[ಜುಲೈ 29ರಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ದಿನ. ಹುಲಿಗಳ ತವರೂರಾದ ಭಾರತದಲ್ಲಿ ಹುಲಿಗಳ ಸಂತತಿಯು ಕ್ಷೀಣಿಸುತ್ತಿರುವುದು ಕಳವಳಕಾರಿ ಸುದ್ದಿ. ಅವುಗಳ ಅಭಿವೃದ್ಧಿಗೆ ಐವತ್ತು ವರುಷಗಳ ಹಿಂದೆಯೇ ಪ್ರಾಜೆಕ್ಟ್ ಟೈಗರ್' ಅನ್ನುವ ಯೋಜನೆಯನ್ನು ಜಾರಿಗೆ ತಂದರೂ ಅವು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಇದಕ್ಕೆ ಮೂಲ ಕಾರಣ ಏನು ಅನ್ನುವುದನ್ನು ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ವ್ಯಾಘ್ರನ ಕಾಡಿನಲ್ಲಿ ಸುತ್ತಿ ಬರೋಣ- ಸಂಪಾದಕಿ]
ಸುಮಾರು ಮುನ್ನೂರು ವರುಷಗಳ ಹಿಂದೆ, ನಮ್ಮ ದೇಶದ ದಟ್ಟ ಅಡವಿಗಳಲ್ಲಿ ಹುಲಿಗಳ ಸಂತತಿ ಸುಮಾರು 60 ಸಾವಿರಕ್ಕೂ ಮಿಕ್ಕಿ ಇದ್ದವು. ಆಗ ಈ ದೇಶದಲ್ಲಿ ಇರುವಷ್ಟು ಹುಲಿಗಳ ಸಂಖ್ಯೆ ಇನ್ನಾವುದೇ ರಾಷ್ಟ್ರಗಳಲ್ಲಿ ಇರಲಿಲ್ಲ. ಹಿಂದೆ ರಾಜ-ಮಹಾರಾಜರು, ಸುಲ್ತಾನ-ನವಾಬರು, ಈ ಹುಲಿ ಬೇಟೆಗೆ ಗುಂಪುಗೂಡಿ ಕಾಡಿಗೆ ಹೋಗುತ್ತಿದ್ದರು. ಅವರಿಗೆ ಈ ಹುಲಿಗಳ ಶಿಕಾರಿ ಅನ್ನುವುದು ಸಾಹಸ-ಪರಾಕ್ರಮದ ಸಂಕೇತ. ಭಾರತಕ್ಕೆ ನುಸುಳಿ ಬಂದ ಆಂಗ್ಲರಿಗೂ ಹುಲಿ ಬೇಟೆಯ ಹುಚ್ಚು. ಹತ್ಯೆ ಮಾಡಿದ ಹುಲಿಯ ಎದುರು ಬಂದೂಕು ಹಿಡಿದು ಫೋಟೋ ಕ್ಲಿಕ್ಕಿಸುವುದೆಂದರೆ ಅವರಿಗೆ ಶೌರ್ಯದ ಸಾಧನೆ. ಯಾರದೋ ಕಾಡು- ಯಾರದೋ ಜಂಗಲ್ ರಾಜ್! ಸ್ವಾತಂತ್ರ್ಯ ಪೂರ್ವದಲ್ಲಿ ಮಧ್ಯ ಪ್ರದೇಶದ ಒಂದು ಪ್ರಾಂತ್ಯವನ್ನು ಸರ್ಗೂಜ್ ಅನ್ನುವ ಮಹಾರಾಜ ಅಳುತ್ತಿದ್ದ. ಆತನಿಗೆ ಹುಲಿಗಳನ್ನು ಕೊಲ್ಲುವ ಮೋಜು. ಆತನ ಈ ಹವ್ಯಾಸಕ್ಕೆ ಅಂದು 1160 ಹುಲಿಗಳು ಕೈಯಾರೆ ಹತ್ಯೆಯಾದವು. ಇದು ಇತಿಹಾಸದ ಪುಟದಲ್ಲಿ ಅಚ್ಚಳಿಯದ ದಾಖಲೆ! ದಂತ ಪೋರ ವೀರಪ್ಪನ್ನಂತೆ! ಆತ ಕೊಂದ ಆನೆಗಳು ಇನ್ನೊಂದು ಕಪ್ಪು ಚರಿತ್ರೆ! ಮನುಷ್ಯರ ಈ ದುರಾಶೆಗೆ-ಸಾಹಸಕ್ಕೆ ಕಾಡಿನಲ್ಲಿ ವಾಸವಾಗಿದ್ದ ಸಾವಿರಾರು ಹುಲಿಗಳು ನಶಿಸಿ ಹೋದವು. 