ಪ್ರಿಮೆನ್ಸು÷್ಟçವಲ್ ಸಿಂಡ್ರೋಮ್ (PMS) ಎನ್ನುವುದು ಅನೇಕ ಮಹಿಳೆಯರು ತಮ್ಮ ಮುಟ್ಟಿನ ಮೊದಲು ಅನುಭವಿಸುವ ದೈಹಿಕ ಮತ್ತು ಮಾನಸಿಕ ಲಕ್ಷಣಗಳ ಒಂದು ಗುಂಪು. ಇದು ಮುಟ್ಟಿನ ಸುಮಾರು ಒಂದು ಅಥವಾ ಎರಡು ವಾರಗಳ ಮೊದಲು ಪ್ರಾರಂಭವಾಗಿ, ಮುಟ್ಟು ಪ್ರಾರಂಭವಾದ ಕೂಡಲೇ ಅಥವಾ ಅದರ ನಂತರ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಸ್ಥಿತಿಯಾಗಿದ್ದು, ಹೆಚ್ಚಿನ ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇದನ್ನು ಅನುಭವಿಸುತ್ತಾರೆ.
ಪಿ.ಎಂ.ಎಸ್.ನ ಲಕ್ಷಣಗಳು
ಪಿ.ಎಂ.ಎಸ್.ನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಮತ್ತು ತೀವ್ರತೆಯೂ ಭಿನ್ನವಾಗಿರಬಹುದು. ಸಾಮಾನ್ಯ ದೈಹಿಕ ಲಕ್ಷಣಗಳೆಂದರೆ ಸ್ತನಗಳ ನೋವು, ಹೊಟ್ಟೆ ಉಬ್ಬುವುದು, ತಲೆನೋವು, ದೇಹದ ನೋವು, ಆಯಾಸ ಮತ್ತು ನಿದ್ರಾಹೀನತೆ ಸೇರಿವೆ. ಮಾನಸಿಕ ಲಕ್ಷಣಗಳಲ್ಲಿ ಮನಸ್ಥಿತಿ ಬದಲಾವಣೆಗಳು (ಒooಜ Sತಿiಟಿgs)- ಒಂದು ಕ್ಷಣ ಸಂತೋಷ, ಇನ್ನೊಂದು ಕ್ಷಣ ದುಃಖ ಅಥವಾ ಕಿರಿಕಿರಿ, ಆತಂಕ, ಖಿನ್ನತೆ, ಅಸಮಾಧಾನ ಮತ್ತು ಏಕಾಗ್ರತೆಯ ಕೊರತೆ ಇತ್ಯಾದಿ ಸೇರಿವೆ. ಕೆಲವು ಮಹಿಳೆಯರು ಆಹಾರದ ಹಂಬಲ ಅಥವಾ ಹಸಿವಿನಲ್ಲಿ ಬದಲಾವಣೆಗಳನ್ನೂ ಸಹ ಅನುಭವಿಸಬಹುದು.
ಪ್ರಿಮೆನ್ಸು÷್ಟçವಲ್ ಡಿಸ್ಪೂರಿಕ್ ಡಿಸಾರ್ಡರ್ (Pಒಆಆ)
ಇದು ಪಿ.ಎಂ.ಎಸ್.ನ ತೀವ್ರತರಹ ರೂಪ. ಪಿ.ಎಂ.ಡಿ.ಡಿ.ನಲ್ಲಿ ಪಿ.ಎಂ.ಎಸ್.ನ ಲಕ್ಷಣಗಳ ಜೊತೆಗೆ ತೀವ್ರತರಹದ ಕಿರಿಕಿರಿ, ಸಿಟ್ಟಾಗುವಿಕೆ, ಉದ್ವಿಗ್ನತೆ ಅಥವಾ ಖಿನ್ನತೆ ಕಾಣಿಸಿಕೊಳ್ಳಬಹುದು ಮತ್ತು ಈ ಲಕ್ಷಣಗಳು ಅವರ ದೈನಂದಿನ ಚಟುವಟಿಕೆಗಳನ್ನು ಭಾದಿಸಬಲ್ಲಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಬಹುದು.
