ಬಾನು ಮುಷ್ತಾಕ್ರ `ಹಾರ್ಟ್ಲ್ಯಾಂಪ್'(ಎದೆಯ ಹಣತೆ) ಬೂಕರ್ ಪ್ರಶಸ್ತಿಗೆ ಆಯ್ಕೆಯ ಪಟ್ಟಿಯಲ್ಲಿದೆ ಎಂಬ ಸುದ್ಧಿ ಬಂದಾಗಲೇ ಈ ಪ್ರಶಸ್ತಿ ಬಾನು ಅವರಿಗೇ ಸಿಗಲಿ ಎಂದು ಮನದಲ್ಲೇ ಪ್ರಾರ್ಥಿಸಿದ್ದೆ. ಅಂತಿಮವಾಗಿ ಬೂಕರ್’ ಬಾನು ಅವರಿಗೆ ಲಭಿಸಿದೆ ಎಂಬ ಸುದ್ಧಿ ಬಂದಾಗ ತುಂಬಾನೇ ಖುಶಿ ಆಯಿತು.
ಲೇಖಕಿ ಬಾನು ಮುಷ್ತಾಕ್ ಮತ್ತು ಅನುಪಮದ ನಂಟು ಇಪ್ಪತ್ತು ವರ್ಷದ ಮೊದಲಿನದು. ಕನ್ನಡ ನಾಡಿನಲ್ಲಿ ಹೆಸರುವಾಸಿಯಾದ ಈ ಲೇಖಕಿಯನ್ನು ಭೇಟಿ ಮಾಡಲು ನಮ್ಮ ಬಳಗ ಹಾಸನ’ಕ್ಕೆ ಹೋದಾಗ ಅವರ ನೈಜ ವ್ಯಕ್ತಿತ್ವದ ಪರಿಚಯವಾಗಿತ್ತು. ಅವರು ನೀಡಿದ ಆತ್ಮೀಯವಾದ ಸ್ವಾಗತ, ಆತಿಥ್ಯ ಮರೆಯಲಾರದು. ಅವರ ಪತಿ ಮತ್ತು ಮಕ್ಕಳು ನಮ್ಮ ಒಟ್ಟಿಗೆ ಆತ್ಮೀಯವಾಗಿ ಕಾಲ ಕಳೆದರು. ಹಾಸನಕ್ಕೆ ಹೋಗುವ ಮೊದಲು ಈ ಲೇಖಕಿಯ ಬಗ್ಗೆ ಇದ್ದ ತಪ್ಪು ಭಾವನೆ ಎಲ್ಲವೂ ಅಳಿಸಿ ಹೋಗಿತ್ತು.
`ಅನುಪಮ’ ಪತ್ರಿಕೆಯ ಬಳಗದ ಸಹೋದರಿಯರು ಹಿಜಾಬ್’ ಧರಿಸುವ ಸಂಪ್ರದಾಯವಾದಿಗಳಾಗಿದ್ದರಿAದ ಬಂಡಾಯ ಸಾಹಿತಿ ಎಂದು ಅಂದು ಕರೆಯಲ್ಪಡುತ್ತಿದ್ದ ಬಾನು ಅವರಿಗೆ ನಮ್ಮ ಭೇಟಿ ಹೆಚ್ಚು ಖುಶಿ ಕೊಡಲಿಕ್ಕೆ ಇಲ್ಲ ಎಂಬ ಭಾವನೆ ನನ್ನಲ್ಲಿ ಇತ್ತು. ಆದ್ರೆ… ಅವರ ಆತ್ಮೀಯತೆ, ಬಿಂಕ ಇಲ್ಲದ ಸರಳ ನಡವಳಿಕೆ, ವಿಶಾಲತೆಯು ನಮಗೆ ನಮ್ಮಲ್ಲಿದ್ದ ತಪ್ಪು ಭಾವನೆಯನ್ನು ತೊಳೆದು ಹಾಕಿತ್ತು. ಪತ್ರಿಕೆಗೆ ಅವರು ಕಥೆಯನ್ನೂ, ಲೇಖನಗಳನ್ನೂ ನೀಡುತ್ತಿದ್ದರು. ಮಂಗಳೂರಿಗೆ ಕುಟುಂಬ ಸಮೇತ ಬಂದು ನಮ್ಮ ಮನೆಯಲ್ಲಿ ಉಪಹಾರ ಸೇವಿಸಿ ಮಕ್ಕಳಿಂದ ಫೋಟೋ ತೆಗೆಸಿಕೊಂಡು ಹೋಗಿದ್ದರು. ಮೀನು ತಿನ್ನುವ ಆಶೆ ವ್ಯಕ್ತಪಡಿಸಿದಾಗ ಅವರನ್ನು ಓಶನ್ ಪರ್ಲ್ ಹೋಟೇಲಲ್ಲಿ (ಶಾಂತಿ ಪ್ರಕಾಶನ ಕಾರ್ಯಕ್ರಮಕ್ಕೆ ಬಂದಾಗ) ಅಂಜಲ್ ಫ್ರೈ ಮೀನನ್ನು ತಿನ್ನಿಸಿದ್ದೆವು. ಅಹಂಕಾರ ಇಲ್ಲದ ಅವರ ಆತ್ಮೀಯತೆಯು ನಮ್ಮನ್ನು ಸೆಳೆದಿತ್ತು.