1970ರಲ್ಲಿ ಈ ಹುಲಿಗಳ ಗಣತಿ ಕಾರ್ಯ ಆರಂಭಿಸಿದಾಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸುದ್ದಿ ಬಹಿರಂಗವಾಯಿತು. ಆಗ ಕಾಡಿನಲ್ಲಿ ಉಳಿದುಕೊಂಡಿದ್ದ ಹುಲಿಗಳ ಸಂಖ್ಯೆ ಕೇವಲ 1780 ಮಾತ್ರ! ಈ ಕಳವಳಕಾರಿ ವರದಿಯನ್ನು ಅಂದಿನ ಕೇಂದ್ರ ಸರಕಾರವು ಬಹು ಗಂಭೀರವಾಗಿ ಪರಿಗಣಿಸಿತು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಹುಲಿಗಳ ಸಂರಕ್ಷಣೆಗೆ
ಪ್ರಾಜೆಕ್ಟ್ ಟೈಗರ್’ ಅನ್ನುವ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದರು. ಬಹಳಷ್ಟು ದೂರಾದೃಷ್ಟಿಯ ಈ ಕಾರ್ಯ ಕ್ರಮವನ್ನು ಸ್ವಯಂ ಇಂದಿರಾ ಗಾಂಧಿಯವರು ಬಹು ಕಾಳಜಿಯಿಂದ ನಿರ್ವಹಿಸಿದರು. ಕಳ್ಳ ಬೇಟೆಯಾಡುವ ಶೋಕಿಗಳಾಗಲಿ, ಆದಿವಾಸಿ ಜನಾಂಗವಾಗಲಿ ಅಥವಾ ಅರಣ್ಯಾಧಿಕಾರಿಗಳೇ ಆಗಲಿ ಅವರಿಗೆ ಕಠಿಣವಾಗಿ ಶಿಕ್ಷಿಸುವ ಬಿಗಿ ಕಾನೂನನ್ನು ಜಾರಿಗೆ ತಂದರು. ಕಾಡು ಕಾಯುವ ವನ ಪಾಲಕರನ್ನು ಹೆಚ್ಚಿಸಲಾಯಿತು. ಈ ಯೋಜನೆಯನ್ನು ಮೆಚ್ಚಿಕೊಂಡ ವಿಶ್ವ ವನ್ಯ ಮೃಗ ನಿಧಿ'ಯು ಇದರ ಉತ್ತೇಜನಕ್ಕೆ ಒಂದು ಮಿಲಿಯನ್ ಡಾಲರ್ ಮೊತ್ತವನ್ನು ಅನುದಾನವಾಗಿ ನೀಡಿತು. ಒಂದು ದಶಕಗಳ ಬಳಿಕ ಮತ್ತೆ ಹುಲಿಗಳ ಗಣತಿ ಆರಂಭ ಮಾಡಿದರು. ಈ ಯೋಜನೆಯು ಪರಿಣಾಮ ಎಂಬAತೆ ಸುಮಾರು 4,334 ಹುಲಿಗಳು ಹೊಸತಾಗಿ ಕಂಡು ಬಂದವು. ಈ ಪ್ರಗತಿಯನ್ನು ಇಡೀ ವಿಶ್ವವೇ ಕೊಂಡಾಡಿತು. ಅಂತೂ ಈ ಯೋಜನೆಯು ಹುಲಿಗಳ ನಿರ್ಮೂಲವನ್ನು ತಡೆಗಟ್ಟುವಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿತು. ವಿಶ್ವಸಂಸ್ಥೆಯು ಈ ಸಾಧನೆಗೆ ಭಾರತದ ಬೆನ್ನು ತಟ್ಟಿತು. ಇದಕ್ಕೆ ಸೂಕ್ತ ಸಮಯದಲ್ಲಿ ಕಡಿವಾಣವನ್ನು ಹಾಕದೆ ಇದ್ದಿದ್ದರೆ, ನಮ್ಮ ಮುಂದಿನ ಪೀಳಿಗೆಯು ಇಂತಹ ಹುಲಿಗಳನ್ನು ಬರೇ ಚಿತ್ರಪಟಗಳಲ್ಲಿ ಕಾಣುವ ದಿನಗಳು ಎದುರಾಗುತ್ತಿತ್ತೆಂದು ಸಂತೋಷ ವ್ಯಕ್ತಪಡಿಸಿತು. ಇಂದಿಗೂ ಈ ಹುಲಿ ಯೋಜನೆಯ ಸಂರಕ್ಷಣಾ ಕಾರ್ಯಕ್ರಮವು ಜಾರಿಯಲ್ಲಿದೆ. ಜೊತೆಗೆ ಜುಲಾÊ 29ರ ದಿನವನ್ನು ಅದು ಅಂತರಾಷ್ಟ್ರೀಯ ಹುಲಿ ದಿನಾಚಣೆಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಹುಲಿಯು ನಿಸರ್ಗದ ಅತ್ಯುತ್ತಮ ಸುಂದರ ಹಾಗೂ ಕೆಚ್ಚದೆಯ ಮೃಗ. ಅದು ಭಾರತದ ರಾಷ್ಟಿçÃಯ ಪ್ರಾಣಿಯಾಗಿಯೂ ಗುರುತಿಸಿಕೊಂಡಿದೆ. ಅದರ ರಾಜ ಗಾಂಭೀರ್ಯದ ನಡಿಗೆ, ತೀಕ್ಷ÷್ಣವಾದ ನೋಟ, ವೇಗದ ಓಟ, ಅಸಾಧರಣ ಮೈ ಕಟ್ಟು, ಭೇಟೆಯಾಡುವ ಶೈಲಿ, ಹೆಣ್ಣು ಹುಲಿಯು ಮಕ್ಕಳನ್ನೂ ಪೋಷಣೆ ಮಾಡುವ ರೀತಿ, ಮಕ್ಕಳನ್ನು ಉಳಿಸಿಕೊಳ್ಳಲು ಅದು ನಡೆಸುವ ಹೋರಾಟ ಇತ್ಯಾದಿ ಅದನ್ನು ರಾಷ್ಟಿçÃಯ ಮೃಗವಾಗಿ ಆಯ್ಕೆ ಮಾಡಲಾಗಿದೆ. ಹುಲಿಗಳ ಗುಂಪು ಕಾಡಿನಲ್ಲಿ ತಮ್ಮದೇ ವ್ಯಾಪ್ತಿ ಪ್ರದೇಶವನ್ನು ಗುರುತಿಸಿಕೊಂಡು ಜೀವಿಸುತ್ತವೆ. ತನ್ನ ಕುಟುಂಬದ ಹೆಣ್ಣು ಹುಲಿಯು ಬೇರೆ ವ್ಯಾಪ್ತಿಗೆ ಹೋಗ ಕೂಡದೆಂದು ಅದು ಸದಾ ಕಟ್ಟೆಚ್ಚರ ವಹಿಸುತ್ತದೆ. ಮರಗಳ ತೊಗಟೆಗಳನ್ನು ತನ್ನ ಹರಿತವಾದ ಉಗುರಿನಿಂದ ಕೆರೆದು ಆಗಾಗ ಅದರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತದೆ. ತನ್ನ ಸರ ಹದ್ದಿಗೆ ಬರುವ ಅನೇಕ ಮರಗಳಿಗೆ ಅದು ಈ ರೀತಿಯ ಗುರುತುಗಳನ್ನು ಹಾಕಿಕೊಳ್ಳುತ್ತದೆ. ಇದು ಉಳಿದ ವ್ಯಾಪ್ತಿಯ ಹುಲಿಗಳು ಅತಿಕ್ರಮಣ ಮಾಡಬಾರದೆಂಬ ಸೂಚನೆ. ಈ ಎಚ್ಚರಿಕೆಯನ್ನು ಉಲ್ಲಂಘಿಸಿಯೂ ಕೆಲವು ಹುಲಿಗಳು ಲಕ್ಷö್ಮಣ ರೇಖೆಯನ್ನು ದಾಟುವುದಿದೆ. ಹೀಗೆ ಆಕ್ರಮವಾಗಿ ನುಸುಳಿದಾಗ ಅದು ತೀವ್ರವಾದ ಪ್ರತಿಭಟನೆ ಮಾಡುತ್ತದೆ. ಕಾದಾಟಕ್ಕೆ ನಿಂತು, ಇಡೀ ಕಾಡೇ ನಡುಗುವಂತೆ ಘರ್ಜಿಸುತ್ತದೆ. ತನ್ನ ಬಿಗಿ ಪಂಜದಲ್ಲಿ ಮುಖಮೂತಿಯನ್ನು ಗಮನಿಸದೆ ಹೊಡೆಯುತ್ತದೆ. ಇದನ್ನು
ಟೆರಿಟರಿ ಪೈಟ್’ ಅನ್ನುತ್ತಾರೆ. ಇಲ್ಲಿ ಒಂದೋ ಎದುರಾಳಿ ಹುಲಿ ತೀವ್ರವಾದ ಗಾಯಗೊಂಡು ಪರಾರಿಯಾಗುತ್ತದೆ ಅಥವಾ ಕಾದಾಟದಲ್ಲಿಯೇ ಹತವಾಗುತ್ತದೆ.
