ಒಬ್ಬ ವ್ಯಕ್ತಿ ತಿನ್ನುವ ಆಹಾರದ ಪ್ರಮಾಣ ಡಯಟ್ ಅಥವಾ ಆಹಾರ ಕ್ರಮ. ಡಯಟ್ ಎಂದರೆ ಸಾಮಾನ್ಯವಾಗಿ ಆರೋಗ್ಯಕ್ಕೆ ಸಂಬAಧಪಟ್ಟ ಕಾರಣಗಳಿಂದಾಗಿ (ಉದಾ: ಮಧುಮೇಹ, ಹೃದ್ರೋಗ) ಶರೀರದ ತೂಕವನ್ನು ಕಡಿಮೆ ಮಾಡಲು ಅಥವಾ ಶರೀರ ತೂಕವನ್ನು ಸಮತೋಲನದಲ್ಲಿಡಲು ನಿಯಂತ್ರಿತ ರೀತಿಯಲ್ಲಿ ಆಹಾರವನ್ನು ಸೇವಿಸುವುದಾಗಿದೆ.
ಆಹಾರವನ್ನು ಆರೋಗ್ಯಕರವಾಗಿ ಮಾರ್ಪಡಿಸಲು ಮೇಕ್ರೋ ನ್ಯೂಟ್ರಿಯೆಂಟ್ಗಳನ್ನು (ಕಾರ್ಬೋಹೈಡ್ರೇಟ್, ಕೊಬ್ಬು, ಪ್ರೊಟೀನ್) ಕ್ರಮಬದ್ಧಗೊಳಿಸಿದರೆ ಸಾಕಾಗುತ್ತದೆ. ಶರೀರದ ಬೆಳವಣಿಗೆ, ಆರೋಗ್ಯಪೂರ್ಣವಾಗಿರಲು, ರೋಗರಹಿತರಾಗಿರಲು ಅಗತ್ಯವಾದ ಎಲ್ಲ ಪೋಷಕಾಂಶಗಳಿAದ ಕೂಡಿದ ಸಮೀಕೃತ ಆಹಾರವನ್ನು ಸೇವಿಸಬೇಕು.
ಯಾರು ಡಯಟ್ (ಪಥ್ಯ) ಪಾಲಿಸಬೇಕು?
ಎಲ್ಲರೂ ದೇಹ ತೂಕವನ್ನು ಕಡಿಮೆ ಮಾಡಲು, ರೋಗಾವಸ್ಥೆಯಿಂದ ಹೊರಬರಲು, ಚಿಕಿತ್ಸೆಯ ಭಾಗವಾಗಿ ಪಾಲಿಸಲಾಗದ ಆಹಾರ ಕ್ರಮಗಳಿವೆ.
- ಅನಾರೋಗ್ಯಕರವಾದ ಶರೀರ ಭಾರವನ್ನು ಕಡಿಮೆ ಮಾಡಬೇಕಾದರೆ ತಿನ್ನುವ ಆಹಾರದ ಕ್ಯಾಲರಿ ಮತ್ತು ದೇಹದ ಚಟುವಟಿಕೆಗಳಿಂದ ಖರ್ಚಾಗುವ ಕ್ಯಾಲರಿಯ ಪ್ರಮಾಣ ಸಮ ತೂಕದಲ್ಲಿರಬೇಕು.
- ಪ್ರತಿದಿನ ಕೊಬ್ಬಿನಿಂದ ಬೇಕಾಗುವ ಶಕ್ತಿ 30% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸಾಕಾಗುತ್ತದೆ. ಇದಕ್ಕಾಗಿ ಆಹಾರವನ್ನು ತಯಾರಿಸುವಾಗ ಹುರಿಯುವ ಬದಲು ಕುದಿಸುವುದು ಅಥವಾ ಆವಿಯಲ್ಲಿ ಬೇಯಿಸುವುದು ಮಾಡಬೇಕು. ಕೊಬ್ಬು ಕಡಿಮೆ ಪ್ರಮಾಣದಲ್ಲಿರುವ ಹಾಲು, ಹಾಲಿನ ಉತ್ಪನ್ನಗಳು ಮತ್ತು ಮಾಂಸವನ್ನು ಉಪಯೋಗಿಸಬೇಕು.
- ಸಕ್ಕರೆಯಿಂದ ಸಿಗುವ ಶಕ್ತಿಯನ್ನು 50% ಕ್ಕಿಂತ ಕಡಿಮೆ ಇರಿಸಲು ಪ್ರಯತ್ನಿಸಬೇಕು. ಸಕ್ಕರೆ ಮಿಶ್ರಿತ ಸ್ನಾಕ್ಸುಗಳು, ಪಾನೀಯಗಳು, ಮಿಠಾಯಿಗಳು ಮುಂತಾದವುಗಳನ್ನು ಉಪಯೋಗಿಸುವುದನ್ನು ಕಡಿಮೆ ಮಾಡಬೇಕು.
- ಪ್ರತಿದಿನ ಉಪ್ಪು 5% ಗಿಂತ ಕಡಿಮೆ ಪ್ರಮಾಣದಲ್ಲಿ ಸಾಲುತ್ತದೆ. ಉಪ್ಪು ಸೇರಿಸಿದ ಸ್ನಾö್ಯಕ್ಸುಗಳು, ಉಪ್ಪಿನಕಾಯಿ, ಹಪ್ಪಳ ಮುಂತಾದವುಗಳ ಉಪಯೋಗವನ್ನು ಕಡಿಮೆ ಮಾಡಬೇಕು.
ಡಯಟ್ (ಪಥ್ಯ) ಹೇಗೆ ನಿರ್ಧರಿಸಬೇಕು?
ವೈವಿಧ್ಯದಿಂದ ಕೂಡಿದ, ಸಮೀಕೃತವಾದ, ಆರೋಗ್ಯಕರವಾದ ಆಹಾರ ಕ್ರಮಕ್ಕೆ ವೈಯಕ್ತಿಕ ವಿಶೇಷತೆಗಳು- ಶರೀರ ಪ್ರಕೃತಿ, ಪ್ರಾಯ, ಲಿಂಗ, ಜೀವನ ಶೈಲಿ ರೋಗಗಳ ಕಾರಣದಿಂದ ದೇಹದ ತೂಕ ಹೆಚ್ಚಾಗುವುದು ಕಡಿಮೆಯಾಗುವುದು, ಹೆಚ್ಚಿನ ಪೋಷಕಾಂಶಗಳ ಅಭಾವ, ಆಹಾರದ ಅಲರ್ಜಿ, ಶಾರೀರಿಕ ಚಟುವಟಿಕೆಗಳ ಪ್ರಮಾಣ ಮುಂತಾದವುಗಳನ್ನು ಆಧರಿಸಿ, ಆಹಾರ ಕ್ರಮವು ಬದಲಾಗುವುದು. ಆದುದರಿಂದ ಒಬ್ಬ ವ್ಯಕ್ತಿಗೆ ಸೂಕ್ತವಾದ ಪಥ್ಯವು ಇತರರಿಗೆ ಸೂಕ್ತವಾಗಬೇಕೆಂದೇನಿಲ್ಲ.
ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವೈಯಕ್ತಿಕ ಡಯಟ್ ಪ್ಲಾನ್ ಮಾಡಲು ಓರ್ವ ಡಯಟೀಶಿಯನ್ನನ್ನು ಸಮೀಪಿಸಬಹುದು. ಇದು ಆರೋಗ್ಯಕರವಾದ ಜೀವನವನ್ನು ಸಾಗಿಸಲು ನಿಮಗೆ ಸಹಾಯಕವಾಗಬಲ್ಲದು.
ಪಥ್ಯ (ಡಯಟ್) ಎಂದರೆ ಉಪವಾಸದಿಂದಿರುವುದೇ?
