ಆಹಾರವು ನಮ್ಮ ಜೀವನಶೈಲಿಯ ಬಹುಮುಖ್ಯ ಪಾತ್ರವಾಗಿದೆ. ಸಾಮಾನ್ಯವಾಗಿ ಅಡುಗೆ ಮನೆ ಎಂದರೆ ಅಮ್ಮ ಹಾಗೂ ರುಚಿಕರ ಅಡುಗೆಗಳು ಅಷ್ಟೆ ನಮಗೆ ನೆನಪಾಗುತವೆ. ಆದರೆ ಅಡುಗೆಯಲ್ಲಿ ಬಳಸುವ ಗಿಡಮೂಲಿಕೆಗಳು, ಹಣ್ಣುಗಳು, ತರಕಾರಿಗಳು ಮಸಾಲೆಗಳು ಪ್ರಥಮ ಚಿಕಿತ್ಸೆಗಾಗಿ ಮತ್ತು ನಿರ್ದಿಷ್ಟ ರೋಗಗಳನ್ನು ಪರಿಹರಿಸಲು ಬಳಸಬಹುದಾದ ಪ್ರಾಯೋಗಿಕ ವರ್ಗವಾಗಿದೆ.
ನಿಮಗಿದು ಗೊತ್ತೇ?
ಈ ಕಾಲದಲ್ಲಿ ಕಾಣುತ್ತಿರುವ ರೋಗಗಳಿಗೆ ನಮ್ಮ ಆಹಾರ ಪದ್ಧತಿಯ ಬದಲಾವಣೆಯು ಒಂದು ಕಾರಣವಾಗಿದೆ. ಅದೇಷ್ಟೋ ಕಾಯಿಲೆಗಳಿಗೆ ನಮ್ಮ ಅಡುಗೆ ಮನೆಯಲ್ಲಿಯೇ ಔಷದಿ ಅಡಗಿದ. ನಮ್ಮ ಆಹಾರದ ಪೌಷಕಾಂಶವನ್ನು ತಿಳಿದು ಅದನ್ನು ನಮ್ಮ ದಿನನಿತ್ಯದಲ್ಲಿ ಸರಿಯಾದ ರೀತಿಯಲ್ಲಿ ಅಳವಡಿಸಿದರೆ ನಮ್ಮ ಆರೋಗ್ಯದ ಸಮಸ್ಯೆಯನ್ನು ನಾವು ಸುಧಾರಿಸಬಹುದು.
ಏನಿದು ಅಡುಗೆ ಮನೆಯ ಔಷದಿಗಳು:
ನವಧಾನ್ಯ: ಧಾನ್ಯಗಳಲ್ಲಿ ನಾರಿನಾಂಶ ಎಂದರೆ (ಫೈಬರ್) ಅಧಿಕವಾಗಿರುವುದರಿಂದ ನಮ್ಮ ಜೀರ್ಣ ಶಕ್ತಿಯನ್ನು ನಿಧಾನಗೊಳಿಸಿ ನಮ್ಮ ಹಸಿವನ್ನು ಕಡಿಮೆಗೊಳಿಸುತ್ತದೆ. ಪ್ರೋಟೀನ್, ಫೈಬರ್ ಪಮುಖ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.
ತರಕಾರಿಗಳು ನಮ್ಮ ದಿನ ನಿತ್ಯದಲ್ಲಿ ಸುಲಭವಾಗಿ ಸಿಗುವ ಆರೋಗ್ಯಕರವಾದದ್ದು ಈ ತರಕಾರಿಗಳು, ತರಾಕಾರಿಗಳು ಸಾಕಷ್ಟು ಆಹಾರದ ಫೈಬರ್ ಅನ್ನು ಒದಗಿಸುವ ಮೂಲಕ ನಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಯಾವ ತರಕಾರಿಗಳಲ್ಲಿ ಲಾಭವೇನಿದೆ ಎಂದು ನೋಡಿದರೆ,
ಹಾಗಲಕಾಯಿ: ಇದು ರುಚಿಯಲ್ಲಿ ಕಹಿಯಿದ್ದರೂ, ಹೊಟ್ಟೆಯಲ್ಲಿರುವ ಜಂತುಹುಳಗಳನ್ನು ನಾಶಮಾಡುತ್ತವೆ. ಸಕ್ಕರೆಕಾಯಿಲೆಗೂ ಒಳ್ಳೆಯ ಔಷಧಿ.