ಮುಖ್ಯ ವಿಚಾರವೆಂದರೆ ಇಲ್ಲಿಯೇ ಹುಟ್ಟಿ ಬೆಳೆದ ಹುಲಿಯು ತನ್ನ ತವರು ಪ್ರದೇಶವನ್ನು ಯಾರಿಗೂ ಬಿಟ್ಟು ಕೊಡಲು ಸಿದ್ಧವಿರುವುದಿಲ್ಲ. ಅದು ತನ್ನ ವ್ಯಾಪ್ತಿ ಪ್ರದೇಶದಲ್ಲಿಯೇ ತನ್ನ ಜೀವಿತವನ್ನು ಕಳೆಯ ಬಯಸುತ್ತದೆ. ಹೀಗಾಗಿ ಕಾಡ್ಗಿಜ್ಜಿಗೂ, ಸರಕಾರದ ಯೋಜನೆಗಳಿಗೂ ಅಥವಾ ಬೇರೆ ರಾಜ್ಯದ ವಲಸೆಗೂ ಅವುಗಳನ್ನು ಸ್ಥಳಾಂತರ ಮಾಡಿದರೆ ಅವು ಬದುಕಿ ಉಳಿಯುವ ಆಯಸ್ಸು ಬಲು ಕಡಿಮೆಯಾಗಿರುತ್ತದೆ.
ನಮ್ಮ ರಾಜ್ಯದ ನಾಗರ ಹೊಳೆಯಂತೆ, ಹುಲಿಗಳಿಗೆ ರಾಜಸ್ತಾನದ ಸರಿಸ್ಕಾ' ಮತ್ತು ಮಧ್ಯ ಪ್ರದೇಶದ
ಪನ್ನಾ’ ಅರಣ್ಯಾಧಾಮಗಳು ಬಲು ಪ್ರಸಿದ್ಧ ತಾಣಗಳು. ಇಲ್ಲಿ ನೂರಾರು ಹುಲಿಗಳಿವೆ. ಆದರೆ ಈ ಪ್ರದೇಶದ ಹುಲಿಗಳನ್ನು ಇನ್ನೊಂದು ತಾಣಕ್ಕೆ ಸ್ಥಳಾಂತರ ಗೊಳಿಸಿದರೆ ಅವು ಹೊಸ ಪ್ರದೇಶವನ್ನು ಇಷ್ಟಪಡುವುದಿಲ್ಲ. ಹೇಗಾದರೂ ತಪ್ಪಿಸಿಕೊಂಡು ತಮ್ಮ ಮೂಲ ಸ್ಥಾನಕ್ಕೆ ಬರಲು ಪ್ರಯತ್ನಿಸುತ್ತವೆ. ಇದಕ್ಕಾಗಿಯೇ ಮೃಗಾಲಯಗಳಲ್ಲಿ ಹುಲಿಗಳ ಸಣ್ಣ ಮರಿಗಳನ್ನೇ ತಂದು, ಪೋಷಣೆ ಮಾಡುತ್ತಾರೆ. ಅವು ಅಲ್ಲೇ ಬೆಳೆದು, ಬಾಲ್ಯ ಸವೆದು ಯೌವನಕ್ಕೆ ಕಾಲಿಡುತ್ತವೆ. ಕೊನೆಗೆ ಮೃಗಾಲಯವನ್ನೇ ಮನೆ ಮಾಡಿಕೊಂಡು ಜೀವನ ಪೂರ್ತಿ ಕಳೆಯುತ್ತವೆ. ಇಲ್ಲದಿದ್ದರೆ, ಅದರ ಜಿನ್ನಲ್ಲಿ ಹರಿದು ಬಂದ ವಂಶವಾಹಿ ಗುಣವನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಿಲ್ಲ.
ಇನ್ನು ಮನುಷ್ಯರಾದ ನಾವು ಪ್ರಾಣಿಗಳ ಕಾಡಿನ ವ್ಯಾಪ್ತಿ ಪ್ರದೇಶವನ್ನು ನಿರ್ಮೂಲನ ಮಾಡುತ್ತೇವೆ. ಅವರ ತವರು ಪ್ರದೇಶವನ್ನು ಕಡಿದು ರೈಲು ಮಾರ್ಗ ನಿರ್ಮಿಸುತ್ತೇವೆ. ದೊಡ್ಡ ದೊಡ್ಡ ರಾಷ್ಟಿçÃಯ ಹೆದ್ದಾರಿಗಳನ್ನು ಅಗೆದು ನಗರಗಳಿಗೆ ಜೋಡಿಸುತ್ತೇವೆ. ಸುರಂಗಗಳನ್ನು ಕೊರೆದು, ಹೊಸ ಹೊಸ ಹಾದಿಗಳನ್ನೂ ಹುಡುಕುತ್ತೇವೆ. ಕಾಡ್ಗಿಚ್ಚು' ಅನ್ನುವ ನಾಟಕವನ್ನು ಆಡಿ ಸಾವಿರಾರು ಪ್ರಾಣಿ-ಪಕ್ಷಿಗಳನ್ನು ದೂರಕ್ಕೆ ಅಟ್ಟಿ ಬಿಡುತ್ತೇವೆ. ಆಗ ಅಲ್ಲಿ ಲಕ್ಷಾಂತರ ಕ್ರಿಮಿ-ಕೀಟಗಳು, ಹುಳ-ಹುಪ್ಪಟೆಗಳು, ಹರಿದಾಡುವ ಸರಿಸೃಪಗಳು ಬೆಂಕಿಗೆ ಆಹುತಿಯಾಗುತ್ತವೆ. ಓಡಿ ಹೋಗಲು ಸಾಧ್ಯವಾಗದ ಅದೆಷ್ಟು ಮರಿಗಳು, ಗರ್ಭವತಿ ಪ್ರಾಣಿಗಳು ಸುಡುವ ಅಗ್ನಿಗೆ ಕರಟಿ ಹೋಗುತ್ತವೆ. ಇದರಿಂದ ಕಾಡಿನ ಇಡೀ ಪರಿಸರವೇ ಅಸಮತೋಲನಗೊಳ್ಳುತ್ತದೆ. ಅವು ಮುಂದೆ ಪರಿಸರದ ಮೇಲೆ ಕೆಟ್ಟದಾದ ಪರಿಣಾಮ ಬೀರುತ್ತವೆ. ಇದರಿಂದಲೇ ಪ್ರಕೃತಿ ವಿಕೋಪಗಳು ಸೃಷ್ಟಿಯಾಗುತ್ತವೆ. ಇಲ್ಲಿ ಹುಲಿಯ ಸಮಸ್ಯೆಯೂ ಇದೇ. ಅವು ವ್ಯಾಪ್ತಿ ಪ್ರದೇಶದಿಂದ ತಪ್ಪಿಹೋದರೆ ಗೊಂದಲಕ್ಕೆ ಸಿಲುಕಿಕೊಳ್ಳುತ್ತವೆ. ತನ್ನ ಕ್ಷೇತ್ರವನ್ನು ಹುಡುಕಾಡಲು ಓಡಾಡುತ್ತವೆ. ಅದು ಸಿಗದೇ ಹೋದಾಗ ನೇರವಾಗಿ ಹತ್ತಿರದ ಹಳ್ಳಿಗೂ, ಊರಿಗೂ ನುಗ್ಗುತ್ತವೆ. ತಿನ್ನಲು ಆಹಾರವು ಸಿಗದೆ ಹೋದಾಗ ಮೇಯುವ ಜಾನುವಾರಗಳನ್ನೂ, ನಾಯಿಗಳನ್ನೂ ಹಿಡಿದು ಕೊಲ್ಲುತ್ತವೆ. ಮನುಷ್ಯರ ಮೇಲೆ ದಾಳಿ ಮಾಡಿದಾಗ
