ನೀವು ಕೇಳ್ತಾ ಇರೋದು ಸರಿಯಾಗಿಯೇ ಇದೆ. ಬಹುಮತ ಇರುವ ಹೊರತಾಗಿಯೂ ಈ ಬಾರಿಯ ಉಪರಾಷ್ಟ್ರಪತಿ ಚುನಾವಣೆ ಮೋದಿಗೆ ಅಮಿತ್ ಶಾ ಗೆ ಉಲ್ಟಾ ಹೊಡೆಯುವ ಸಾಧ್ಯತೆಯ ವರದಿಗಳು ಬರ್ತಾ ಇವೆ. ಇದು ಇವರ ನಿದ್ದೆಗೆಡಿಸಿರುವ ಲಕ್ಷಣಗಳು ಕಾಣುತ್ತಿವೆ. ಇಂಡಿಯಾ ಮೈತ್ರಿಕೂಟ ಇವರ ಮೇಲೆ ಎಗರಿ ಬೀಳುವ ಚರ್ಚೆಗಳೂ ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ಮಿತ್ರೋ, ಉಪರಾಷ್ಟ್ರಪತಿಯ ಚುನಾವಣೆ ತಮ್ಮಜೋಳಿಯಲ್ಲಿ ಇದೆ ಎಂದು ಮೋದಿಗೆ ಅನಿಸಿತ್ತು. ಹೀಗಿರುವಾಗಲೇ ಇಂಡಿಯಾ ಮೈತ್ರಿಕೂಟ ಆಡಿದ ಆಟ ಇಡೀ ಸಿಚುವೇಶನನ್ನೇ ಬದಲಿಸಿದಂತೆ ತೋರುತ್ತಿದೆ. ಮೋದಿ ಮತ್ತು ಅಮಿತ್ ಶಾ ರವರ ತಾಳ ಮಳ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ತಳಮಳಕ್ಕೆ ಆರು ಕಾರಣಗಳಿವೆ, ಈ ಕಾರಣಗಳು ಈಗ ದೇಶದ ರಾಜಕೀಯದ ಪ್ರತಿ ಗಲ್ಲಿಯಲ್ಲೂ ಪ್ರತಿಧನಿಸುತ್ತಿದೆ. ಮೊದಲಕರಣ ಆಂಧ್ರಪ್ರದೇಶ. ಹೌದು ಈ ಆಂಧ್ರಪ್ರದೇಶದಲ್ಲಿ ಬಿಜೆಪಿಯೂ ಗಟ್ಟಿಯಾಗಿಲ್ಲ, ಕಾಂಗ್ರೆಸಿನ ನೆಲೆಯೂ ಇಲ್ಲ. ಇಲ್ಲಿಯ ಅಸಲಿ ತಾಕತ್ತು ಜಗನ್ ಮೋಹನ್ ರೆಡ್ಡಿ ಮತ್ತು ಚಂದ್ರ ಬಾಬು ನಾಯ್ಡು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ, ಮೋದಿಗೆ, ಅಮಿತ್ ಶಾರಿಗೆ ಶಾಕ್ ನೀಡಬಹುದಾದವರು ಇವ್ರೇ. ಚಂದ್ರ ಬಾಬು ನಾಯ್ಡು ಎನ್ಡಿಎ ಪರವಾಗಿ ನಿಂತರೆ ಜಗನ್ಮೋಹನ್ ರೆಡ್ಡಿ ಅದರ ಎದುರು ಅಭ್ಯರ್ಥಿಗೆ ಬೆಂಬಲಿಸುತ್ತಾರೆ. ಒಂದು ವೇಳೆ ಜಗನ್ ಬಿಜೆಪಿಗೆ ಸಪೋರ್ಟ್ ಮಾಡಿದರೆ ಚಂದ್ರು ಬಾಬು ನಾಯ್ಡು ಖಂಡಿತವಾಗಿಯೂ ಮುನಿಸಿಕೊಳ್ಳುತ್ತಾರೆ. ಮತ್ತು ಉಲ್ಟಾ ಹೊಡೆಯುತ್ತಾರೆ. ಉಪರಾಷ್ಟ್ರಪತಿಯ ಚುನಾವಣೆಯ ಆಟ ಸಿಲುಕಿರುವದೇ ಇಲ್ಲಿ.
ಮೋದಿ ಮತ್ತು ಅಮಿತ್ ಶಾ ರವರ ತಳಮಳದ ಎರಡನೆಯ ಕಾರಣ ಉಪರಾಷ್ಟ್ರಪತಿ ಚುನಾವಣೆಯ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ. ರೆಡ್ಡಿ ಎಂಬ ತೆಲುಗು ಮೂಲದ ಅಡ್ಡ ಹೆಸರು ಹೈದರಾಬಾದ್ ಮತ್ತು ತೆಲಂಗಾಣ ಮಾತ್ರವಲ್ಲ ಲೋಕಸಭೆಯಲ್ಲಿ ಇರುವ 11 ಸಂಸದರನ್ನೂ ಸೆಳೆಯುತ್ತಿದೆ. ಭಾಷೆ ಮತ್ತು ಪ್ರಾದೇಶಿಕತೆ ಮತಗಳನ್ನು ಇಂಡಿಯಾ ಮೈತ್ರಿಕೂಟದತ್ತ ಜಾರಿಸುವ ಭಯ ಮೋಶಾರಿಗೆ ಕಾಡುತ್ತಿದೆ.
ಮೂರನೆಯ ಕಾರಣ ಬಿಜೆಪಿಯ ಅಭ್ಯರ್ಥಿ ತಮಿಳುನಾಡು ಮೂಲದವರಾದರೆ, ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಆಂಧ್ರಪ್ರದೇಶದವರು. ಇಲ್ಲಿಯೂ ಕೆಲಸ ಮಾಡುವುದು ಭಾಷೆ ಮತ್ತು ಪ್ರಾದೇಶಿಕತೆ ತೆಲುಗು ಪ್ರದೇಶದವರು ಬಿಜೆಪಿಯ ತಮಿಳುನಾಡಿನ ಅಭ್ಯರ್ಥಿಗೆ ಮತ ಕೊಡುವರೇ ಎಂಬುದೊಂದು ಪ್ರಶ್ನೆ. ಇದರೊಂದಿಗೆ ಸಿಗುವ ಮತ್ತೊಂದು ಉತ್ತರ ತಮಿಳಿಗನಾಗಿದ್ದರೂ ಬಿಜೆಪಿಯ ಅಭ್ಯರ್ಥಿಗೆ ತಮಿಳಿಗರು ಮತ ಹಾಕಲ್ಲ.
ನಾಲ್ಕನೆಯ ಕಾರಣ ಮಲ್ಲಿಕಾರ್ಜುನ ಖರ್ಗೆ. ಹೌದು, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ಮಾತ್ರವಲ್ಲ ಅವರು ದಕ್ಷಿಣ ಭಾರತೀಯರು. ಗುಲ್ಬರ್ಗ ದವರಾಗಿರುವುದರಿಂದ ತೆಲುಗು ಕೂಡ ಬಲ್ಲವರಾಗಿದ್ದಾರೆ. ಇದರ ಬರ್ಪೂರ ಪ್ರಯೋಜನ ಪಡೆಯಲು ಅವರಿಗಾಗಲೇ ತೆಲುಗು ಮೂಲದ ಸಂಸದರನ್ನ ಭೇಟಿಯಾಗುತ್ತಿದ್ದಾರೆ. ಮೋದಿ ಮತ್ತು ಅಮಿತ್ ಶಾ ರ ಬಲೆಯಲ್ಲಿರುವ ವೈಎಸ್ಆರ್ಸಿಪಿ ಯ ಸಂಸದ ಮೇಘ ರಘುನಾಥ್ ರೆಡ್ಡಿ ಇವರನ್ನು ಕೂಡ ಭೇಟಿಯಾಗಿದ್ದಾರೆ. ಈ ಭೇಟಿ ಮತ್ತು ಮಾತುಕತೆ ಬಿಜೆಪಿಯವರ ಪಾಲಿಗೆ ಅಪಾಯದ ಕರೆಗಂಟೆ ಅಂತಿದೆ.
