ಇತ್ತೀಚೆಗೆ ಇರಾನಿನ ಸೇನಾ ಅಣ್ವಸ್ತ ಕೇಂದ್ರಗಳ ಮೇಲೆ ಇರಾನಿನ ನಾಯಕರನ್ನು ಗುರಿಯಾಗಿರಿಸಿ ಬಾಂಬ್ ದಾಳಿ ಮಾಡಿತು. ಈ ದಾಳಿಗೆ ಇರಾನಿನ ಸೇನಾ ಕಮಾಂಡರ್ ಹುಸೇನ್ ಸಲಾಮೀ ಬಲಿಯಾದರು. ಈ ದಾಳಿಯಲ್ಲಿ ಇನ್ನೂರು ಯುದ್ದ ವಿಮಾನಗಳು ಭಾಗಿಯಾಗಿತ್ತು ಎಂದು ಇಸ್ರೇಲ್ ಸ್ವತಹ ಹೇಳಿಕೊಂಡಿತ್ತು. “ಓಪರೇಶನ್ ರೈಸಿಂಗ್ ಲಯನ್” ಎಂಬ ಹೆಸರಿನಲ್ಲಿ ಇರಾನಿ ನಾಯಕರನ್ನು ಗುರಿಯಾಗಿಸಿಯೇ ದಾಳಿ ಸಂಘಟಿಸಲಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪಶ್ಚಿಮೇಶಿಯಾದಲ್ಲಿ ಇಸ್ರೇಲಿನ ಸದ್ದಡಗಿಸುವ ಅಣ್ವಸ್ತç ಹೊಂದಿರುವ ರಾಷ್ಟç ಇರಾನ್ ಆಗಿದೆ. ಇರಾನ್ ವಿರುದ್ಧ ಅದು ಹಗೆ ಸಾಧಿಸುತ್ತಲೇ ಬಂದಿದೆ. ಇರಾಕ್ ಮತ್ತಿತರ ರಾಷ್ಟçಗಳ ಪ್ರವಾಸದಲ್ಲಿದ್ದ ಇರಾನಿನ ಪ್ರಮುಖ ನಾಯಕರನ್ನು ಕೂಡಾ ಅದು ಕೊಂದು ಹಾಕಿದೆ. ಯಾಕೆಂದರೆ ಇಸ್ರೇಲ್ಗೆ ಇರಾನ್ ಬೆದರಿಕೆಯಾಗಿ ಪರಿಣಮಿಸಿದೆ.
ಆ ಕಾರಣಕ್ಕಾಗಿಯೇ ಇರಾನ್ ಮೇಲೆ ಅದು ದಾಳಿ ಮಾಡಿ ಕಾಲು ಕೆರೆದು ಜಗಳಕ್ಕಿಳಿದಿವೆ. ಇರಾನ್ನ ಪ್ರತಿ ದಾಳಿ ಇಸ್ರೇಲಿನ ಮೇಲೆ ಪ್ರತ್ಯಾಘಾತ ಬೀರಿದೆ. ಈಗಾಗಲೇ ಇಸ್ರೇಲಿನ ನಾಶಕ್ಕೆ ಅದು ಪಣ ತೊಟ್ಟಂತೆ ಕಂಡುಬರುತ್ತಿದೆ. ಇಸ್ರೇಲಿನ ನಾಶದ ವರೆಗೆ ಸುಮ್ಮನಿರುವುದಿಲ್ಲ ಎಂದು ಇರಾನ್ ಹೇಳಿಕೊಂಡಿದೆ. ಯುದ್ಧದಾಹಿ ಇಸ್ರೇಲಿನ ಕಿಡಿಗೇಡಿತನದಿಂದ ವಿಶ್ವದಲ್ಲಿ ಅಶಾಂತಿ ನೆಲೆಸುವ ಸ್ಥಿತಿ ಸನ್ನಾಹವಾಗಿದೆ. ತೈಲಬೆಲೆಗಳು ಅನಿಯಂತ್ರಿತವಾಗಿ ಗಗನಕ್ಕೇರುವ ಸೂಚನೆಗಳು ಗೋಚರವಾಗುತ್ತಿದೆ. ಒಟ್ಟಿನಲ್ಲಿ ವಿಶ್ವದಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಲಿದೆ. ಜನಸಾಮಾನ್ಯರ ಬದುಕಿನ ಮೇಲೆ ಇದರ ದುಷ್ಪರಿಣಾಮ ಬೀರಲಿದೆ. ಇಸ್ರೇಲಿನ ಕಿಡಿಗೇಡಿತನದ ಬಗ್ಗೆ ಮೌನವಾಗಿ ಮತ್ತು ಬಹಿರಂಗವಾಗಿ ಸಹಮತ ವ್ಯಕ್ತಪಡಿಸುವವರು ಚಿಂತಿಸಬೇಕಾಗಿದೆ.