ನರಭಕ್ಷಕ’ ಅನ್ನುವ ಹಣೆಪಟ್ಟಿಯನ್ನು ಪಡೆಯುತ್ತವೆ. ಈ ದುಷ್ಕೃತ್ಯಕ್ಕೆ ಇಲ್ಲಿ ಮನುಷ್ಯನೇ ಕಾರಣವೇ ಹೊರತು, ಹುಲಿಯಲ್ಲ. ಕಾಡಿನ ರಾಜನಾದ ಹುಲಿಯು ಯಾವತ್ತೂ ರಾಜ ಹುಲಿಯೇ. ಅದಕ್ಕೆ ಮನುಷ್ಯನ ಹಣ, ಬಂಗಾರ ಮನೆ-ಮಠಗಳು ಯಾವುದೂ ಬೇಕಿಲ್ಲ. ಮದ, ಮತ್ಸರ, ಅಸೂಯೆ, ಹಗೆತನ ತುಂಬಿಕೊAಡಿರುವ ಕೊಳಕು ಮನಸ್ಸಿನ ರಕ್ತವೂ ಬೇಕಿಲ್ಲ. ಅದಕ್ಕೆ ಬೇಕಾಗಿರುವುದು ತನ್ನ ವ್ಯಾಪ್ತಿ-ತನ್ನ ವಲಯ. ಅಲ್ಲೇ ಅದು ತನ್ನ ಸಂಸಾರದ ಜೊತೆಗೆ ಸಭ್ಯ ಗೃಹಸ್ಥನಾಗಿ ಸ್ವಚಂದವಾಗಿ ಬದುಕಬಲ್ಲದು. ಅದಕ್ಕೆ ನಾಡಿಗೆ ನುಸುಳಿ ಕಳ್ಳರಂತೆ ಅಡಗಿಕೊಳ್ಳಲು, ಭಯದಲ್ಲಿ ನಡುಗಿಕೊಳ್ಳಲು ಯಾವತ್ತೂ ಇಷ್ಟವಿಲ್ಲ. ಅದು ಸದಾ ಸ್ವಾತಂತ್ರ್ಯವನ್ನೇ ಬಯಸುತ್ತವೆ.
ಇವತ್ತು ಹುಲಿ ಸಂರಕ್ಷಣಾ ಯೋಜನೆಗೆ 50 ವರ್ಷಗಳು ದಾಟಿದವು. ಆದರೆ ಅದು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ದುರಂತವೆAದರೆ ನಮ್ಮಲ್ಲಿ ಅದೆಷ್ಟು ಪ್ರಗತಿಪರ ಯೋಜನೆಗಳನ್ನು ರೂಪಿಸಿದರೂ, ಅದನ್ನು ಅಡ್ಡಹಾದಿಯಲ್ಲಿ ಕಬಳಿಸುವವರೇ ಹೆಚ್ಚು. ಇದಕ್ಕೆ ಈ ಪ್ರಾಜೆಕ್ಟ್ ಟೈಗರ್' ಕೂಡ ಹೊರತಲ್ಲ. ಇದರಲ್ಲಿ ಮುಖ್ಯವಾಗಿ ಆದಿವಾಸಿಗಳು, ಶ್ರೀಮಂತರು, ರಾಜಕಾರಣಿಗಳು ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಶಾಮೀಲಾಗಿರುತ್ತಾರೆ. ಇಲ್ಲಿ ಬೇಲಿಯೇ ಹೊಲವನ್ನು ಮೇಯಿದರೆ ಯಾರಿಗೆ ಕಾನೂನಿನ ಕುಣಿಕೆಯೊಳಗೆ ಸಿಕ್ಕಿಸುವುದು? ಮನುಷ್ಯನಿಗೆ ಹಣದ ದಾಹವು ಮಾಡಬಾರದ ಕೆಲಸಗಳನ್ನೂ ಮಾಡಿಸುತ್ತದೆ. ಇವರಿಂದಲೇ ತೆರೆಮರೆಯಲ್ಲಿ ಹುಲಿಗಳ ಮಾರಣ ಹೋಮಗಳು ಜರುಗುತ್ತಲೇ ಇರುತ್ತವೆ. ಇಂದಿಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಲಿಗಳ ಚರ್ಮ, ಮೂಳೆ, ಮಾಂಸ, ಕಣ್ಣುಗಳು, ಉಗುರುಗಳು ಇತ್ಯಾದಿಗಳಿಗೆ ಬಹು ಬೇಡಿಕೆ ಇದೆ. ಇದರಲ್ಲಿ ಅತ್ಯಧಿಕ. ಗ್ರಾಹಕರಿರುವುದು ಥೈಲ್ಯಾಂಡ್ ರಾಷ್ಟçದಲ್ಲಿ. ಹೀಗಾಗಿ ಭಾರತದಿಂದ ಚೀನಾ ಮೂಲಕವಾಗಿ ಹುಲಿಗಳ ದೇಹದ ಭಾಗಗಳು ಅಕ್ರಮವಾಗಿ ರವಾನೆಯಾಗುತ್ತಲೇ ಇರುತ್ತದೆ. ಈ ವ್ಯವಸ್ಥಿತ ಜಾಲದಲ್ಲಿ ಅನೇಕ ಕಾಣದ ಕೈಗಳಿವೆ. ಬಲವಾದ ರಾಜಕೀಯ ಕೈವಾಡವಿರುವ ಕಾರಣ ಅವರನ್ನು ಸುಲಭವಾಗಿ ಬಂಧಿಸುವುದು ಸುಲಭವಲ್ಲ. ಈ ರೀತಿ ಅವ್ಯಾಹಿತವಾಗಿ ಸಾಗುವ ಕಳ್ಳ ಸಾಗಣೆಯಿಂದ ಹುಲಿಗಳ ಸಂತತಿ ಕ್ಷೀಣಿಸುತ್ತಾ ಸಾಗುತ್ತಿದೆ. ದೇಶಕ್ಕೆ ದ್ರೋಹ ಬಗೆಯುವ ಇಂತಹ ನೀಚರೇ ಹುಲಿಗಳ ನಿಜವಾದ ಭಕ್ಷಕರು. ಇವರಿಗೆ ಹಣದಾಶೆಗೆ ಕುಮ್ಮಕ್ಕು ನೀಡುವ ಖಾಕಿ ಅಧಿಕಾರಿಗಳೇ ನಿಜವಾದ ಹುಲಿ ಹಂತಕರು! ಕಳೆದ ಬಾರಿಯ ಹುಲಿ ಗಣತಿಯ ಪಟ್ಟಿಯನ್ನು ಎತ್ತಿ ನೋಡಿದರೆ, ಈಗ ಭಾರತದಲ್ಲಿ ಬದುಕಿ ಉಳಿದಿರುವ ಹುಲಿಗಳ ಸಂಖ್ಯೆ ಕೇವಲ 3,167. ಎಲ್ಲಿಯ ವರೆಗೆ ಸರಕಾರದ ಕಾಯ್ದ-ಕಾನೂನುಗಳು ಸಡಿಲಗೊಳ್ಳುತ್ತವೋ ಅಲ್ಲಿಯವರೆಗೆ ಇಂತಹದ್ದೇ ಫಲಿತಾಂಶಗಳು ಕಾಣಸಿಗುತ್ತದೆ. ಹುಲಿ ಬೇಟೆಯಾಡುವ ಯಾವುದೇ ಹಂತಕನಿರಲಿ, ಆತ ಕಾಡಿಗೆ ಹೊಕ್ಕರೆ
ಕಂಡಲ್ಲಿ ಗುಂಡು’ ಅನ್ನುವ ಕಾನೂನು ಜಾರಿಗೆ ತಂದರೆ ಹುಲಿಗಳ ಸಂತತಿ ಏರ ಬಹುದೋ ಏನೋ?
ಇರ್ಶಾದ್ ಮೂಡಬಿದ್ರಿ