ಕತ್ತಿಗಿಂತಲೂ ಹರಿತವಾದದ್ದು ಲೇಖನಿ ಎಂಬುವುದು ಸತ್ಯನುಡಿ. ನಮ್ಮಲ್ಲಿ ಬಹಳಷ್ಟು ಬರಹಗಾರ್ತಿಯರಿದ್ದಾರೆ. ಕಥೆ, ಕಾದಂಬರಿಯಲ್ಲಿ ಸ್ತಿçÃಯರ ಎಲ್ಲಾ ತಲ್ಲಣಗಳನ್ನು ಸೊಗಸಾಗಿ ವಿವರಿಸುತ್ತಾರೆ. ಮಹಿಳೆಯ ಕಣ್ಣೀರಿನ ಬಗ್ಗೆ ಮರುಕ, ಅನುಕಂಪನೂ ಇರುತ್ತದೆ. ಅನ್ಯಾಯವನ್ನು ಎದುರಿಸುವ ಗಟ್ಟಿಗಿತ್ತಿ ನಾಯಕಿಯರ ಪಾತ್ರವನ್ನೂ ಬಹಳ ಸುಂದರವಾಗಿ ವರ್ಣಿಸುತ್ತಾರೆ. ಆದ್ರೆ… ವಾಸ್ತವದ ಬದುಕಿನಲ್ಲಿ ಈ ಬರಹದ ಒಂದಿಷ್ಟೂ ಧೈರ್ಯ, ಸಾಹಸ ಬರಹಗಾರ್ತಿಯರಲ್ಲಿ ಕಾಣಿಸದು. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಅನ್ಯಾಯ ನಡೆಯುವಾಗ ಇವರೆಲ್ಲಾ `ಮೂಕ’ರಾಗಿ ನಿಲ್ಲುತ್ತಾರೆ. ಕೊನೆ ಪಕ್ಷ ವಿರೋಧಿಸುವ ಒಂದು ವಾಕ್ಯದ ಬರಹವನ್ನೂ ಪತ್ರಿಕೆಗೆ ರವಾನಿಸುವುದಿಲ್ಲ. ಇಂತಹ ಲೇಖಕಿಯರ ಮಧ್ಯೆ ಬಾನು ಮುಷ್ತಾಕ್ರು ತುಸು ಭಿನ್ನವಾಗಿ ನಿಲ್ಲುತ್ತಾರೆ. ಬಹುಶಃ ಅವರ `ವಕೀಲ’ ವೃತ್ತಿ ಜೀವನದಲ್ಲಿ ಮಹಿಳೆಯರ ಶೋಷಣೆಯನ್ನು ಆಳವಾಗಿ ಹತ್ತಿರದಿಂದ ವೀಕ್ಷಿಸುವ ಅವಕಾಶ ಲೇಖಕಿಗೆ ಲಭಿಸಿದರಿಂದ ಬಾನು ತನ್ನ ಕತೆಯಲ್ಲಿ ಸ್ತಿçà ಸಂವೇದನೆಗೆ ಒತ್ತು ಕೊಡುತ್ತಾರೆ. ಅನ್ಯಾಯದ ವಿರುದ್ಧ ಲೇಖನಿ ಬಳಸುವುದರ ಒಟ್ಟಿಗೇ ಅವರು ಹೋರಾಟದ `ಧ್ವನಿ’ಯೂ ಆಗಿ ನಿಲ್ಲುತ್ತಾರೆ. ಮಹಿಳಾ ದೌರ್ಜನ್ಯದ ವಿರುದ್ಧದ ಹೋರಾಟಗಾರ್ತಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. `ಸತ್ಯ’ವನ್ನು