ಇಷ್ಟಕ್ಕೂ ಇರಾನ್ ವಿರುದ್ಧ ಇಸ್ರೇಲ್ ನಡೆಸಿದ ವಾಯು ದಾಳಿಗೂ ನಮಗೂ ಯಾವುದೇ ಸಂಬAಧವಿಲ್ಲವೆAದು ಅಮೇರಿಕ ಹೇಳಿಕೊಂಡಿದೆ. ಆ ಹೆಸರಲ್ಲಿ ನಮ್ಮ ನೆಲೆಗಳ ಮೇಲೆ ಏನಾದರೂ ದಾಳಿಯಾದರೆ ನಾವು ಸುಮ್ಮನೆ ಕೂರಲಾರೆವು ಎಂದು ಅಮೇರಿಕಾ ಹೇಳಿಕೊಂಡಿದೆ. ಆದರೆ ಇಸ್ರೇಲ್ ನಡೆಸಿದ ದಾಳಿಯ ಬಗ್ಗೆ ನಮಗೆ ಸಂಬAಧವಿಲ್ಲ ಎಂದು ಅಮೇರಿಕಾ ಹೇಳಿದ್ದನ್ನು ನಂಬುವAತಿಲ್ಲ. ಇಲ್ಲವೆಂದಾರೆ ಇರಾನ್ ಮೇಲಿನ ಇಸ್ರೇಲಿನ ಸೇನಾ ದಾಳಿಯನ್ನು ಅಮೇರಿಕಾ ಖಂಡಿಸದಿರುವುದೇಕೆ? ಯಾಕೆಂದರೆ ಅಮೇರಿಕ ಮತ್ತು ಇಸ್ರೇಲಿನ ನಡುವಿನ ಈ ವರೆಗಿನ ಮೈತ್ರಿಯ ಸಂಬAಧವೇ ಅದಕ್ಕೆ ಪುಷ್ಟಿ ನೀಡುತ್ತವೆ. ಇಸ್ರೇಲ್ ಈಗ ಅಮೇರಿಕಾದ ಪ್ರಭಾವದ ಮೇಲೆಯೇ ಕಿಡಿಗೇಡಿತನ ಮಾಡುತ್ತಿವೆ. ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅಮೇರಿಕಾ ಮತ್ತು ಬ್ರಿಟನ್ ಫ್ರಾನ್ಸ್ ದೇಶಗಳನ್ನು ಯುದ್ದ ರಂಗಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆ ಮೂಲಕ ಟ್ರಂಪ್ ಹತ್ಯೆಗೆ ಇರಾನ್ ಶ್ರಮಿಸುತ್ತಿದೆ ಎಂಬ ದಾಳವನ್ನು ಎಸೆದಿದ್ದಾರೆ. ನಿಜಕ್ಕೂ ಇಸ್ರೇಲ್ ಜಗತ್ತಿಗೆ ಮಾರಕವಾಗುತ್ತಿದೆ. ಜಗತ್ತಿನ ಸ್ವಾಸ್ಥö್ಯವನ್ನು ಕೆಡಿಸುತ್ತಿದೆ. ತಮ್ಮ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಫೆಲೆಸ್ತೀನಿಯರ ಮಾರಣ ಹೋಮ ನಡೆಸುತ್ತಿದೆ. ಮಹಿಳೆಯರು ಮಕ್ಕಳು