ಸಮೀಕೃತ ಆಹಾರವನ್ನು ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳು
ಶಾರೀರಿಕ ಚಟುವಟಿಕೆಗಳಿಗೆ ಹೆಚ್ಚು ಶಕ್ತಿ ಸಿಗುತ್ತದೆ.
ಶರೀರ ಭಾರವನ್ನು ನಿಯಂತ್ರಿಸುವುದಕ್ಕೆ ಹೆಚ್ಚು ಸುಲಭವಾಗುತ್ತದೆ.
ಮಧುಮೇಹ, ಹೃದ್ರೋಗ ಮುಂತಾದ ಜೀವನಶೈಲಿ ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ.
ಮನಸ್ಸಿಗೆ ಹೆಚ್ಚು ಉಲ್ಲಾಸ ಉಂಟಾಗುತ್ತದೆ.
ಪಥ್ಯದ (ಡಯಟ್) ಅಡ್ಡಪರಿಣಾಮಗಳು:
ಅನಾರೋಗ್ಯಕರವಾದ ಆಹಾರಕ್ರಮಗಳು ಅಥವಾ ಕೊಬ್ಬಿರುವ ಆಹಾರವು ದೇಹಭಾರವು ಹೆಚ್ಚಾಗಲು ಮತ್ತು ದೀರ್ಘಕಾಲ ರೋಗಗಳಿಗೆ ಕಾರಣವಾಗುತ್ತದೆ. ಜನರು ತ್ವರಿತ. ಫಲಿತಾಂಶ ಬಯಸುವವರಾಗಿರುತ್ತಾರೆ. ಹೊಸ ಡಯಟ್ ಪ್ಲಾನ್ಗಳು ಅವರನ್ನು ಶೀಘ್ರ ಆಕರ್ಷಿಸುತ್ತದೆ. ಅವರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸುವುದಿಲ್ಲ. ಆದುದರಿಂದ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳಲ್ಲಿ, ಆನ್ಲೈನ್ ಫ್ಲಾಟ್ಫಾರ್ಮ್ಗಳಲ್ಲಿ ಕಾಣಿಸುವ ಆಹಾರ ಪಥ್ಯಗಳನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಇದು ಪ್ರಯೋಜನಕ್ಕಿಂತ ಹೆಚ್ಚು ದುಷ್ಪರಿಣಾಮಗಳನ್ನುಂಟು ಮಾಡುತ್ತದೆ.
ವೇಗವಾಗಿ ಶರೀರ ಭಾರತವನ್ನು ಇಳಿಸಲಿಕ್ಕಿರುವ ಪಥ್ಯಗಳು ದೇಹದ ಆರೋಗ್ಯಕ್ಕೆ ಬಹಳ ಹಾನಿಕರ. ವೇಗವಾಗಿ ಶರೀರ ಭಾರವನ್ನು ಕಡಿಮೆ ಮಾಡಲು ಹೊರಟರೆ ಪಿತ್ತಕೋಶದಲ್ಲಿ ಕಲ್ಲುಗಳುಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಧಾನ್ಯಗಳು, ಹಸಿರು ತರಕಾರಿಗಳು, ಹಣ್ಣುಗಳು, ಹಾಲು ಮುಂತಾದ ಕಾರ್ಬೋ ಹೈಡ್ರೇಡ್ಗಳು ಇರುವ ಆಹಾರವನ್ನು ಬಿಟ್ಟು ಬಿಟ್ಟರೆ ಮಲಬದ್ಧತೆ, ಬಲಹೀನತೆ, ಆಯಾಸ, ಕೂದಲು ಉದುರುವುದು, ಎಲುಬಿನ ಸಾಂಧ್ಯತೆಯು ಕಡಿಮೆಯಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಮುಂತಾದವುಗಳ ಸಾಧ್ಯತೆ ಹೆಚ್ಚುತ್ತದೆ.
ಒಬ್ಬರಿಗೆ ಸೂಕ್ತವಾದ ಆಹಾರ ಪದ್ಧತಿ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರು ತಮ್ಮ ವೈಯಕ್ತಿಕ ದೇಹ ಪ್ರಕೃತಿ ಮತ್ತು ರೋಗಗಳಿಗೆ ಅನುಗುಣವಾಗಿ ಯಾವ ರೀತಿಯ ಆಹಾರವನ್ನು ತಿನ್ನಬೇಕೆಂದು ಡಯಟೀಶಿಯನ್ಗಳನ್ನು ಸಮೀಪಿಸಿ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.
ಸಸ್ಯಾಹಾರಿ ಮತ್ತು ಮಾಂಸಹಾರಿ ಡಯಟ್ಗಳು (ಪಥ್ಯ)
ಶರೀರದ ತೂಕ ಕಡಿಮೆ ಮಾಡಲು ಏನು ಒಳ್ಳೆಯದು?
ಸಸ್ಯಾಹಾರವಾದರೂ, ಮಾಂಸಾಹಾರವಾದರೂ ಎಲ್ಲರ ಮುಖ್ಯ ಉದ್ದೇಶ ದೇಹದ ತೂಕವನ್ನು ಕಡಿಮೆ ಮಾಡುವುದೇ ಆಗಿರುತ್ತದೆ. ಸಸ್ಯಾಹಾರ ಮಾಂಸಾಹಾರ ಮನುಷ್ಯನ ವೈಯಕ್ತಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯಿಂದ ಬರುತ್ತದೆ. ಪೋಷಕಾಂಶ ಭರಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.
ಸಸ್ಯಾಹಾರದ ಪ್ರಯೋಜನ ಮತ್ತು ಕೆಡುಕುಗಳು
ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ ಲಭ್ಯವಾಗುವುದರಿಂದ ಸಸ್ಯಾಹಾರ ಸೇವಿಸುವುದರಿಂದ ಪೋಷಕಾಂಶಗಳು ಲಭಿಸಲು ಮತ್ತು ಹಸಿವು ನೀಗಲು, ಸಂತೃಪ್ತಿ ಸಿಗಲು ಕಾರಣವಾಗುತ್ತದೆ. ವಿಟಮಿನ್ ಸಿ. ವಿಟಮಿನ್ ಇ. ಫಾರಿಕ್ ಆಸಿಡ್, ಪೊಟಾಶಿಯಮ್, ಮೆಗ್ನೇಶಯಿಮ್, ಕಾರೇಡಿನೋಯ್ಡಾ, ಫ್ಲೋವನೋಯ್ಡ್ ಮುಂತಾದವುಗಳು ಸಸ್ಯಾಹಾರದಿಂದಲೇ ಲಭಿಸುತ್ತವೆ.
ಬೇಳೆಕಾಳುಗಳು, ದಾನ್ಯಗಳು, ