಧಾನ:
ಈರುಳ್ಳಿ, ಕ್ಯಾಪ್ಸಿಕಮ್, ಟೊಮೆಟೊ, ಪುದಿನ ಎಲೆ ಮುಂತಾ ದವುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರಿಯಿರಿ. ಈ ಮಿಶ್ರಿತವನ್ನು ಮಟನ್ ಕೀಮದೊಂದಿಗೆ ಇತರ ವಸ್ತುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಪಿಝ್ಝ ತಯಾರಿಸುವ ವಿಧಾನ:
ಹಿಟ್ಟನ್ನು ೮ ಒಂದೇ ಅಳತೆಯ ಉಂಡೆಗಳಾಗಿ ವಿಭಾಗಿಸಿ. ತೆಳ್ಳಗೆ ಲಟ್ಟಿಸಿ ತೆಗೆಯಿರಿ. ಒಂದು ಬಟರ್ ಪೇಪರಿನಲ್ಲಿ ಲಟ್ಟಿಸಿದ ಹಿಟ್ಟು ಇಟ್ಟು ಅದರ ಮೇಲೆ ಮಟನ್ ಮಿಶ್ರಿತ ಕೈಯಿಂದ ಹರಡಿ. (ಪ್ಯಾನ್ನ ಮೇಲೆ ತೆಗೆದಿರಲು ಅನುಕೂಲವಾಗಲಿಕ್ಕಾಗಿ ಹೀಗೆ ಬಟರ್ ಪೇಪರಿನ ಮೇಲೆ ಇಡಲಾಗುತ್ತದೆ) ಬಳಿಕ ಇದನ್ನು ಬಿಸಿಯಾದ ಪ್ಯಾನ್ನ ಮೇಲೆ ಬಟರ್ ಪೇಪರ್ ನೊಂದಿಗೇ ಇರಿಸಬಹುದು. ಸ್ವಲ್ಪ ಬಿಸಿಯಾದ ಕೂಡಲೇ ಬಟರ್ ಪೇಪರ್ ತೆಗೆದು ಸಣ್ಣ ಉರಿಯಲ್ಲಿ ಪಾತ್ರೆ ಮುಚ್ಚಿ ಇಟ್ಟು ೮-೧೦ ನಿಮಿಷ ಬೇಯಿಸಿ ಪಿಝ್ಝ ತಯಾರಿಸಿ.
ಬಡಿಸುವ ವಿಧಾನ:
ಪಿಝ್ಝದ ಮೇಲೆ ಪುದಿನ ಎಲೆ, ಈರುಳ್ಳಿ, ಟೊಮೆಟೊ, ಮುಳ್ಳು ಸೌತೆ, ಮೊಸರು, ಲಿಂಬೆರಸ ಮುಂತಾದವುಗಳನ್ನು ಸೇರಿಸಿ ಬಡಿಸಬಹುದು. ಬಿಸಿಯಾದ ಟರ್ಕಿಶ್ ಪಿಝ್ಝವನ್ನು ಸಲಾಡ್ನೊಂದಿಗೆ ರೋಲ್ ಮಾಡಿಯೂ ಸವಿಯಬಹುದು.