ಓದುಗರೇ! ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ ಧರ್ಮ ಎಂದು ಕಚ್ಚಾಡುತ್ತಿರುವ ಈ ಸಮಾಜದಲ್ಲಿ ಎರಡು ಬೇರೆ ಧರ್ಮಗಳಿಗೆ ಸೇರಿದ ಕುಟುಂಬಗಳು ಅನ್ಯೋನ್ಯವಾಗಿ ಬಾಳುತ್ತಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚುತ್ತಿದ್ದೇನೆ. ಬಳಗವು ಜಸಿಂತ ಮತ್ತು ನಸೀಮ್ ಎಂಬ ಇಬ್ಬರು ಮಹಿಳೆಯರಿಗೆ ಭೇಟಿ ಮಾಡಿತು.
ಬಳಗ : ಜಸಿಂತ, ನೀವು ಮತ್ತು ನಸೀಮ್ ಬೇರೆ ಧರ್ಮಕ್ಕೆ ಸೇರಿದವರಾಗಿ ಇಷ್ಟು ಪ್ರೀತಿ ಮತ್ತು ಅನ್ಯೋನ್ಯವಾಗಿ ಬಾಳಲು ಹೇಗೆ ಸಾಧ್ಯ?
ಜಸಿಂತ : ನನ್ನ ಅತ್ತಿಗೆ ನಸೀಮ ತುಂಬ ಒಳ್ಳೆಯವರು. ಅವರು ಅತ್ತಿಗೆ ಮಾತ್ರವಾಗಿರದೆ ನನ್ನ ತಂಗಿಯೂ ಆಗಿದ್ದಾರೆ. ತಂಗಿಗಿಂತಲೂ ಆಪ್ತಳು ಎಂದು ಹೇಳಿದರೆ ತಪ್ಪಾಗಲಾರದು. ಅವಳ ಒಳ್ಳೆಯತನ ನಮಗೆ ಪ್ರೀತಿ ಮತ್ತು ಅನ್ಯೋನ್ಯವಾಗಿರಲು ಸಹಕರಿಸುತ್ತದೆ.
ಬಳಗ : ನಿಮ್ಮ ಅಣ್ಣ ಬೇರೆ ಧರ್ಮದ ಹುಡುಗಿಯನ್ನು ವಿವಾಹ ಆದಾಗ ಮನೆಯಲ್ಲಿ ಸಮಸ್ಯೆ ಆಗಲಿಲ್ಲವೇ?
ಜಸಿಂತ : ಅಪ್ಪ-ಅಮ್ಮ ಮತ್ತು ನಮಗೆಲ್ಲರಿಗೂ ವಿರೋಧವಿತ್ತು. ಇಂತಹ ವಿವಾಹಕ್ಕೆ ಯಾರು ಒಪ್ಪುತ್ತಾರೆ? ಆದರೆ ಅಣ್ಣ ತನ್ನಿಷ್ಟದಿಂದ ತನ್ನ ಧರ್ಮವನ್ನು ಬದಲಿಸಿರುವುದರಿಂದ ನಾವು ಏನು ಮಾಡಲು ಸಾಧ್ಯ? ಈ ಬಗ್ಗೆ ಮಾತನಾಡಿದರೆ ಎಲ್ಲರೂ ಬೇಸರ ಪಡುತ್ತಾರೆ ಎಂದು ಅಮ್ಮ ವಿರೋಧಿಸಿದಾಗ, ನಾವು ಯಾರು ವಿರೋಧಿಸಲಿಲ್ಲ. ಆದರೆ ಅಪ್ಪನಿಗೆ ಬಹಳ ಸಮಯದ ತನಕ ಬೇಸರವಿತ್ತು.
ಬಳಗ : ಅಣ್ಣ ತನ್ನ ಧರ್ಮ ಬದಲಾಯಿಸಿದ ನಂತರ ಮೊದಲಿನಂತೆಯೇ ಇದ್ದಾರೆಯೆ? ಅಥವಾ ಬದಲಾಗಿದ್ದಾರೆಯೇ?
ಜಸಿಂತ : ಇಲ್ಲಿ ಅಣ್ಣನು ಸ್ವಲ್ಪವೂ ಬದಲಾಗಲಿಲ್ಲ. ಮೊದಲಿಗಿಂತಲೂ ಹೆಚ್ಚು ನಿಕಟವಾದರು. ಅಪ್ಪ-ಅಮ್ಮನನ್ನು ನೋಡುವುದರಲ್ಲಿರಲಿ ಅಥವಾ ನಮ್ಮೊಂದಿಗಿನ ಸಂಬಂಧವು ಮೊದಲಿಗಿಂತ ಗಟ್ಟಿಯಾಯಿತು.
