ಬೇಸಿಗೆಕಾಲ ಆರಂಭವಾಗುತ್ತಿದ್ದಂತೆಯೇ ಸುಡು ಬಿಸಿಲು. ಜೊತೆಗೆ ದೇಶದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಬರಗಾಲ ಉಂಟಾಗುತ್ತದೆ. ವಾಸ್ತವದಲ್ಲಿ ಮಳೆಗಾಲದಲ್ಲಿ ಧಾರಾಳವಾಗಿ ಮಳೆ ಸುರಿಯುವ ಅನೇಕ ಪ್ರದೇಶಗಳು ನಮ್ಮಲ್ಲಿವೆ. ಮಳೆ ನೀರು ಹೆಚ್ಚಾಗಿ ಪ್ರವಾಹ. ನೆರೆ ಬರುವುದೂ ಇದೆ. ಈ ಮಳೆ ನೀರನ್ನು ಹೀಗೆ ಹಾಳಾಗುವುದನ್ನು ತಪ್ಪಿಸಿ ಅದನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಕ್ರಮವನ್ನು ಅಳವಡಿಸಿದರೆ ಖಂಡಿತವಾಗಿಯೂ ಇದರಿಂದ ಎಲ್ಲರಿಗೂ ಪ್ರಯೋಜನ ಪಡೆಯಬಹುದು.
1000 ಚದರ ಅಡಿಗಳ ಪ್ರದೇಶದಿಂದ ವರ್ಷಕ್ಕೆ 3 ರಿಂದ 5 ಲಕ್ಷ ಲೀಟರ್ ಮಳೆ ನೀರು ಲಭ್ಯವಾಗುತ್ತದೆ ಎಂಬುದು ಲೆಕ್ಕಾಚಾರ. 10 ಸೆಂಟ್ ಹೊಲವು 1,60,000 ಲೀಟರ್ ಮಳೆ ನೀರನ್ನು ಭರಿಸುತ್ತದೆ. ಕಾಡು, ಹೊಲ, ಕೆರೆ, ಬಾವಿಗಳು ಮಳೆ ನೀರನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಡುತ್ತದೆ. ಆದುದರಿಂದ ಮಳೆ ನೀರನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಉಪಯೋಗಿಸಿ ನೆಲದೊಳಗೆ ಇಂಗಿಸಿ ಭೂಗರ್ಭ ಜಲಮಟ್ಟವನ್ನು ಹೆಚ್ಚಿಸಲು ಗಮನಹರಿಸಬೇಕು.
ಮನೆ ಮಠಗಳಲ್ಲಿ ಜಲಸಂರಕ್ಷಣಾ ವಿಧಾನಗಳು
ಹಿಂದಿನ ಅವಿಭಕ್ತ ಕುಟುಂಬಗಳು ಇಂದು ನ್ಯೂಕ್ಲಿಯರ್ ಕುಟುಂಬಗಳಾಗಿವೆ. ಒಂದು ಸಣ್ಣ ಮನೆ, ಗೋಡೆ, ಬೇಲಿ ನಿರ್ಮಿಸಿ ಗಡಿಯನ್ನು ಸೃಷ್ಟಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಮನೆಗಳ ನಾಲ್ಕೂ ಕಡೆ ಗೋಡೆಗಳಿರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಮುಂದಿನ ಬಾಗಿಲಿನ ಭಾಗದಲ್ಲಿ ಗೋಡೆ ಇರುತ್ತದೆ. ಇಂತಹ ಸ್ಥಳಗಳಲ್ಲಿ ಗೋಡೆಗಳ ಮೇಲೆ ದ್ವಾರ ಸೃಷ್ಟಿಸಿ ಮಳೆ ನೀರನ್ನು ಹೊರಗೆ ಹಾಕಲಾಗುತ್ತದೆ. ಇದರಿಂದ ಬಾವಿಯಲ್ಲಿ ನೀರಿನ ಸಂಗ್ರಹವು ಕಡಿಮೆಯಾಗುತ್ತದೆ. ಮಲಿನ ಜಲವು ಕೂಡಾ ಇದೇ ರೀತಿಯಲ್ಲಿ ಹರಿಸುವುದರಿಂದ ಪರಿಸರವೂ ಕಲುಷಿತವಾಗುತ್ತದೆ.
ಹಳೆಯ ಕಾಲದಲ್ಲಿ ಸುರಿಯುವ ನೀರು ಅಡುಗೆ ಮನೆ, ತೊಟ್ಟಿಗೆ, ತೆಂಗಿನ ಮರದ ಬುಡಕ್ಕೆ ಹರಿಸುವ ವ್ಯವಸ್ಥೆ ಇತ್ತು. ಆದರೆ ಇಂದು ಎಲ್ಲ ನೀರನ್ನೂ ರಸ್ತೆಯ ಮೇಲೆ ಹರಿಯ ಬಿಡಲಾಗುತ್ತದೆ. ಇದರಿಂದ ನೀರು ಅಲ್ಲಲ್ಲಿ ಸಂಗ್ರಹವಾಗಿ ಸೊಳ್ಳೆಗಳು ಹೆಚ್ಚಾಗಿ ಬೆಳೆಯುತ್ತವೆ. ಹಲವು ರೀತಿಯ ಜ್ವರಗಳು ಬರಲು ಕಾರಣವಾಗುತ್ತದೆ. ಮನೆ ಮಠಗಳಿಂದ ಹರಿಯುವ ಮಳೆಯ ನೀರನ್ನು ಅಡ್ಡಗಟ್ಟಿದರೆ ಬಾವಿಯಲ್ಲಿ ನೀರು ಹೆಚ್ಚಾಗಿ ಸಂಗ್ರಹವಾಗಬಹುದು.
ಮನೆಯ ಅಂಗಳ ಮತ್ತು ಹಿತ್ತಿಲನ್ನು ಕಾಂಕ್ರೀಟ್ ಮಾಡಿದರೆ ಮಾತ್ರ ಆಕರ್ಷಕವಾಗುತ್ತದೆ ಎಂಬ ಭಾವನೆ ಇಂದು ಸರ್ವೇ ಸಾಮಾನ್ಯವಾಗಿದೆ. ಮಳೆ ನೀರು ನಮ್ಮ ಹಿತ್ತಿಲಲ್ಲಿ ಇಂಗಬೇಕು. ಆಗ ಬಾವಿಯಲ್ಲಿ ನೀರು ಸಂಗ್ರಹವಾಗುತ್ತದೆ. ಇಲ್ಲದಿದ್ದರೆ ಕುಡಿಯುವ ಶುದ್ಧ ನೀರಿಗೂ ಕಷ್ಟಪಡಬೇಕಾಗಿ ಬರಬಹುದು.
ಮನೆಯ ಸುತ್ತಲೂ ಜೈವಿಕ ಬೇಲಿಯನ್ನು ನಿರ್ಮಿಸಿದರೆ ಮಳೆಯ ನೀರನ್ನು ಸಂಗ್ರಹಿಸಬಹುದು. ಈ ಮೂಲಕ ಮಳೆ ನೀರನ್ನು ಸಂರಕ್ಷಿಸಬಹುದು. ಮಣ್ಣಿನ ಗೋಡೆಗಳನ್ನು ನಿರ್ಮಿಸಿ ಅವರಲ್ಲಿ ದಾಸವಾಳ, ಹನಿಗುಬ್ಬಿ, ರಾಮಪತ್ರೆಯಂತಹ ಗಿಡಗಳನ್ನು ನಾಟಿ ಮಾಡಿ ಬೆಳೆಸಬಹುದು. ಹಿತ್ತಲಲ್ಲಿ ಸುರಿಯುವ ಮಳೆ ನೀರು ಹೊರಗೆ ಹರಿಯದಂತೆ ಹಿತ್ತಲಿನಲ್ಲಿಯೇ ನೆನೆಸಲು ಅವಕಾಶ ನೀಡಬೇಕು. ಈ ವಿಧಾನವು ಮಣ್ಣಿನ ಗುಣಮಟ್ಟದ ಸುಧಾರಣೆಗೂ ಸಹಾಯಕವಾಗಿದೆ. ಮೇಲ್ಮಟ್ಟದ ಮಣ್ಣು ಫಲವತ್ತಾಗುತ್ತದೆ. ಇದರಿಂದ ಬೆಳೆಗಳಿಗೆಉತ್ತಮ ಮಣ್ಣು ಲಭ್ಯವಾಗುತ್ತದೆ. ಜೊತೆಗೆ ಬಾವಿಯಲ್ಲಿಯೂ ಧಾರಾಳ ನೀರು ಸಂಗ್ರಹವಾಗುತ್ತದೆ.
ಮಣ್ಣಿನ ತಡೆಗೋಡೆ ಮತ್ತು ಗಿಡಗಳನ್ನು ಬೆಳೆಸುವುದರಿಂದ ಒಳ್ಳೆಯ ರೀತಿಯಲ್ಲಿ ಮಳೆ ನೀರು ಸಂರಕ್ಷಣೆ ಸಾಧ್ಯವಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಈ ರೀತಿಯ ಜೈವಿಕ ಬೇಲಿಗಳನ್ನು ನಿರ್ಮಿಸಬಹುದಾಗಿದೆ.
ಮಳೆ ನೀರು ಮನೆಯ ಹಿತ್ತಲಿನಿಂದ ಹೊರಗೆ ಹರಿಯದಿದ್ದರೆ ಹಿತ್ತಲಿನಲ್ಲಿ ಹೆಚ್ಚು ನೀರು ಸಂಗ್ರಹವಾಗಬಹುದು. ಈ ನೀರಿನ ಜಮಾವಣೆಯನ್ನು ತಪ್ಪಿಸಲು ಇಂಗು ಗುಂಡಿಗಳನ್ನು ರಚಿಸಬಹುದು. ಬಾವಿ ಇರುವ ಸ್ಥಳ, ಮಣ್ಣಿನ ಗುಣಮಟ್ಟವನ್ನು ಗಮನದಲ್ಲಿರಿಸಿ ಇಂತಹ ವೇಳೆ ಕೊಯ್ಲು ಗುಂಡಿಗಳನ್ನು ರಚಿಸಬೇಕು. ಪ್ರತಿ ಮನೆಗಳಲ್ಲಿ ಇಂತಹ ಪ್ರಯತ್ನ ಮಾಡಿದರೆ ನಮ್ಮ ಮನೆಗಳಲ್ಲಿರುವ ಬಾವಿಗಳೇ ಶುದ್ಧ ನೀರಿನ ಮೂಲಗಳಾಗಿ ಮಾರ್ಪಾಟಾಗಬಲ್ಲದು.
ಮೇಲ್ಛಾವಣೆ ಮಳೆ ನೀರು ಸಂಗ್ರಹಣೆ
ಮನೆಯ ಮೇಲ್ಛಾವಣೆಯಿಂದ ಬೀಳುವ ಮಳೆ ನೀರನ್ನು ಪೈಪುಗಳು ಮತ್ತು ತೊಟ್ಟಿಗಳ ಸಹಾಯದಿಂದ ನೇರವಾಗಿ ಸಂಗ್ರಹಿಸುವ ವಿಧಾನವನ್ನು ಮೇಲ್ಛಾವಣೆ ಮಳೆ ನೀರು ಸಂಗ್ರಹಣೆ (Roof Top Rain Water Harvesting) ಎಂದು ಕರೆಯಲಾಗುತ್ತದೆ.
ಈ ಪೈಪುಗಳು ಮತ್ತು ತೊಟ್ಟಿಗಳ ಮೂಲಕ ಹರಿದು ಬರುವ ಮಳೆ ನೀರನ್ನು ಫಿಲ್ಟರ್ ವ್ಯವಸ್ಥೆ ಮೂಲಕ ಶುದ್ಧೀಕರಿಸಬಹುದು.
ಒಬ್ಬ ವ್ಯಕ್ತಿಗೆ ದಿನಕ್ಕೆ 20 ಲೀಟರ್ ನೀರಿನಂತೆ 5 ಜನರಿರುವ ಒಂದು ಕುಟುಂಬಕ್ಕೆ 100 ಲೀಟರ್ ನೀರು ಬೇಕಾಗುತ್ತದೆ ಎಂಬುದು ಸಾಮಾನ್ಯ ಲೆಕ್ಕಾಚಾರ. ಒಂದು ವರ್ಷದಲ್ಲಿ ಸುಮಾರು 100 ದಿನಗಳಷ್ಟು ಬೇಸಿಗೆ ಇರುತ್ತದೆ ಎಂದು ಲೆಕ್ಕ ಹಾಕಿದರೆ, ಪ್ರತಿದಿನ 40 ಲೀಟರ್ನಂತೆ 10,000 ಲೀಟರ್ ಸಾಮರ್ಥ್ಯವಿರುವ ಟ್ಯಾಂಕ್ ಬೇಕಾಗುತ್ತದೆ. ನೀರಿನ ಅಗತ್ಯ ಹೆಚ್ಚಾದರೆ ಟ್ಯಾಂಕಿನ ಸಾಮರ್ಥ್ಯವನ್ನು ಹೆಚ್ಚಿಸಬೇಕು.