ನೇರವಾಗಿ ಹೇಳಲು ಹಿಂಜರಿಯದ ಸ್ವಭಾವ ಅವರದು. ಅವರ ಕಥೆಯಲ್ಲೂ ಅದು ಕಾಣಿಸುತ್ತದೆ. ಧರ್ಮದೊಳಗೆ ಅಡಗಿರುವ ಅನಾಚಾರ, ಹಕ್ಕುಗಳ ದುರ್ಬಳಕೆ, ಪುರುಷ ಶೋಷಣೆಯ ವಿರುದ್ಧ ಅವರು ಧ್ವನಿ ಎತ್ತಿರುತ್ತಾರೆ. ಲೇಖಕಿಗಿಂತಲೂ ಅವರು ವಕೀಲೆಯಾಗಿ, ಹೋರಾಟಗಾರ್ತಿಯಾಗಿಯೇ ಹೆಚ್ಚು ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ಹಿಜಾಬ್ನ ವಿಷಯದಲ್ಲಿ ಅವರ ದೃಷ್ಟಿಕೋನ ಬೇರೆಯೇ ಇದ್ದರೂ ಇಸ್ಲಾಮಿನ ಇತರ ಆರಾಧನಾ ಕರ್ಮಗಳ ಬಗ್ಗೆ ಅವರು ಅಪ್ಪಟ ಧರ್ಮ ಭಕ್ತೆಯಾಗಿದ್ದಾರೆ. ಬಾನು ಅವರು ಯಾವತ್ತೂ ಹಿಜಾಬ್ ಧಾರಿಗಳ ಬಗ್ಗೆ ಟೀಕಿಸಲಿಲ್ಲ. ವಸ್ತçಧಾರಣೆ ಅವರವರ ಇಷ್ಟ. ಅದು ಅವರ ವೈಯಕ್ತಿಕವಾದ ಸ್ವತಂತ್ರ ನಿಲುವು ಎನ್ನುವ ನೇರ ನುಡಿ ಅವರದು. ಇಸ್ಲಾಮ್ ಮಹಿಳೆಯರಿಗೆ ನೀಡಿದ ಅಧಿಕಾರ, ಹಕ್ಕು, ಸ್ವಾತಂತ್ರ್ಯದ ಬಗ್ಗೆ ಎಚ್ಚರಿಸುವ ಅವರು ಪುರುಷರು ಧರ್ಮ ನೀಡಿದ ಸೌಲಭ್ಯವನ್ನು ಕಸಿದು ಮಹಿಳೆಯರನ್ನು ಶೋಷಿಸುವ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸುತ್ತಾರೆ. ಸತ್ಯ ಎಂದಿಗೂ ಕಹಿ ತಾನೆ? ಮಹಿಳೆಯರು ಶಿಕ್ಷಣ ಪಡೆದಾಗ ಈ ಎಲ್ಲಾ ದಬ್ಬಾಳಿಕೆ ಕಡಿಮೆ ಆಗುತ್ತೆ ಎಂಬ ಉಪದೇಶ ಬಾನು ಅವರದು. ಆದ್ದರಿಂದಲೇ ಬರಹಗಾರ್ತಿ ಆಗಿ ಹೋರಾಟಗಾರ್ತಿಯಾಗಿ, ಪತ್ರಕರ್ತೆಯಾಗಿ ಕಥೆಯಲ್ಲಿ ತಾನು ಬರೆದಂತೇ ಸಮಾಜದಲ್ಲಿ ಗಟ್ಟಿ ಧ್ವನಿ ಎತ್ತುವ ಮೂಲಕ ಬಾನುರವರು ಗಮನ ಸೆಳೆಯುತ್ತಾರೆ.