ಬಳಗ : ನಸೀಮ, ನೀವು ಮತ್ತು ಬಿಲಾಲ್ ಪ್ರೀತಿಸಿ ಮದುವೆಯಾದದ್ದೇ?
ನಸೀಮ : ಇಲ್ಲ. ನಮ್ಮದು ಅರೆಂಜ್ ಮ್ಯಾರೇಜ್. ನನ್ನ ಸಂಬಂಧಿಕರೊಬ್ಬರು ಬಿಲಾಲ್ರ ಸ್ನೇಹಿತರಾಗಿದ್ದರು. ಅವರು ಈ ಸಂಬಂಧವನ್ನು ಮಾಡಿಸಿದರು. ಅಮ್ಮ ಹುಡುಗಿಯನ್ನು ನೋಡಿ ಒಪ್ಪಿದರೆ, ನಾನು ವಿವಾಹ ಆಗುವುದು ಎಂದು ಬಿಲಾಲ್ ಹೇಳಿದರಿಂದ, ಅಮ್ಮ ನನ್ನನ್ನು ನೋಡಲು ಬಂದಿದ್ದರು.
ಬಳಗ : ವಿವಾಹದ ನಂತರ ಅತ್ತೆ ಮನೆಗೆ ಹೋಗಿದ್ದೀರಾ?
ನಸೀಮ : ಹೌದು, ಅಪ್ಪ-ಅಮ್ಮ ಮತ್ತು ಮನೆವರೆಲ್ಲರು ಬಹಳ ಸಂತೋಷದಿಂದ ಬರಮಾಡಿಕೊಂಡರು. ನಾನು ಅಮ್ಮನಿಲ್ಲದ ಹೆಣ್ಣು ಎಂದು ಅತ್ತೆ ನನ್ನನ್ನು, ನನ್ನ ಸಹೋದರ, ಸಹೋದರಿಯರನ್ನೂ ಪ್ರೀತಿಸುತ್ತಿದ್ದರು.
ಬಳಗ: ನಿಮ್ಮ ಮತ್ತು ನಿಮ್ಮ ಅತ್ತೆ ಮನೆಯವರ ಸಂಬಂಧ ಹೇಗಿದೆ?
ನಸೀಮ : ಅಲ್ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿಗಳು) ಬಹಳ ಉತ್ತಮ ಸಂಬಂಧ. ನಾದಿನಿ ಮೈದುನನವರೊಂದಿಗೂ ಉತ್ತಮ ಸಂಬಂಧindu ವಿದೆ. ನನ್ನ ಮನೆಯವರೊಂದಿಗೂ ಅವರ ಸಂಬಂಧ ಒಳ್ಳೆದಿದೆ. ನಮ್ಮ ಧರ್ಮ ಯಾವುತ್ತೂ ನಮ್ಮ ಅನ್ಯೋನ್ಯತೆಗೆ ಅಡ್ಡಿ ಬರಲಿಲ್ಲ.
ಬಳಗ : ಜಸಿಂತ, ನಿಮ್ಮ ಅಣ್ಣ ಹಾಗೂ ಅತ್ತಿಗೆಯ ಸಂಬಂಧ ನಿಮ್ಮೊಂದಿಗೆ ಹೇಗಿದೆ?
ಜಸಿಂತ : ಪ್ರೀತಿಯ ಸಂಬಂಧ. ಅಮ್ಮ ಜೀವಂತವಾಗಿರುವ ವರೆಗೆ ಅಮ್ಮನಿಗೆ ಎಲ್ಲ ರೀತಿಯಲ್ಲಿ ಸಹಕರಿಸಿದ್ದಾರೆ. ಅಮ್ಮನ ಯಾವುದೇ ಅಗತ್ಯದ ವಿಷಯದಲ್ಲಿ ಬೇಸರ ಪಡಿಸಲಿಲ್ಲ. ಮಾತ್ರವಲ್ಲದೇ ನಮ್ಮೆಲ್ಲರ ಅಗತ್ಯವನ್ನು ಕೇಳುವ ಮೊದಲೇ ಪೂರೈಸುತ್ತಾರೆ. ನನ್ನ ಆರೋಗ್ಯ ಸರಿ ಇಲ್ಲದಾಗಲೂ ಅಣ್ಣ ಅತ್ತಿಗೆ ನನ್ನನ್ನು ಬಿಡಲಿಲ್ಲ. ಈ ವಿಷಯದಲ್ಲಿ ನಸೀಮ ಎತ್ತಿದ ಕೈ. ನಸೀಮ ನಮಗೆ ಯಾರಿಗೂ ದೂರ ಮಾಡಲಿಲ್ಲ. ನಾವು, ಅವರು ಪರಸ್ಪರ ನಮ್ಮ ಮನೆಗಳಿಗೆ ಭೇಟಿ ಕೊಡುತ್ತೇವೆ.