ಕ್ಯಾರೆಟ್: ಕ್ಯಾರೆಟ್ ವಿಟಮಿನ್ ಎ ಇದರ ಉತ್ತಮ ಮೂಲವಾಗಿದ್ದು ಕಣ್ಣಿನ ಆರೋಗ್ಯವನ್ನು ಸುಧಾರಿಸಿತ್ತದೆ. ಇದರ ವೈಶಿಷ್ಟ್ಯತೆಯೆಂದರೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಜೊತೆಗೆ ಬೀಟಾ- ಕ್ಯಾರೋಟಿನ್ ಸೇರಿದಂತೆ ಆಂಟಿ ಆಕ್ಸಿಡೆಂಟ್ ಗಳಲ್ಲಿ ಸಮೃದ್ಧವಾಗಿದೆ. ಕ್ಯಾರೆಟ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಕ್ಯಾರೆಟ್ನಲ್ಲಿ ಇರುವ ಖನಿಜ, ಪೊಟ್ಯಾಸಿಯಮ್, ಸೋಡಿಯಂ ಶ್ರೇಣಿಗಳನ್ನು ಸಮತೋಲನಗೊಳಿಸಲು ಮತ್ತು ದೇಹದಿಂದ ಹೊರಹಾಕಲು ಅನುವು ಮಾಡಿಕೊಡುತ್ತದೆ.
ಬೀಟ್ರೋಟ್: ಬೀಟ್ರೋಟ್ ಸಹ ಕಡಿಮೆ ಕ್ಯಾಲರಿಗಳನ್ನು ಹೊಂದಿದ್ದು ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಸಾಕಷ್ಟು ಪೌಷ್ಠಿಕ ಸತ್ವಗಳು ಹೇರಳವಾಗಿ ಹೊಂದಿದೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿದ್ದು, ಮ್ಯಾಂಗನೀಸ್, ಪೋಟಾಸಿಯಂ ಹೆಚ್ಚಾಗಿ ಹೊಂದಿದೆ. ಬೀಟ್ರೋಟ್ ನಮ್ಮ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೀಗೆ ಇನ್ನು ಹಲವಾರು ತರಕಾರಿಗಳು ತನ್ನದೇ ಆದ ವೈಪುಲ್ಯತೆಯನ್ನು ಹೊಂದಿದೆ. ಆದರೆ ಈಗಿನ ಜೀವನಶೈಲಿಯಲ್ಲಿ ಯಾವುದು ಆರ್ಗ್ಯಾನಿಕ್ ಇಲ್ಲದಿರುವ ಕಾರಣದಿಂದಾಗಿ ನಾವು ತರಕಾರಿಗಳನ್ನು ಇಪ್ಪತ್ತು ನಿಮಿಷಗಳ ಕಾಲ ಉಪ್ಪಿನ ನೀರಿನಲ್ಲಿ ನೆನಸುವುದರಿಂದ ಅದರ ವಿಷಯಕಾರಿ ರಾಸಾಯನಿಕಗಳ ಪರಿಣಾಮ ವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ನೀರಿನ ಆವಿಯಲ್ಲಿ ಬೇಯಿಸಿದ ತರಕಾರಿಗಳನ್ನು ಸೇವಿಸುವುದರಿಂದ ಅದರ ಪೌಷ್ಟಿಕಾಂಶತೆಯನ್ನು ಹೆಚ್ಚಾಗಿ ಪಡೆಯಬಹುದು.
