ಬೇಸಿಗೆಕಾಲ ಆರಂಭವಾಗುತ್ತಿದ್ದಂತೆಯೇ ಸುಡು ಬಿಸಿಲು. ಜೊತೆಗೆ ದೇಶದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಬರಗಾಲ ಉಂಟಾಗುತ್ತದೆ. ವಾಸ್ತವದಲ್ಲಿ ಮಳೆಗಾಲದಲ್ಲಿ ಧಾರಾಳವಾಗಿ ಮಳೆ ಸುರಿಯುವ ಅನೇಕ ಪ್ರದೇಶಗಳು ನಮ್ಮಲ್ಲಿವೆ. ಮಳೆ ನೀರು ಹೆಚ್ಚಾಗಿ ಪ್ರವಾಹ. ನೆರೆ ಬರುವುದೂ ಇದೆ. ಈ ಮಳೆ ನೀರನ್ನು ಹೀಗೆ ಹಾಳಾಗುವುದನ್ನು ತಪ್ಪಿಸಿ ಅದನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಕ್ರಮವನ್ನು ಅಳವಡಿಸಿದರೆ ಖಂಡಿತವಾಗಿಯೂ ಇದರಿಂದ ಎಲ್ಲರಿಗೂ ಪ್ರಯೋಜನ ಪಡೆಯಬಹುದು. 1000 ಚದರ ಅಡಿಗಳ ಪ್ರದೇಶದಿಂದ ವರ್ಷಕ್ಕೆ 3 ರಿಂದ 5 ಲಕ್ಷ ಲೀಟರ್ ಮಳೆ ನೀರು […]