ಮೇಲ್ಛಾವಣೆಯಿಂದ ಸಂಗ್ರಹಿಸಿದ ಮಳೆ ನೀರನ್ನು ಶುದ್ಧಿಕರಿಸಿ ಟ್ಯಾಂಕುಗಳಲ್ಲಿ ಸಂಗ್ರಹಿಸಿಟ್ಟರೆ ಅದನ್ನು ಕುಡಿಯಲು ಉಪಯೋಗಿಸಬಹುದು. ಈ ಟ್ಯಾಂಕುಗಳನ್ನು ಸಿಮೆಂಟ್, ಫೈಬರ್ ಅಥವಾ ಫೆರೋ ಸಿಮೆಂಟ್ಗಳಿAದ ರಚಿಸಬಹುದಾಗಿದೆ. ಇದರಿಂದಲೇ ಬಾವಿಗೂ ನೀರನ್ನು ಹರಿಯಬಿಟ್ಟು ಬಾವಿಯ ನೀರಿನ ಪ್ರಮಾಣವನ್ನು ಹೆಚ್ಚಿಸಬಹುದು.
ಭೂಮಟ್ಟದಲ್ಲಿ ಮಳೆ ನೀರು ಸಂರಕ್ಷಣೆ
ಮಳೆ ನೀರನ್ನು ಮಣ್ಣಿನಲ್ಲಿ ಮತ್ತು ವಿವಿಧ ರೀತಿಯ ನೀರಿನ ಸಂರಕ್ಷಣೆಯ ವಿಧಾನದಲ್ಲಿ ಶೇಖರಿಸಿಡುವುದೇ ಭೂಮಟ್ಟದಲ್ಲಿ ಮಳೆ ನಿರು ಸಂಗ್ರಹಣೆ. ಮಹಾತ್ಮಾಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾವಿಗಳ ಪುನಶ್ಚೇತನ (ರೀಚಾರ್ಚ್) ಸಾಧ್ಯವಿದೆ. ಸರಾಸರಿ 10,000 ರೂಪಾಯಿ ಖರ್ಚಿನಲ್ಲಿ ಇದನ್ನು ಅಳವಡಿಸಬಹುದು.
ಮಳೆ ನೀರು ಸಂರಕ್ಷಣೆಯ ಕೊಳಗಳು
ಮಳೆ ನೀರನ್ನು ನೇರವಾಗಿ ಅಥವಾ ಹರಿದು ಹೋಗುತ್ತಿರುವ ನೀರನ್ನೂ ಸಂಗ್ರಹಿಸಿ ಕುಡಿಯುವ ಹೊರತಾಗಿ ಇತರ ಅಗತ್ಯಗಳಿಗೆ ಬಳಸಬಹುದು. ಇದಕ್ಕಾಗಿ ಕಡಿಮೆ ವೆಚ್ಚದ ಸಾಮಗ್ರಿಗಳನ್ನು, ಟರ್ಪಾಲನ್ನು ಬಳಸಿಯೂ ಸರಳ ನಿರ್ಮಾಣಗಳನ್ನು ಮಾಡಬಹುದು. ಬಾವಿಯ ಸುತ್ತಲೂ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಬಹುದು.
ಮಳೆ ನೀರನ್ನು ಭೂಮಿಯೊಳಗೆ ಇಂಗಿಸಲು ಕಡಿಮೆ ವೆಚ್ಚದ ಗುಂಡಿಗಳನ್ನು ನಿರ್ಮಿಸಬೇಕು. ಮಳೆಯ ಸಮಯದಲ್ಲಿ ನೀರು ಸಂಗ್ರಹವಾಗಿ ನಿಧಾನವಾಗಿ ಭೂಮಿಯೊಳಗೆ ಇಂಗುವAತೆ ಮಾಡಬಹುದು. 0.6 ಮೀಟರ್ ಅಗಲ ಮತ್ತು ಆಳವಿರುವ ಗುಂಡಿಗಳ ನಿರ್ಮಾಣ ಉತ್ತಮ. ಇದರಿಂದ ಭೂಮಿಯೊಳಗಿನ ನೀರಿನ ಮಟ್ಟವೂ ಹೆಚ್ಚಾಗುತ್ತದೆ.
ಕೆಂಪು ಕಲ್ಲುಗಳು ಮತ್ತು ಕಲ್ಲಿನ ಕ್ವಾರಿಗಳು
ಬಳಕೆಯಾಗದ ಕೆಂಪು ಕಲ್ಲಿನ ಗುಂಡಿಗಳು. ಬಾವಿಗಳು ಇತ್ಯಾದಿಗಳನ್ನು ಜಲಾಶಯಗಳಾಗಿ ಪರಿವರ್ತಿಸಬಹುದಾಗಿದೆ. ಮನೆಗಳ ಛಾವಣೆ ಮತ್ತು ಅಂಗಳಗಳ ಮೇಲೆ ಬೀಳುವ ನೀರನ್ನು ಪೈಪ್ಗಳು ಅಥವಾ ಕಾಲುವೆಗಳ ಮೂಲಕ ಅಂತಹ ಹೊಂಡ ಮತ್ತು ಕ್ವಾರಿಗಳಿಗೆ ಹರಿಸಿದರೆ ಅದು ಮಣ್ಣಿನಲ್ಲಿ ಇಂಗಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಉಪಯುಕ್ತವಾಗುತ್ತದೆ.
ತಡೆಗೋಡೆಗಳು
ಹೊಳೆಗಳು ನದಿಗಳ ಕಿರಿದಾದ ಭಾಗಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರನ್ನು ಉಳಿಸಬಹುದು. ಮರಳು ಚೀಲಗಳು ಮತ್ತು ಇತರ ವಸ್ತುಗಳನ್ನು ಬಳಸುವ ಮೂಲಕ ಇದನ್ನು ಹೆಚ್ಚು ಖರ್ಚಿಲ್ಲದೆ ಪರಿಣಾಮಕಾರಿ ರೀತಿಯಲ್ಲಿ ಮಾಡಬಹದು.
ಹೊದಿಕೆ ಮಾಡುವುದು
ಮಣ್ಣನ್ನು ಹೊದಿಕೆ ಮಾಡುವುದರಿಂದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ನೀವು ಒಣ ಎಲೆಗಳು, ಕಸ, ಒಣ ಹುಲ್ಲಿನ ಇತ್ಯಾದಿಗಳನ್ನು ಹೊದಿಕೆ ಮಾಡಲು ಬಳಸಬಹುದು. ಇದು ಮಣ್ಣಿನ ಸಾವಯವ ಪದಾರ್ಥವನ್ನು ಹೆಚ್ಚಿಸುತ್ತದೆ ಮತ್ತು ನೀರು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಅಂತರ್ಜಲದ ಯೋಜನಾಬದ್ಧ ಬಳಕೆ
ಅಂತರ್ಜಲವನ್ನು ನಾವೆಂದೂ ಅನಿಯಂತ್ರಿತವಾಗಿ ಬಳಸಬಾರದು ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಅದು ತನ್ನ ಮೂಲ ಅವಸ್ಥೆಗೆ ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಅದನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ.
ಕೊಳವೆ ಬಾವಿಗಳನ್ನು ಕಡಿಮೆ ಮಾಡಬೇಕು
ಭೂಗರ್ಭ ಜಲವು ನಿರಂತರವಾಗಿ ಕಡಿಮೆಯಾಗುತ್ತಿರುವುದಾಗಿ ಅಧ್ಯಯನಗಳು ತಿಳಿಸುತ್ತವೆ. ಅವೈಜ್ಞಾನಿಕವಾದ ಕೊಳವೆ ಬಾವಿಗಳ ನಿರ್ಮಾಣವು ಇದಕ್ಕೆ ಪ್ರಮುಖ ಕಾರಣವೆನ್ನಲಾಗುತ್ತಿದೆ.
ಅನಿಯಂತ್ರಿತವಾಗಿ ಕೊಳವೆ ಬಾವಿ ಕೊರೆಯುವುದರ ಮೇಲೆ ನಿಯಂತ್ರಣ ಹೇರಬೇಕು.
ವಿವಿಧ ಅಲರ್ಟುಗಳು
ಮಳೆ ಬರುವುದಕ್ಕೆ ಮುಂಚೆಯೇ ಹವಾಮಾನ ವರದಿ ಕೇಂದ್ರವು ವಿವಿಧ ಅಲರ್ಟುಗಳನ್ನು ಘೋಷಿಸುತ್ತದೆ. ನಾಲ್ಕು ಬಣ್ಣಗಳ ಅಲರ್ಟುಗಳನ್ನು ಕೇಂದ್ರ ಹವಾಮಾನ ಇಲಾಖೆ ಹೊರಡಿಸುತ್ತದೆ. ಕೆಂಪು, ಆರೆಂಜ್, ಹಳದಿ ಮತ್ತು ಹಸಿರು. ಮಳೆ ಉಂಟಾಗುವ ಸಾಧ್ಯತೆಯನ್ನು ಗುರುತಿಸಿ ತಯಾರಿ ನಡೆಸಲಿಕ್ಕಾಗಿ ಮತ್ತು ಎಲ್ಲ ವಿಷಯಗಳಲ್ಲೂ ಸಿದ್ಧರಾಗಿರಲು ಈ ಅಲರ್ಟನ್ನು ಘೋಷಿಸಲಾಗುತ್ತದೆ. ಕೆಂಪು ಅಲರ್ಟ್ ಹೊರತುಪಡಿಸಿ ಉಳಿದವುಗಳ ಬಗ್ಗೆ ಹೆಚ್ಚು ಭೀತಿ ಪಡಬೇಕಾದ ಅಗತ್ಯವಿರುವುದಿಲ್ಲ. ಆರೆಂಜ್, ಹಳದಿ ಅಲರ್ಟ್ಗಳನ್ನು ಘೋಷಿಸಿದರೆ ಎಚ್ಚರಿಕೆ ಮತ್ತು ಜಾಗರೂಕತೆ ವಹಿಸಬೇಕು.
ರೆಡ್ ಅಲರ್ಟ್
ಅತಿಯಾದ ಮಳೆ ಉಂಟಾಗುವ ಸಾಧ್ಯತೆ ಇದ್ದರೆ ರೆಡ್ ಆಲರ್ಟ್ ಘೋಷಣೆಯಾಗುತ್ತದೆ. 24 ಗಂಟೆಗಳೊಳಗೆ 204.4 ಮಿಲಿ ಮೀಟರ್ಗಿಂತ ಹೆಚ್ಚಿದ್ದರೆ ಅತಿ ತೀವ್ರವಾದ ಮಳೆ ಬರುವ ಸಾಧ್ಯತೆ ಇರುತ್ತದೆ.
ಆರೆಂಜ್ ಅಲರ್ಟ್
ಭಾರಿ ಮಳೆ ಸಾಧ್ಯತೆ ಇದ್ದರೆ ಆರೆಂಜ್ ಅಲರ್ಟ್ ಘೋಷಣೆಯಾಗುತ್ತದೆ. 24 ಗಂಟೆಗಳೊಳಗೆ 115.6 ಮಿಲಿಮೀಟರ್ನಿಂದ 204.4 ಮಿಲಿ ಮೀಟರ್ ವರೆಗೆ ಮಳೆ ಲಭಿಸುವ ಅತಿಯಾದ ಮಳೆ ಎಂಬುದು ಇದರಿಂದ ಅರ್ಥವಾಗುತ್ತದೆ. ಆರೆಂಜ್ ಅಲರ್ಟ್ ಅತಿ ಗಂಭೀರವಾದ ಮುನ್ನೆಚ್ಚರಿಕೆ ನೀಡುತ್ತದೆ. ಸುರಕ್ಷಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.
ಎಲ್ಲೋ ಅಲರ್ಟ್
ಒಮ್ಮೆಲೆ ಸುರಿಯುವ ಸಾಧ್ಯತೆ ಇರುವ ಮಳೆ ಇದ್ದರೆ ಎಲ್ಲೋ ಅಲರ್ಟ್ ಘೋಷಿಸಲಾಗುತ್ತದೆ. 24 ಗಂಟೆಗಳೊಳಗೆ 64.5 ಮಿಲಿ ಲೀಟರ್ನಿಂದ 115.5 ಮಿಲಿ ಲೀಟರ್ ವರೆಗೆ ಮಳೆಯಾಗುವ ಸಾಧ್ಯತೆ ಇದ್ದರೆ ಅದನ್ನು ಎಲ್ಲೋ ಅಲರ್ಟ್ ಎನ್ನಲಾಗುತ್ತದೆ. ಸುರಕ್ಷಾ ಕ್ರಮವನ್ನು ಜಾಗೃತಗೊಳಿಸಬೇಕು. ವಾತಾವರಣದ ಮೇಲೆ ನಿಗಾ ಇರಲಿ.
ಗ್ರೀನ್ ಅಲರ್ಟ್
ಇದು ಹೆಚ್ಚು ಭಯ ಪಡಬೇಕಾದ ಅವಸ್ಥೆಯಲ್ಲ.
ಮುಹಮ್ಮದ್ ಮುರ್ಸಿ