ಮಸಾಲೆಗಳು:
ಮಸಾಲೆಗಳು ರೋಗ ನೀರೊಧಕ ಶಕ್ತಿಯನ್ನು ಹೊಂದಿದ್ದು, ಜೀವಕೋಶಹಾನಿಯಿಂದ ತಡೆಯುತ್ತದೆ. ಅರಿಶಿನ, ದಾಲ್ಚಿನ್ನಿ, ಲವಂಗ, ಮೆಣಸು ಇತ್ಯಾದಿ. ಅರಿಶಿಣದಲ್ಲಿ ಆಂಟಿ ಕ್ಯಾನ್ಸರ್ ಎಂದರೆ ಕ್ಯಾನ್ಸರ್ ತಡೆಗಟ್ಟುವ ಗುಣಲಕ್ಷಣಗಳಿವೆ ಎಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ. ಲವಂಗ ಎಣ್ಣೆಯು ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು, ಬ್ಯಾಕ್ಟಿರಿಯಾದ ಸೋಂಕನ್ನು ಎದುರಿಸಲು ಮತ್ತು ಮೊಡವೆಗಳನ್ನು ಪರಿಹರಿಸಲು ಪ್ರಯೋಜನಕಾರಿಯಾಗಿದೆ.
ನಮ್ಮ ಮನೆಗಳಲ್ಲಿ ಸಹಜವಾಗಿ ಕೆಮ್ಮು, ನೆಗಡಿ, ಅರ್ಜಿಣವಾದಾಗ ಮಸಾಲೆಗಳಿಂದ ಮಾಡಿದ ಕಷಾಯ ಉಪಯೋಗಿಸುತ್ತೇವೆ. ಅದರಲ್ಲಿ ಬೆಳುಳ್ಳಿಗೆ ವಿಶೇಷವಾದ ಸ್ಥಾನವಿದೆ. ಮೊದಲ ಶತಮಾನದಿಂದಲೂ ಆಯುರ್ವೇದ ಔಷಧದಲ್ಲಿ ಬೆಳ್ಳುಳ್ಳಿ ರಕ್ತದ ದ್ರವತೆಗಳನ್ನು ಕಾಪಾಡಿಕೊಳ್ಳುವ ಮೂಲಕ ಹೃದಯದ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ವೈಜ್ಞಾನಿಕವಾಗಿ ಬೆಳ್ಳುಳ್ಳಿಯ ಸೇವನೆಯಿಂದ ಹೃದಯ ಸಂಬAಧಿತ ಕಾಯಿಲೆಗಳನ್ನು ತಡಗಟ್ಟಬಹುದೆಂದು ತಿಳಿಸಿವೆ. ಬೆಳ್ಳುಳಿ ನಮ್ಮ ರಕ್ತದ ಒಳ್ಳೆಯ ಕೊಬ್ಬಿನಾಂಶ (HDL) ವನ್ನು ಹೆಚ್ಚಿಸಿ, ಕೆಟ್ಟ ಕೊಬ್ಬಿನಾಂಶವನ್ನು (LDL) ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಬೆಳುಳ್ಳಿಯ ಸ್ನೇಹಿತನಾದ ಶುಂಠಿಯು ಸಹ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿವೆ. ಶುಂಠಿಯಲ್ಲಿನ ಘಟಕಾಂಶವಾದ ಜಿಂಜರಾಲ್ ಎಂಬ ಅಂಶವು ಇದು ರಕ್ತನಾಳಗಳಲ್ಲಿ ರಕ್ತದ ಸಂಚಲನವನ್ನು ಉತ್ತೇಜಿಸುತ್ತಾ ಅದರಿಂದಾಗಿ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ ಶುಂಠಿಯಲ್ಲಿ ನೋವು ನಿವಾರಕ ಶಕ್ತಿಯಿದೆಯೆಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ.
ಹೀಗೆ ದಿನನಿತ್ಯದಲ್ಲಿ ಉಪಯೋಗಿಸುವ ಹಲವಾರು ಅಡುಗೆ ಪದಾರ್ಥಗಳ ವೈಶಿಷ್ಟ್ಯತೆಯನ್ನು ತಿಳಿದು ನಮ್ಮ ಊಟದ ಬಳಕೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಅಳವಡಿಸುವುದರಿಂದ ಕೆಲವೊಂದು ರೋಗಗಳು ಸುಧಾರಣೆಯನ್ನು ಕಾಣಬಹುದು.
ಅದರಲ್ಲಿಯು ಹಸಿರು ತರಕಾರಿಗಳಲ್ಲಿ ರೋಗ ನಿರೋಧಕ ಶಕ್ತಿ, ವಿಟಮಿನ್ ಎ, ಬಿ, ಸಿ, ಖನಿಜಾಂಶಗಳೂ ವಿಪುಲವಾಗಿವೆ.