ಸೇರಿ ಗಾಝಾದಲ್ಲಿ 54000 ಮಂದಿಯನ್ನು ಹತ್ಯೆಗೈದಿದ್ದಾರೆ. ಅಧಿಕೃತ ವರದಿಯನುಸಾರ 1,23,977 ಮಂದಿ ಗಾಯಾಳುಗಳಾಗಿದ್ದಾರೆ. ಗಾಝಾದ ಕೃಷಿ ಭೂಮಿಯಲ್ಲಿ ಶೇಕಡಾ 5ರಷ್ಟು ಮಾತ್ರ ಕೃಷಿ ನಡೆಸಲು ಯೋಗ್ಯವಾಗಿದೆ. ಶೇಕಡಾ 77.8 ರಷ್ಟು ಕೃಷಿ ಭೂಮಿನ್ನು ಸಂಪೂರ್ಣ ನಾಶಪಡಿಸಲಾಗಿದೆ. ಸಂತ್ರಸ್ತರಿಗೆ ಗಾಯಾಳುಗಳಿಗೆ ವಿಶ್ವಸಂಸ್ಥೆಯ ನಿಯಂತ್ರಣದಲ್ಲಿ ಔಷಧ, ಆಹಾರ ತಲುಪಿಸುವುದನ್ನು ತಡೆಯಿತು. ಮಕ್ಕಳು ಮರಿಗಳೆನ್ನದೆ, ವೃದ್ದರು ಮಹಿಳೆಯರು ಔಷಧವಿಲ್ಲದೆ, ಹೊಟ್ಟೆಗೆ ಅನ್ನ ಆಹಾರವಿಲ್ಲದೆ ಪ್ರಾಣ ಕಳಕೊಳ್ಳುವ ಸ್ಥಿತಿಯನ್ನು ಈ ಇಸ್ರೇಲ್ ಮಾಡಿದೆ. ಹೀಗೆ ಗಾಝಾದ ನೆಲದಲ್ಲಿ ಮಾರಣ ಹೋಮ ನಡೆಸಿ ನರಕ ಸದೃಶಗೊಳಿಸಿದ ಇಸ್ರೇಲ್ ಯಾವ ರೀತಿಯಲ್ಲಿಯೂ ಕ್ಷಮೆಗೆ ಅರ್ಹವಲ್ಲ. ಈ ಮಾರಣ ಹೋಮದ ಅಂತಿಮ ಹಂತಕ್ಕೆ ತಲುಪಿದಾಗ ಅಮೇರಿಕಾ ಬ್ರಿಟನ್ ಜರ್ಮನಿ, ಕೆನಡಾ ದೇಶಗಳು ಇಸ್ರೇಲ್ ಜೊತೆಗಿನ ಆರ್ಥಿಕ ವ್ಯವಹಾರಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿವೆ. ಫೆಲೆಸ್ತೀನ್ ಸದಸ್ಯತ್ವ ಹೊಂದಿರುವ ಅರಬ್ ಲೀಗ್, ಓಐಸಿ ಮುಂತಾದ ಒಕ್ಕೂಟದ ದೇಶಗಳು ಇಸ್ರೇಲ್ ಜೊತೆ ವ್ಯಾಪಾರ ವಹಿವಾಟು ನಡೆಸುತ್ತಿದೆ. ಫೆಲೆಸ್ತೀನ್ಗೆ ಬೆಂಬಲ ವ್ಯಕ್ತಪಡಿಸುವವರನ್ನು ಬೇಟೆಯಾಡುತ್ತಾ ಗಡಿಪಾರು ಮಾಡುವುದು ಜೈಲಿಗೆ ಹಾಕುವುದು ಇಂತಹಾ ಕೃತ್ಯದಲ್ಲಿ ಟ್ರಂಪ್ ನಿರತರಾಗಿದ್ದಾರೆ.