ಇಂದು ಬಾನು ಅವರಿಗೆ ವಿಶ್ವದ ಪ್ರತಿಷ್ಠಿತ `ಬೂಕರ್’ ಪ್ರಶಸ್ತಿ ಲಭಿಸಿದೆ. ಯಾವುದೇ ಗೌರವ, ಸ್ಥಾನಮಾನ, ಉಡುಗೊರೆ ದೇವನ `ಅನುಗ್ರಹ’ ಆಗಿರುತ್ತದೆ. ಅಹಂಕಾರ ಇಲ್ಲದ ಸರಳ ಸಜ್ಜನಿಕೆಯ ಈ ಲೇಖಕಿಗೆ ವಿಶ್ವದಲ್ಲೇ ಬೆಳಗುವ ಪ್ರಶಸ್ತಿಯೂ ಲಭಿಸಿದಾಗ ಅವರ ಮುಂದಿನ ಹೊಣೆಗಾರಿಕೆಯೂ ಅಧಿಕವಾಗುತ್ತದೆ. ಅವರ `ಹಸೀನಾ ಮತ್ತು ಇತರ ಕಥೆಗಳು’ ಕಥಾ ಸಂಕಲನ ಓದಿದವರಿಗೆ ಈ ಲೇಖಕಿಯ ಮಹಿಳಾ ಸಂವೇದನೆಯ ಆಳ ಅರ್ಥ ಆಗುತ್ತದೆ. 1990 ರಲ್ಲಿ `ಹೆಜ್ಜೆ ಮಾಡಿದ ಹಾದಿ’ 1999ರಲ್ಲಿ `ಬೆಂಕಿ ಮಳೆ’ 2004ರಲ್ಲಿ ಪ್ರಕಟವಾದ `ಎದೆಯ ಹಣತೆ’ (ಹಾರ್ಟ್ ಲ್ಯಾಂಪ್), 2007ರಲ್ಲಿ `ಸಫೀರಾ’ ಕಥಾ ಸಂಕಲನ, 2012ರಲ್ಲಿ `ಬಡವರ ಮಗಳು ಹೆಣ್ಣಲ್ಲ’, 2023ರಲ್ಲಿ ಪ್ರಕಟವಾದ `ಹೆಣ್ಣು ಹದ್ದಿನ ಸ್ವಯಂವರ’ ಮಹಿಳಾ ಬದುಕಿನ ವಿವಿಧ ತಲ್ಲಣಗಳ ಮುಖವಾಗಿ ಕಥೆಗಳು ರೂಪು ಪಡೆಯುತ್ತದೆ. ಬಾನು ಅವರ ಬರಹಗಳನ್ನು ಟೀಕಿಸುವ ವರ್ಗವೂ ಇದೆ. ಟೀಕೆಗಳನ್ನೂ ಆರೋಗ್ಯಕರವಾಗಿ ಸ್ವೀಕರಿಸಿದ ದಿಟ್ಟೆ ಅವರು.
`ಬೂಕರ್ ಪ್ರಶಸ್ತಿ’ಯನ್ನು ಸಮಾನವಾಗಿ ಹಂಚಿಕೊAಡ ಇಬ್ಬರು ಸಹೋದರಿಯರು ಸಮಾಜಕ್ಕೆ ಸೌಹಾರ್ದತೆಯ ಜೋಡಿಯಾಗಿ ಮಿಂಚಿದ್ದಾರೆ. ಅಪ್ಪಟ ಭಾರತೀಯ ಸಂಸ್ಕೃತಿಯ ಸೀರೆಯಲ್ಲಿ ಈ ಪ್ರಶಸ್ತಿಯನ್ನು ಲಂಡನ್ನಲ್ಲಿ ಸ್ವೀಕರಿಸಿದ ಸೊಬಗು ಕಣ್ಣು ತುಂಬಿತು. ನಾನಂತೂ ಬಾನು ಅವರನ್ನು ಸಲ್ವಾರ್ ವಸ್ತçದಲ್ಲೇ ಹೆಚ್ಚು ನೋಡಿದ್ದು. ಪ್ರಶಸ್ತಿ ಪಡೆಯುವಾಗ ಭಾರತೀಯ ನಾರಿಯಂತೇ ಕಾಂಜೀವರA ಸೀರೆಯಲ್ಲಿ ಇಬ್ಬರನ್ನೂ ಕಂಡು ಖುಶಿ ಅನಿಸಿತು. `ಅನುಪಮ’ ಬಳಗದ ಓದುಗರ ಹಾಗೂ ಸಂಪಾದಕ ಬಳಗದಿಂದಲೂ ಬಾನು ಮುಷ್ತಾಕ್ ಹಾಗೂ ದೀಪಾ ಭಸ್ತಿಯವರಿಗೆ ಹಾರ್ಧಿಕ ಶುಭಾಶಯಗಳನ್ನು ಕೋರುತ್ತಾ `ಎದೆಯ ಹಣತೆ’ಯಾಗಿ ಮಹಿಳಾ ವರ್ಗದ ಧ್ವನಿಯಾಗಿ ತಮ್ಮ ಲೇಖನದಿಂದ, ಧ್ವನಿಯಿಂದ ಮುನ್ನಡೆ ಸಾಧಿಸುವಂತಾಗಲಿ. ಯಾವುದೇ `ಪ್ರಶಸ್ತಿ’ ಪುರಸ್ಕಾರಗಳು `ಸ್ವಂತ’ಕ್ಕಾಗಿ ಇರುವುದಕ್ಕಿಂತಲೂ ಸಮಾಜದ ಏಳಿಗೆಗಾಗಿ, ಒಳಿತಾಗಿ ಲಭಿಸುವಂತಹದಾಗಿರುತ್ತದೆ ಎಂಬ ನನ್ನ ಪತಿಯವರ ಒಂದು ಉಪದೇಶ ನಾನು ಸದಾ ಕೇಳಿದ್ದೆ. ಮಹಿಳೆಯರ ಬಗ್ಗೆ `ನ್ಯಾಯ’ ಇಡುವಂತಾಗಲಿ ಎಂಬ ಆಶಯ ನಮ್ಮದು.
ಪ್ರಶಸ್ತಿ ಬಗ್ಗೆ ಮಾತುಗಳು
ಬೂಕರ್ ಪ್ರಶಸ್ತಿ ಸ್ವೀಕಾರದ ವೇಳೆ ಬಾನು ಮುಷ್ತಾಕ್ ಹೇಳಿದ ಮಾತು “ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಒಬ್ಬ ವ್ಯಕ್ತಿಯಾಗಿ ಸ್ವೀಕರಿಸುತ್ತಿಲ್ಲ. ಬದಲಾಗಿ ಅನೇಕರೊಂದಿಗೆ ಸೇರಿ ಎತ್ತಿದ ಧ್ವನಿಯಾಗಿ ಸ್ವೀಕರಿಸುತ್ತಿದ್ದೇನೆ. ನಾನು ಸಂತೋಷವಾಗಿದ್ದೇನೆ. ನನಗಾಗಿ ಮತ್ತು ವೈವಿಧ್ಯತೆಯ ಹಾಗೂ ಒಳಗೊಳ್ಳುವಿಕೆಯಿಂದ ತುಂಬಿರುವ ಇಡೀ ಜಗತ್ತಿಗಾಗಿ…” ಅಂದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೂಕರ್ ಪ್ರಶಸ್ತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿ ಸರಕಾರದ ವತಿಯಿಂದ ಅವರನ್ನೂ, ದೀಪಾ ಭಾಸ್ತಿಯವರನ್ನು ಅದ್ಧೂರಿಯಾಗಿ ಸನ್ಮಾನಿಸಿದ್ದು ಸ್ವಾಗತಾರ್ಹ. ಇದು ಕರ್ನಾಟಕಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಅತ್ಯಂತ ಹೆಮ್ಮೆಯ ವಿಷಯ. ಬಾನು ಮುಷ್ತಾಕ್ ಬಂಡಾಯ ಸಾಹಿತ್ಯ ಚಳವಳಿಯ ಮೂಲಕ ಬದ್ಧತೆಯಿಂದ ಬೆಳೆದು ಬಂದ ಲೇಖಕಿ ಎಂಬ ಹೆಮ್ಮೆ ನನಗೆ ಎಂದು. ಪ್ರೊ. ಬರಗೂರು ರಾಮಚಂದ್ರಪ್ಪ ನಾಡೋಜ ಹಿರಿಯ ಸಾಹಿತಿ ಹೇಳಿದರು. ಅರವಿಂದ ಅಡಿಗ ಬಳಿಕ ಕರ್ನಾಟಕದ ಎರಡನೇ ಸಾಹಿತಿಗೆ ಕನ್ನಡದ ಮೊತ್ತ ಮೊದಲ ಕೃತಿಗೆ ಈ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ ಸಂದಿದೆ.
ರಾಹುಲ್ ಗಾಂಧಿಯವರು ಈ ಬೂಕರ್ ಪ್ರಶಸ್ತಿಯು ಕನ್ನಡ ಸಾಹಿತ್ಯಕ್ಕೆ ಮತ್ತು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿ ಇಬ್ಬರು ಸಾಧಕಿಯರಾದ ಲೇಖಕಿಯರಿಗೆ ಅಭಿನಂದನೆ ಹೇಳಿದರು.
ಕಥೆ ಬೂಕರ್ ಪ್ರಶಸ್ತಿ ಗೆದ್ದ ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಕಥೆಯಲ್ಲಿ ಏನಿದೆ? ಕಥೆಯ ಸಾರಾಂಶ ಇಲ್ಲಿದೆ.
ಓರ್ವ ಹೆಣ್ಣು ಮಗಳಿಗೆ ತಾನು ಇನ್ನೂ ಓದಬೇಕು ಎಂಬ ಆಶೆ ಇರುತ್ತದೆ. ಮದುವೆಗೆ ಮೊದಲು ತನ್ನಾಸೆಯನ್ನು ಮನೆಯವರಿಗೆ ಹೇಳಿದರೂ ಪಾಲಕರು ಅವಳಿಗೆ ಮದುವೆಯ ಒತ್ತಡ ಹಾಕುತ್ತಾರೆ. ವಿವಾಹದ ನಂತರ ಅವಳಿಗೆ ಮೂರು ಮಕ್ಕಳಾಗುತ್ತದೆ. ತನ್ನ ಗಂಡ ಬೇರೊಂದು ಮಹಿಳೆಯ ಸಂಪರ್ಕದಲ್ಲಿರುವುದು ಕಥಾ ನಾಯಕಿಗೆ ದುಃಖ, ನೋವು ತರುತ್ತದೆ. ಸಹಿಸಲು ಆಗುವುದಿಲ್ಲ ಪತಿಯ ಪರಸ್ತಿçÃಯ ಸಂಬAಧ. ತನ್ನ ಮಕ್ಕಳನ್ನು ಕರೆದುಕೊಂಡು ತವರಿಗೆ ಮರಳುತ್ತಾಳೆ. ತವರಿನಲ್ಲೂ ಅವಳಿಗೆ ಸಾಂತ್ವನ ಹೇಳುವವರಿಲ್ಲ. ಸಮಸ್ಯೆಯನ್ನು ಪರಿಹರಿಸುವವರಿಲ್ಲ. ತನ್ನ ದುಃಖಿತ ಬದುಕನ್ನು ಅವಳು ಅಂತ್ಯ ಮಾಡಲು ನಿರ್ಧರಿಸುತ್ತಾಳೆ. ಅಂತಿಮವಾಗಿ ಅವಳು `ಆತ್ಮಹತ್ಯೆ’ಗೆ ಸಿದ್ಧಳಾಗುತ್ತಾಳೆ. ತನ್ನ ಮೂರು ಮಕ್ಕಳ ಕಣ್ಣು ತಪ್ಪಿಸಿ ಆಕೆ ಸಾಯಲು ಮೈಗೆ ಬೆಂಕಿ ಹಚ್ಚುವ ಪ್ರಯತ್ನದಲ್ಲಿ ಇದ್ದಾಗ “ಅಮ್ಮೀ…” ಎಂಬ ಕರೆಗೆ ಕೈಯಲ್ಲಿದ್ದ ಬೆಂಕಿ ಪೊಟ್ಟಣ ಜಾರಿ ಕೆಳಗೆ ಬೀಳುತ್ತದೆ. ಅಪ್ಪನನ್ನು ಕಳೆದುಕಂಡ ನಮ್ಮನ್ನು ಪುನಃ ಅಮ್ಮನಿಲ್ಲದ ತಬ್ಬಲಿಯನಾಗಿಸಲು ಹೊರಟಿದ್ದೀಯಾ? ಅಪ್ಪನಿಗಾಗಿ ಸಾಯಲು ಸಿದ್ಧರಾದ ನೀನು ನಮಗಾಗಿ ಬದುಕಲು