ಬಳಗ : ನಸೀಮ, ಬಿಲಾಲ್ರ ಸಹೋದರ ಸಹೋದರಿಯರೊಂದಿಗೆ ನಿಮ್ಮ ಸಂಬಂಧ ಹೇಗಿದೆ?
ನಸೀಮ : ಒಂದು ಕುಟುಂಬ ಹೇಗಿರಬೇಕೋ ಹಾಗೆಯೇ ಇದೆ. ಕೆಲವು ತಿಂಗಳ ಹಿಂದೆ, ಅವರ ಓರ್ವ ಹಿರಿಯ ಸಹೋದರಿ ಗಲ್ಫ್ನಲ್ಲಿ 15 ದಿನ ನಮ್ಮೊಂದಿಗೆ ನಿಲ್ಲಲು ಬಂದವರು ಒಂದೂವರೆ ತಿಂಗಳು ನಮ್ಮೊಂದಿಗೆ ಇದ್ದು ಹೋದರು. ನಮ್ಮ ಮಕ್ಕಳು ಮತ್ತು ಅವರೆಲ್ಲರ ಮಕ್ಕಳೊಂದಿಗೆ ಉತ್ತಮ ಸಂಬಂಧ ಇದೆ. ಸುಖ-ದುಃಖಗಳಲ್ಲೆಲ್ಲ ಇಡೀ ಕುಟುಂಬ ಸೇರುತ್ತೇವೆ. ಪರಸ್ಪರ ಉಡುಗೊರೆ ಹಂಚುತ್ತೇವೆ ಮತ್ತು ಪರಸ್ಪರ ಸಹಕರಿಸುತ್ತೇವೆ ಕೂಡ.
ಬಳಗ :ವಿವಾಹದ ಮೊದ ಮೊದಲು ಬಿಲಾಲ್ ತನ್ನ ಮನೆಯವರಿಗೆ ಸಹಕರಿಸುವಾಗ ನಿಮಗೆ ಬೇಸರ ಆಗುತ್ತಿತ್ತೇ
ನಸೀಮ : ಇಲ್ಲ. ಸ್ವಲ್ಪನೂ ಇಲ್ಲ. ಕೆಲಸದ ನಿಬಿಢತೆಯಿಂದ ಬಿಲಾಲ್ಗೆ ಕೆಲವೊಮ್ಮೆ ಅಮ್ಮನಿಗೆ ಫೋನಾಯಿಸಲು ಅಥವಾ ಹಣ ಕಳುಹಿಸಲು ನೆನಪಿಲ್ಲದಾಗ, ನಾನು ಅವರಿಗೆ ನೆನಪಿಸುತ್ತೇನೆ. ಬಿಲಾಲ್ ಫೋನಾಯಿಸದಿದ್ದರೂ ನಾನು ಫೋನಾಯಿಸುತ್ತಾ ಇರುತ್ತೇನೆ. ಹಣ ಕಳುಹಿಸಲು ಬಿಲಾಲ್ಗೆ ಸಮಯ ಇರುವುದಿಲ್ಲವೆಂದು ನಾನೇ ಕಳುಹಿಸಲು ಆರಂಭಿಸಿದೆ. ಕ್ರಮೇಣ ಆ ಜವಾಬ್ದಾರಿಯನ್ನು ಬಿಲಾಲ್ ನನಗೆನೇ ವಹಿಸಿಕೊಟ್ಟರು. ಅವರ ಸಹೋದರ ಸಹೋದರಿಯರಿಗೆ ಹಣದ ಅಗತ್ಯ ಇದ್ದರೆ, ಅವರ ಮೊಬೈಲ್ ನೋಡಿ ನಾನೇ ಕಳುಹಿಸಿಕೊಡುತ್ತೇನೆ. ಅಮ್ಮನಿಗೆ ಕಳುಹಿಸುವ ಹಣ ನಾನು ವಹಿಸಿಕೊಂಡ ನಂತರ ಒಂದು ದಿನ ಕೂಡ ಲೇಟ್ ಮಾಡಲಿಲ್ಲ.
ಬಳಗ : ಅಮ್ಮನ ನಿಧನದ ಸಮಯ ಅಣ್ಣ ಅತ್ತಿಗೆ ಬಂದಿದ್ದರೆ?