ಈಗ ಇರಾನ್ ದೇಶವನ್ನು ಮೂಲಭೂತವಾದಿ ರಾಷ್ಟç ಎಂದು ಗೂಬೆ ಕೂರಿಸುವವರಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೂ ಅಮೇರಿಕಾದಿಂದ ದಿಗ್ಬಂಧನ ಅನುಭವಿಸುತ್ತಿರುವ ಇರಾನಿನ ವಾಸ್ತವಿಕ ವಿಚಾರಗಳ ಕುರಿತು ಅರಿಯಬೇಕಾಗಿದೆ. ಇರಾನಿನಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದೆ ಮತ್ತು ಅದು ಸಾರ್ವತ್ರಿಕವಾಗಿ ಉಚಿತವಾಗಿ ದೊರೆಯುತ್ತಿದೆ. ಮೆಡಿಕಲ್ ಕೇರ್ ಕೂಡಾ ಉಚಿತವಾಗಿದೆ. ಶೈಕ್ಷಣಿಕ ರಂಗಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ವೈಜ್ಞಾನಿಕ ರಂಗದಲ್ಲಿ ಶೇಕಡಾ 59 ರಷ್ಟು ಮಹಿಳೆಯರಿದ್ದಾರೆ. ಪಶ್ಚಿಮದ ದೇಶಗಳಲ್ಲಿಯೂ ಹೀಗಿಲ್ಲ. ಅಮೇರಿಕಾ ಕೂರಿಸಿದ ದೊರೆ ಶಾ ಅಲ್ಲಿ ಮಹಿಳೆಯರು ಅರೆನಗ್ನಾವಸ್ಥೆಯ ವಸ್ತç ತೊಟ್ಟಿರುವುದನ್ನು ಕಾಣಬಹುದು. 1976 ರಲ್ಲಿ ಇರಾನಿನಲ್ಲಿ ಶೇಕಡಾ 24 ರಷ್ಟು ಮಹಿಳೆಯರು ಮಾತ್ರ ಸುಶಿಕ್ಷಿತರಾಗಿದ್ದರು. ಈಗ ಅದು ಶೇಕಡಾ ನೂರಕ್ಕೆ ತಲುಪಿದೆ. ಆಗ ಉನ್ನತ ಶಿಕ್ಷಣವನ್ನು ಶೇಕಡಾ ಮೂರರಷ್ಟು ಮಂದಿ ಪಡೆಯುತ್ತಿದ್ದರೆ ಈಗ ಅದು ಶೇಕಡಾ 59 ಕ್ಕೆ ತಲುಪಿದೆ. ಯುನಿವರ್ಸಿಟಿಗಳಲ್ಲಿ 1979 ರಲ್ಲಿ ಶೇಕಡಾ 1.4 ರಷ್ಟಿದ್ದರೆ ಇರಾನಿನಲ್ಲಿ ಇಂದು ಅದು ಶೇಕಡಾ 24 ಕ್ಕೆ ತಲುಪಿದೆ. (ಅಮೇರಿಕಾಗಿಂತಲೂ ಹೆಚ್ಚು). ಇರಾನಿನಲ್ಲಿ ಇಸ್ಲಾಮೀ ಮೂಲಭೂತವಾದಿಗಳಿಂದ ಮಹಿಳೆಯರ ಸ್ವಾತಂತ್ರö್ಯ ಹರಣ ಎಂದು ಅಂದುಕೊAಡವರು ಈ ವಾಸ್ತವವನ್ನು ಅರಿಯಬೇಕಾಗಿದೆ. ಯಾಕೆಂದರೆ ನಮ್ಮಲ್ಲಿ ಇರಾನ್ ದೇಶವನ್ನು ಮೂಲಭೂತವಾದಿ ರಾಷ್ಟç ಎಂದು ಚಿಂತಿಸುವವರಿದ್ದಾರೆ. ಇಸ್ರೇಲಿನ ಕಿಡಿಗೇಡಿತನವನ್ನು ಕಂಡು ಸಂಭ್ರಮಿಸುವವರೂ ಇದ್ದಾರೆ. ಮಾನವೀಯತೆಯ ದೃಷ್ಟಿಯಿಂದ ನಾವು ಚಿಂತಿಸಬೇಕಾಗಿದೆ. ಯಾರಿಂದ ವಿಶ್ವದ ಶಾಂತಿ ಸುವ್ಯವವಸ್ಥೆಗೆ ಹಾನಿಯಾಗುತ್ತಿದೆ ಎಂಬುದನ್ನು ಚಿಂತಿಸಬೇಕು. ಈ ಯುದ್ದದಿಂದಾಗಿ ತೈಲ ಬೆಲೆಗಳು ವಿಪರೀತವಾಗಿ ಏರಿಕೆಯಾಗಿ ಎಲ್ಲ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಲಿದೆ.
ಸಲೀಮ್ ಬೋಳಂಗಡಿ