ಕಬಾಬ್ ತಯಾರಿಸಲು ಬೇಕಾಗುವ ವಸ್ತುಗಳು:
ಕೋಳಿಮಾಂಸ ಕೀಮ- 750 ಗ್ರಾಮ್, ಈರುಳ್ಳಿ- 1, ಕೆಂಪು ಕ್ಯಾಪ್ಸಿಕಮ್- 1, ಕೊತ್ತಂಬರಿ ಸೊಪ್ಪು- ಕತ್ತರಿಸಿದ್ದು – 1 ಕಪ್, ಚಿಲ್ಲಿ ಫ್ಲೇಕ್ಸ್- 1 ಟೀ.ಸ್ಪೂ., ಪ್ಯಾಪ್ರಿಕ ಪೌಡರ್- 1 ಟೀ.ಸ್ಪೂ., ಹಸಿಮೆಣಸಿನ ಕಾಯಿ ಪೇಸ್ಟ್- 1, ಬೆಳ್ಳುಳ್ಳಿ ಪೇಸ್ಟ್- 1 ಟೀ.ಸ್ಪೂ., ಎಣ್ಣೆ- 2-3 ಟೀ.ಸ್ಪೂ., ಉಪ್ಪು- ರುಚಿಗೆ.
ಮಸಾಲ ತಯಾರಿಸಲಿಕ್ಕಿರುವ ವಸ್ತುಗಳು:
ಮೊಸರು- 1 ಕಪ್, ಈರುಳ್ಳಿ (ಡೀಪ್ ಫ್ರೈ ಮಾಡಿದ್ದು) ಒಂದು ಕಪ್, ಎಣ್ಣೆ- 1/2 ಕಪ್, ಏಲಕ್ಕಿ- 2, ಕೆತ್ತೆ- 1 ಇಂಚು, ಗರಮ್ ಮಸಾಲೆ ಹೂ- 2, ಕರಿಮೆಣಸು- 1/4 ಟೀ.ಸ್ಪೂ., ಬೇಲೀಫ್- 2, ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಟೀ.ಸ್ಪೂ., ಮೆಣಸಿನ ಹುಡಿ- 1/2 ಟೀ.ಸ್ಪೂ., ಹಳದಿ ಹುಡಿ- 1/2 ಟೀ.ಸ್ಪೂ., ಗರಮ್ ಮಸಾಲೆ ಹುಡಿ- 1 ಟೀ.ಸ್ಪೂ., ಕೊತ್ತಂಬರಿ ಹುಡಿ- 2 ಟೀ.ಸ್ಪೂ., ಜೀರಿಗೆ ಹುಡಿ (ಹುರಿದದ್ದು)- 1/2 ಟೀ.ಸ್ಪೂ., ಉಪ್ಪು- ರುಚಿಗೆ, ಕೊತ್ತಂಬರಿ ಸೊಪ್ಪು ಕತ್ತರಿಸಿದ್ದು- 1 ಕಪ್, ಪುದಿನ ಎಲೆ ಕತ್ತರಿಸಿದ್ದು- 1/2 ಕಪ್, ಹಸಿಮೆಣಸಿನ ಕಾಯಿ- 3, ಕಬಾಬ್- ತಯಾರಿಸಿ ಇಟ್ಟದ್ದು, ಲಿಂಬೆರಸ- 2 ಟೀ.ಸ್ಪೂ.
ನೈಅಕ್ಕಿ ತಯಾರಿಸಲು ಬೇಕಾಗುವ ವಸ್ತುಗಳು:
ನೀರು- 41/2 ಕಪ್, ಚೀಲೀಫ್ (ಬಿರಿಯಾಣಿ ಎಲೆ)- 1, ಕೆತ್ತೆ- 1 ಇಂಚು, ಲವಂಗ- 4, ಏಲಕ್ಕಿ- 2, ಲಿಂಬೆರಸ- 1/2 ಟೀ.ಸ್ಪೂ., ಎಣ್ಣೆ- ಒಂದು ಟೀ.ಸ್ಪೂ., ನೈಅಕ್ಕಿ- 3 ಕಪ್ (600 ಗ್ರಾಮ್), ಗೋಡಂಬಿ- ಒಂದು ಹಿಡಿ, ಒಣದ್ರಾಕ್ಷಿ- 3/4 ಹಿಡಿ, ಉಪ್ಪು- ರುಚಿಗೆ.
ದಮ್ ಮಾಡಲಿಕ್ಕಿರುವ ವಸ್ತುಗಳು:
ಪುದಿನ ಎಲೆ- 3/4 ಕಪ್, ತುಪ್ಪ- 2 ಟೀ.ಸ್ಪೂ.
ಕಬಾಬ್ ತಯಾರಿಸುವ ವಿಧಾನ:
ಈರುಳ್ಳಿ ಮತ್ತು ಕ್ಯಾಪ್ಸಿಕಮ್ ಸೇರಿಸಿ ಅರೆದಿಡಿ. ಸೋಸು ಪಾತ್ರೆಗೆ ಹಾಕಿ ನೀರನ್ನು ಬಸಿಯಿರಿ. ಇದನ್ನು ಒಂದು ಮಿಕ್ಸಿಂಗ್ ಬೌಲ್ಗೆ ಹಾಕಿ ಕೀಮ ಮಾಡಿದ ಚಿಕನ್. ಉಪ್ಪು, ಚಿಲ್ಲಿಫ್ಲೆಕ್ಸ್, ಪ್ಯಾಪ್ರಿಕ ಪೌಡರ್, ಹಸಿಮೆಣಸಿನ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 30 ನಿಮಿಷ ಫ್ರಿಜ್ನಲ್ಲಿ ಇಡಿ.
ಇದರಿಂದ ಒಂದು ಉಂಡೆ ತೆಗೆದು ಕೈಯನ್ನು ಒದ್ದೆ ಮಾಡಿ ಕಬಾಬ್ ಸ್ಟಿಕ್ನಲ್ಲಿ ಪ್ರೆಸ್ ಮಾಡಿ ಹಿಡಿಯುವಂತೆ ಶೇಪ್ ಮಾಡಿರಿ. ಹೀಗೆ ಮಾಡಿದ ಕಬಾಬ್ಗಳನ್ನು ಒಂದು ತೆರೆದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಲ್ಲ ಕಡೆ ತಿರುಗಿಸುತ್ತಾ ಬೇಯಿಸಿ ಕಬಾಬ್ ತಯಾರಾಯಿತು.
ರೈಸ್ ತಯಾರಿಸುವ ವಿಧಾನ:
ನೈಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು 30 ನಿಮಿಷ ಇಡಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಬೇಲೀಫ್, ಕೆತ್ತೆ, ಲವಂಗ ಏಲಕ್ಕಿ ಸೇರಿಸಿ ಕೈಯಾಡಿಸಿ ಬಳಿಕ ಇದಕ್ಕೆ ಅಕ್ಕಿ ಸೇರಿಸಿ 3-4 ನಿಮಿಷ ಹುರಿಯಿರಿ. ಇದಕ್ಕೆ ಚೆನ್ನಾಗಿ ಕುದಿಸಿದ ನೀರು ಸೇರಿಸಿ. ಕುದಿಯುತ್ತಾ ಬರುವಾಗ ಉಪ್ಪು ಲಿಂಬೆ ರಸ ಸೇರಿಸಿ ಮುಚ್ಚಳ ಮುಚ್ಚಿ 5-6 ನಿಮಿಷ ಬೇಯಿಸಿ.
ಬಿರಿಯಾನಿ ತಯಾರಿಸುವ ವಿಧಾನ:
ಗ್ರೈಂಡರ್ ನಲ್ಲಿ ಹುರಿದ ಈರುಳ್ಳಿ ಮೊಸರು ಸೇರಿಸಿ ಅರೆದು ತೆಗೆದಿಡಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಏಲಕ್ಕಿ, ಕೆತ್ತೆ, ಗರಮ್ ಮಸಾಲೆ ಹೂ, ಕರಿಮೆಣಸು, ಬೇ ಲೀಫ್ ಸೇರಿಸಿ ಹುರಿಯಿರಿ. ಅರೆದಿಟ್ಟ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಎರಡು ನಿಮಿಷ ಹುರಿಯಿರಿ. ಮೆಣಸಿನ ಹುಡಿ, ಹಳದಿ ಹುಡಿ, ಗರಮ್ ಮಸಾಲೆ ಹುಡಿ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಉಪ್ಪು ಸೇರಿಸಿ ಪುನಃ ಅಡಿಮೇಲು ಮಾಡಿ. ಕೊತ್ತಂಬರಿ ಸೊಪ್ಪು ಅರ್ಧಕ್ಕೆ ಕತ್ತರಿಸಿದ ಕಾಯಿಮೆಣಸಿ ಸೇರಿಸಿ ಬಾಡಿಸಿ.
ಇದಕ್ಕೆ ತಯಾರಿಸಿಟ್ಟ ಕಬಾಬನ್ನು ಕಡ್ಡಿಯಿಂದ ಬೇರ್ಪಡಿಸಿ ಸೇರಿಸಿ ಅಡಿಮೇಲು ಮಾಡಿ. ಸಣ್ಣ ಉರಿಯಲ್ಲಿ ಎರಡು ನಿಮಿಷ ಪಾತ್ರೆ ಮುಚ್ಚಿ ಬೇಯಿಸಿ. ಅದರಲ್ಲಿರುವ ಕಬಾಬನ್ನು ಹೊರ ತೆಗೆದು ಆ ಉಳಿದ ಮಸಾಲೆಯ ಮೇಲೆ ಅನ್ನ ಹಾಕಿ ಅದರ ಮೇಲೆ ಕಬಾಬ್ ತುಂಡುಗಳನ್ನು ಇಟ್ಟು ಕೊತ್ತಂಬರಿ ಸೊಪ್ಪು, ಹುರಿದ ಈರುಳ್ಳಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ 8-10 ನಿಮಿಷ ದಮ್ನಲ್ಲಿಡಿ. ರುಚಿಕರವಾದ ಟರ್ಕಿಶ್ ಅದಾನ ಕಬಾಬ್ ಬಿರಿಯಾನಿ ತಯಾರಾಗಿದೆ.