ಜಸಿಂತ : ಅಮ್ಮ ಅನಾರೋಗ್ಯಗೊಂಡಾಗ ಅಣ್ಣ ಮತ್ತು ಅತ್ತಿಗೆಯನ್ನೇ ನೆನೆಯುತ್ತಿದ್ದರು. ಅಣ್ಣನಿಗೆ ಕೆಲಸದ ನಿಬಿಢತೆಯಿಂದ ಬರಲು ಆಗುತ್ತಿರದಿದ್ದರೂ ಅತ್ತಿಗೆ ಬರುತ್ತಿದ್ದರು. ನಿಧನದ ಸಮಯ ಕೂಡ ಅಮ್ಮ ಇವರಿಬ್ಬರನ್ನು ಕಾಯುತ್ತಿದ್ದರು. ನಸೀಮ- ಅಮ್ಮನ ಆರೋಗ್ಯ ಸರಿಯಿಲ್ಲ ಎಂದು ಕೇಳಿದ ತಕ್ಷಣ ನಾವು ಹೊರಟೆವು. ಆದರೆ… ಪ್ರಯಾಣ… ನಾವು ಮುಟ್ಟುವಷ್ಟರಲ್ಲಿ ಅಮ್ಮ ನಿಧನ ಹೊಂದಿದ್ದರು. ಬಿಲಾಲ್ ಹೆಚ್ಚಾಗಿ ಗಲ್ಫ್ನಲ್ಲಿರುವುದರಿಂದ ಇಲ್ಲಿಯ ವಿಷಯ ಅವರಿಗೆ ಗೊತ್ತಿಲ್ಲ. ಆದ್ದರಿಂದ ಅಮ್ಮನ ದೇಹವನ್ನು ಶವಾಗಾರದಲ್ಲಿಡುವ ವ್ಯವಸ್ಥೆ, ಅವರಿಗೆ ಉಡಿಸಲು ಸೀರೆ ಮತ್ತು ಹೂವು ಎಲ್ಲದರ ವ್ಯವಸ್ಥೆ ನಾನು ಮಾಡಿಕೊಂಡು ಮರುದಿನ ಮರಣವನ್ನು ಊರಿಗೆ ಕಳುಹಿಸಿದೆ. ಮತ್ತು ಹಿಂದಿನಿಂದ ನಾವು ಕೂಡ ಹೋದೆವು. ಜಸಿಂತ- ಅಮ್ಮ ಮರಣದ ತನಕ ನಮ್ಮೆಲ್ಲರೊಂದಿಗೆ ಹೇಳುತ್ತಿದ್ದರು ಏನೆಂದರೆ ನೀವೆಲ್ಲ ಸಹೋದರ-ಸಹೋದರಿಯರು ಒಂದಾಗಿ ಇರಬೇಕು. ಬೇರೆ ಬೇರೆ ಆಗಬಾರದು. ಈ ಅಣ್ಣ ಅತ್ತಿಗೆಯನ್ನು ದೂರ ಮಾಡಬಾರದು. ನಸೀಮ- ಬಿಲಾಲ್ರ ತಮ್ಮ ಜೋಸೆಫ್ ಅಂದರೆ ನಮ್ಮ ಮಕ್ಕಳಿಗೆ ಪಂಚ ಪ್ರಾಣ. ಅವರಿಗೂ ನಮ್ಮ ಮಕ್ಕಳೊಂದಿಗೆ ತುಂಬಾ ಪ್ರೀತಿ. ನಮ್ಮ ಊರಿಗೆ ಬಂದಾಗ, ನಮ್ಮ ಹೆಚ್ಚಿನ ಕೆಲಸ ಕಾರ್ಯಗಳಿಗೆ ಅವರು ನಮಗೆ ಸಹಕರಿಸುತ್ತಾರೆ. ಬಿಲಾಲ್ ನಮ್ಮೊಂದಿಗೆ ಬಾರದಿದ್ದರೂ ಅವರು ನಮ್ಮೊಂದಿಗೆ ಇರುತ್ತಾರೆ.
ಬಳಗ : ಬಿಲಾಲ್ರೊಂದಿಗೆ ವಿವಾಹದ ನಂತರ ನಿಮ್ಮ ಜೀವನ ಹೇಗೆ ಸಾಗುತ್ತಿದೆ?
ನಸೀಮ : ಅಲ್ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿ) ತುಂಬ ಒಳ್ಳೆಯ ಜೀವನ ಸಾಗಿಸುತ್ತಿದ್ದೇವೆ. ಅವರು ತುಂಬ ಶ್ರಮ ಜೀವಿ. ವಿವಾಹದ ಮೊದಲು ಇದ್ದ ಜೀವನ, ವಿವಾಹದ ನಂತರ ಸಂಪೂರ್ಣ ಬದಲಾಗಿದೆ. ನಾವು ಮಾತ್ರವಲ್ಲಿ ನಮ್ಮೊಂದಿಗೆ ನನ್ನ ಕುಟುಂಬ ಹಾಗೂ ಬಿಲಾಲ್ರ ಕುಟುಂಬವು ಉತ್ತಮ ಜೀವನ ಜೀವಿಸುತ್ತಿದ್ದೇವೆ.ind