ಐದನೆಯ ಕಾರಣ ಇಂಡಿಯಾ ಮೈತ್ರಿಕೂಟದ ರಣನೀತಿ, 2004ರಲ್ಲಿ ಎಪಿಜೆ ಅಬ್ದುಲ್ ಕಲಾಂ ರನ್ನು ಕಣಕ್ಕಿಳಿಸುವಾಗ ಯಾವ ರಣ ನೀತಿಯನ್ನ ಅನುಸರಿಸಲಾಗಿತ್ತೋ, ಅದನ್ನೇ ಇಲ್ಲಿಯೂ ಅನುಸರಿಸಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾವು ಬಿಜೆಪಿ ಅಭ್ಯರ್ಥಿಗೆ ಮತ ಹಾಕಲ್ಲ ಆದರೆ ಇಂಡಿಯಾ ಮೈತ್ರಿಕೂಟದಿಂದ ಯಾವುದೇ ಪಕ್ಷದೊಂದಿಗೆ ಇರದ ಅಭ್ಯರ್ಥಿ ಕಣಕ್ಕಿಳಿಯಲಿ ಎಂದು ಸಂದೇಶ ನೀಡಿದ್ದರು. ಯಾವುದೇ ಪಕ್ಷದಲ್ಲಿ ಇರದ ಸುದರ್ಶನ ರೆಡ್ಡಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.
ಆರನೆಯ ಕಾರಣ ಮತಗಳ ಲೆಕ್ಕಾಚಾರ. ಏನ್ ಡಿ ಎ ಬಳಿ 422 ಮತಗಳು ಇವೆ, ಅಭ್ಯರ್ಥಿಗೆ ಗೆಲುವಿಗೆ ಬೇಕಾಗಿರುವುದು 392 ಮತಗಳು. ಇಂಡಿಯಾ ಮೈತ್ರಿಕೂಟದಲ್ಲಿ 360 ಸಂಸದರು ಇದ್ದಾರೆ. ಒಂದು ವೇಳೆ ನಾಯ್ಡು ಅವರ 18 ಮತ್ತು ಜಗನ್ ಮೋಹನ್ ರೆಡ್ಡಿ ಅವರ 11 ಸಂಸದರು ಬಿಜೆಪಿಯ ಸಕ್ಯ ತೊರೆದರೆ ಎನ್ಡಿಎ ಯ ಲೆಕ್ಕ ಉಲ್ಟಾಪಲ್ಟಾ ಆಗಲಿದೆ.
ಇದು ಗೊತ್ತಾಗಿರುವುದರಿಂದಲೇ ಮೋದಿ ಮತ್ತು ಅಮಿತ್ ಶಾ ಬೇರೆಯದೇ ಆಟವನ್ನು ಆಡುತ್ತಿದ್ದಾರೆ. ಅದು ಚಂದ್ರ ಬಾಬು ನಾಯ್ಡು ರವರನ್ನು ಬೆದರಿಸುವುದು. ಈಗಾಗಲೇ ಜಾಮೀನಿನ ಮೇಲಿರುವ ಚಂದ್ರ ಬಾಬು ನಾಯ್ಡು ರವರ ಮೇಲೆ ಈಡಿ ಮತ್ತು ಸಿಬಿಐ ಅನ್ನುವ ಚೂ ಬಿಡುವ ಎಚ್ಚರಿಕೆ ನೀಡಿದ್ದಾರೆ. 30 ದಿನ ಜೈಲಿನಲ್ಲಿ ಇದ್ದರೆ ಮುಖ್ಯಮಂತ್ರಿಯ ಪಟ್ಟ ಕಿತ್ತುಕೊಳ್ಳುವ ಕಾನೂನಿನ ಕಡತಗಳನ್ನು ತೋರಿಸಿದ್ದಾರೆ. ಮುಂದೇನಾಗಲಿದೆ ಅದು ನಿಮಗೂ ಕಾಣಲಿದೆ.
ಆರ್ ಎ ಲೋಹಾನಿ, ಮಳಗಿ
ಸುದ್ದಿ ಸಂಪಾದಕ
ಸನ್ಮಾರ್ಗ ನ್ಯೂಸ್ ಡಿಜಿಟಲ್ ಚಾನಲ್