ಸಾಧ್ಯವಿಲ್ಲವೇ? ನಮಗೆ ನೀನು ಬೇಕು, ನಮ್ಮನ್ನು ತಬ್ಬಲಿ ಮಾಡಬೇಡಾ ಅಮ್ಮೀ… ಮಗಳು ಸಲ್ಮಾ ಮಾತಿನಿಂದ ವಿಚಲಿತಳಾದ ತಾಯಿ ಮೆಹರೂನ್ ಹೆಪ್ಪುಗಟ್ಟಿದ ದುಃಖವು ಒಮ್ಮೆಲೇ ಮಗಳ ಮಾತಿನಿಂದ ಕೊಚ್ಚಿಕೊಂಡು ಹೋದಂತೇ ನಡುಗಿ ಹೋದಳು. ದೊಡ್ಡ ಮಗಳು ಪುಟ್ಟ ಮಗುವನ್ನು ತಾಯಿಯ ಕಾಲಡಿಯಲ್ಲಿ ಹಾಕಿದ್ದಳು. ಆಳುತ್ತಿದ್ದ ಹಸುಗೂಸನ್ನು ತಾಯಿ ಎತ್ತಿಕೊಂಡು ಎದೆಗೆ ಅವುಚಿಕೊಳ್ಳುತ್ತಾಳೆ. ಎತ್ತರಕ್ಕೆ ಬೆಳೆದಿದ್ದ ದೊಡ್ಡ ಮಗಳು ಗೆಳತಿಯಂತೇ ಅಮ್ಮನಿಗೆ ಸಾಂತ್ವನ ಹೇಳಿದಾಗ ತಾಯಿ ಮೆಹರೂನ್ `ಕ್ಷಮಿಸು ಕಂದಾ’ ಎಂದು ಮಕ್ಕಳ ಮುಂದೆ ತಲೆತಗ್ಗಿಸುತ್ತಾಳೆ. ತಾಯಿಯ ಆರಿ ಹೋದ ಎದೆಯ ಹಣತೆಯನ್ನು ಮಕ್ಕಳ ಪ್ರೀತಿ ಪುನಃ ಬೆಳಗುವಂತೇ ಮಾಡುವ ಈ `ಹಾರ್ಟ್ ಲ್ಯಾಂಪ್’ ಕಥೆಯು ಅಸಹಾಯಕ ತಾಯಿ ಓರ್ವಳ ಪಾಲಿಗೆ ಮಕ್ಕಳೇ ದೀಪವಾಗಿ ಅಮ್ಮನನ್ನು ಮರು ಬದುಕಿಗೆ ಮರಳಿ ಕರೆದೊಯ್ಯುವುದೇ ಕಥೆಯ ಸಾರಾಂಶ. ಈ ಕಥೆಯನ್ನು ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಗೊಳಿಸಿ ಬೂಕರ್ ಪ್ರಶಸ್ತಿಯ ತನಕ ಕೊಂಡೊಯ್ಯಲು ಲೇಖಕಿ ದೀಪಾ ಭಾಸ್ತಿಯ ಸಹಕಾರ ಇಲ್ಲಿ ಹೆಚ್ಚು ಮಾನ್ಯತೆ ಪಡೆಯುತ್ತದೆ. ಬಹುಶಃ ಕನ್ನಡದ ಬರಹಗಾರರ ಕಥೆ, ಕಾದಂಬರಿಯನ್ನು ಹೀಗೆ ಇಂಗ್ಲಿಷ್ಗೆ ಅನುವಾದ ಮಾಡಿದರೆ ವಿಶ್ವದ ಶ್ರೇಷ್ಠವಾದ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಆಯ್ಕೆ ಆಗಲೂಬಹುದು. ಇನ್ನಾದರೂ ಬಾನು ಮುಷ್ತಾಕ್ರ ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ಸಾಹಿತ್ಯ ಕ್ಷೇತ್ರದಲ್ಲಿ ಸಿಗುವಂತಾಗಲಿ.
ಶಹನಾಝ್ ಎಂ.