ಉಪವಾಸದಿಂದಿರುವುದು ಸರಿಯಾದ ಪಥ್ಯ ವಿಧಾನವಲ್ಲ. ಬದಲಾಗಿ ಸರಿಯಾದ ರೀತಿಯಲ್ಲಿ ಮತ್ತು ಪ್ರಮಾಣದಲ್ಲಿ ಆಹಾರವನ್ನು ಕ್ರಮಬದ್ಧವಾಗಿ ಸೇವಿಸುವುದು ಶರೀರದ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಆಹಾರವನ್ನು ಸೇವಿಸದೆ ಹಸಿವಿನಿಂದಿದಿದ್ದರೆ ಅದು ಪೋಷಕಾಂಶಗಳ ಕೊರತೆ, ಅದರ ಕಾರಣದಿಂದ ಉಂಟಾಗುವ ಶಾರೀರಿಕ ಸಮಸ್ಯೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದು. ದೇಹದ ತೂಕವನ್ನು ಕಡಿಮೆ ಮಾಡಲು ಆಹಾರವನ್ನು ತೊರೆಯುವುದರ ಬದಲಾಗಿ ಆಹಾರವನ್ನು ಕ್ರಮಬದ್ಧಗೊಳಿಸುವುದು ಅಗತ್ಯ.
ಈಟಿಂಗ್ ಡಿಸಾರ್ಡರ್ ಗಂಭೀರವಾದ ಶಾರೀರಿಕ ಮತ್ತು ಭಾವನಾತ್ಮಕ ಸಮಸ್ಯೆಯಾಗಿದೆ. ಇದು ಜೀವಕ್ಕೇ ಅಪಾಯಕಾರಿಯಾಗಬಹುದು. ಶರೀರದ ಆಕೃತಿ, ಭಾರ ಮುಂತಾದವುಗಳ ಕಾರಣ ತೀವ್ರವಾದ ಆತಂಕ ಮತ್ತು ದುಃಖವು ಕೆಲವರಲ್ಲಿ ಈಟಿಂಗ್ ಡಿಸಾರ್ಡರಿಗೆ ಕಾರಣವಾಗಬಲ್ಲದು. ಆದರೆ ಇದು ಯಾರನ್ನು ಬೇಕಾದರೂ ಬಾಧಿಸಬಹುದು. ಆದರೆ ಹೆಚ್ಚಾಗಿ ಹದಿಹರೆಯ ಮತ್ತು ಯುವ ಪ್ರಾಯದಲ್ಲಿ ಇದು ಕಂಡು ಬರುತ್ತದೆ. ಅನೋರೆಕ್ಸಿಯ ನರ್ಮೋಸ (Anorexia nervosa), ಬಲೀಮಿಯ ನೊರ್ಮೋಸ (Bulimia nervosa), ಬಿಂಚ್ ಈಟಿಂಗ್ ಡಿಸಾರ್ಡರ್ (Binge Eeating nervosa) ಮುಂತಾದವುಗಳು ಸಾಧಾರಣ ಈಟಿಂಗ್ ಡಿಸಾರ್ಡರ್ಗಳಾಗಿವೆ.
ದೇಹ ತೂಕದ ಏರಿಳಿತ ಒಂಟಿಯಾಗಿ ತಿನ್ನುವುದು. ಆಹಾರ ತಿಂದ ಬಳಿಕ ಉದ್ದೇಶಪೂರ್ವಕ ಗಂಟಲಿಗೆ ಬೆರಳು ಹಾಕಿ ವಾಂತಿ ಮಾಡುವುದು, ಆಹಾರವನ್ನು ಅಡಗಿಸಿ ಇಡುವುದು, ಉದಾಸೀನತೆ, ಖಿನ್ನತೆ ಉಂಟಾಗುವುದು, ವಿಶೇಷವಾಗಿ ಶರೀರ ಭಾರ ಕಡಿಮೆಯಾಗಿದ್ದರೂ ಯಾವುದೋ ಆಹಾರ ಕ್ರಮವನ್ನು ಬದಲಿಸದೆ ಇರುವುದು ಮುಂತಾದವುಗಳು ಕೆಲವು ಲಕ್ಷಣಗಳಾಗಿವೆ.
ಇಂತಹ ಲಕ್ಷಣಗಳಿರುವವರು ವೈದ್ಯರನ್ನು ಸಂಪರ್ಕಿಸಿ ಈಟಿಂಗ್ ಡಿಸಾರ್ಡರ್ ಇದೆಯಾ ಎಂದು ಪರಿಶೋಧನೆ ನಡೆಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಸಮತೋಲನ ಆಹಾರದ ಪ್ರಮುಖ ಅಂಶಗಳು
- ಮ್ಯಾಕ್ರೋ ನ್ಯೂಟ್ರಿಯೆಂಟ್ಸ್ (ಶರೀರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಪೋಷಕಾಂಶಗಳು)
ಕಾರ್ಬೋಹೈಡ್ರೆಟ್ಗಳು: ಶರೀರದ ಪ್ರಮುಖ ಶಕ್ತಿಯ ಮೂಲ. ಧಾನ್ಯಗಳು, ಸಿರಿ ಧಾನ್ಯಗಳು, ಗೆಡ್ಡೆ ಗೆಣಸುಗಳು.
ಪ್ರೊಟೀನ್ಗಳು: ಮಾಂಸ ಖಂಡಗಳ ನಿರ್ಮಾನಕ್ಕೆ ಇದು ಅತೀ ಅಗತ್ಯ. ಉದಾ: ಕಾಳುಗಳು, ಕೋಳಿಮಾಂಸ, ಮೊಟ್ಟೆ, ಮೀನು, ಹಾಲಿನ ಉತ್ಪನ್ನಗಳು, ನಟ್ಸ್ ಮುಂತಾದವುಗಳಲ್ಲಿ ಇವು ಧಾರಾಳ ಲಭಿಸುತ್ತದೆ.
ಕೊಬ್ಬು: ಶರೀರದ ಚಟುವಟಿಕೆಗಳಿಗೆ ಕೊಬ್ಬು ಅತೀ ಅಗತ್ಯ. ಅಡುಗೆಗೆ ಸಸ್ಸಯ ಮೂಲದ ಬಗ್ಗೆ ಒಮೆಗ- 3 ಇರುವ ಮೀನುಗಳು, ಬೀಟಿಗಳು, ನಟ್ಸ್, ಅವಕಾಡೋ ಆರೋಗ್ಯಕರವಾದ ಕೊಬ್ಬಿಗೆ ಕೆಲವು ಆಹಾರಗಳಾಗಿವೆ. - ಸೂಕ್ಷ್ಮ ಪೋಷಕಾಂಶಗಳು: ವಿಟಮಿನ್ಗಳು, ಖನಿಜಗಳಂತಹ ಸೂಕ್ಷ್ಮ ಪೋಷಕಾಂಶಗಳು ಅಲ್ಪ ಪ್ರಮಾಣದಲ್ಲಿ ದೇಹಕ್ಕೆ ಬೇಕಾಗುತ್ತದೆ. (ಓಟ್ಸ್ನಲ್ಲಿರುವ ವಿಟಮಿನ್ ಸಿ. ಕಾಲಿನಲ್ಲಿರುವ ಕ್ಯಾಲ್ಸಿಯಂ) ಇತ್ಯಾದಿ.
ನಾರುಗಳು: ನಾರುಗಳಿರುವ ಆಹಾರವು ಶರೀರದ ತೂಕವನ್ನು ಇಳಿಸಲು, ಮಧುಮೇಹ, ರಕ್ತದೊತ್ತಡ ಮುಂತಾದವುಗಳನ್ನು ನಿಯಂತ್ರಿಸಲು ಸಹಾಯಕವಾಗಿದೆ. ಧಾನ್ಯಗಳು, ಹಣ್ಣುಗಳು ಮತ್ತು ಹಸಿರು ತರಕಾರಿಗಳು ನಾರಿನಾಂಶದ ಪ್ರಮುಖ ಮೂಲಗಳಾಗಿವೆ. - ಡಾ| ಲೀನಾ ಸಾಜು