ಕಾರಣಗಳು
ಪಿ.ಎಂ.ಎಸ್.ಗೆ ನಿಖರವಾದ ಕಾರಣ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಮುಟ್ಟಿನ ಚಕ್ರದ ಸಮಯದಲ್ಲಿ ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಂಬಲಾಗಿದೆ. ಈಸ್ಟೊçಜೆನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್ಗಳ ಬದಲಾವಣೆಗಳಿಗೆ ದೇಹದಲ್ಲಿ ಉಂಟಾಗುವ ಅಸಹಜ ಪ್ರತಿಸ್ಪಂದನೆಗಳು ಇದಕ್ಕೆ ಕಾರಣ ಎನ್ನಲಾಗಿದೆ. ಮಿದುಳಿನ ರಾಸಾಯನಿಕಗಳಲ್ಲಿ ಒಂದಾದ ಸೆರೆಟೊನಿನ್ ಮೇಲೆ ಉಂಟಾಗುವ ಪ್ರಭಾವವೂ ಪಿ.ಎಂ.ಎಸ್. ಹಾಗೂ ಪಿ.ಎಂ.ಡಿ.ಡಿ. ಉಂಟಾಗುವಲ್ಲಿ ಪಾತ್ರ ವಹಿಸಬಹುದಾಗಿದೆ. ಋತುಚಕ್ರದ ಅವಧಿಯುದ್ಧಕ್ಕೂ ಸೆರೆಟೊನಿನ್ ಮಟ್ಟದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಕೆಲವು ಮಹಿಳೆಯರು ಈ ಬದಲಾವಣೆಗಳಿಗೆ ಸೂಕ್ಷö್ಮ ಸಂವೇದಿಯಾಗಿರುತ್ತಾರೆ.
PMS ನಿರ್ವಹಣೆ ಹೇಗೆ?
PMS ಸಾಮಾನ್ಯವಾಗಿ ಗಂಭೀರ ಆರೋಗ್ಯ ಸಮಸ್ಯೆಯಲ್ಲವಾದರೂ, ಅದರ ಲಕ್ಷಣಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಈ ಲಕ್ಷಣಗಳನ್ನು ನಿರ್ವಹಿಸಲು ಹಲವಾರು ಮಾರ್ಗಗಳಿವೆ:
– ಆರೋಗ್ಯಕರ ಜೀವನ ಶೈಲಿ: ಸಮತೋಲಿನ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸಾಕಷ್ಟ ನಿದ್ರೆ ಮಾಡುವುದು ಪಿ.ಎಂ.ಎಸ್. ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
– ಒತ್ತಡ ನಿರ್ವಹಣೆ: ಯೋಗ, ಧ್ಯಾನ, ಉಸಿರಾಟದ ವ್ಯಾಯಮಗಳು ಅಥವಾ ವಿಶ್ರಾಂತಿ ತಂತ್ರಗಳು (ಖeಟಚಿxಚಿಣioಟಿ ಣeಛಿhಟಿiques) ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಲು ಮತ್ತು ಮಾನಸಿಕ ಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡಬಹುದು.
_ ಆಹಾರ ಪದ್ಧತಿ: ಕೆಫೇನ್, ಉಪ್ಪು, ಸಕ್ಕರೆ ಮಿತವಾಗಿ ಬಳಸಿ ಮತ್ತು ಮದ್ಯಪಾನದಿಂದ ದೂರವಿರಿ.
– ವೈದ್ಯರ ಸಲಹೆ: ಲಕ್ಷಣಗಳು ತೀವ್ರವಾಗಿದ್ದರೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
– ಹೋಮಿಯೋಪತಿ ಚಿಕಿತ್ಸೆ: ಹೋಮಿಯೋಪತಿ ಚಿಕಿತ್ಸಾ ವಿಧಾನದಲ್ಲಿ ಪಿ.ಎಂ.ಎಸ್. ಸಮಸ್ಯೆಯನ್ನು ನಿವಾರಿಸಲು ಅನೇಕ ಪರಿಣಾಮಕಾರಿ ಔಷಧಗಳು ಲಭ್ಯವಿದೆ. ಹಾಗೂ ಇತರೆ ಔಷಧಗಳಂತೆ ಇದನ್ನೂ ಸೇವಿಸುದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಹಾಗೂ ಯಾವುದೇ ಬಗೆಯ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಸಾಧ್ಯವಿದೆ.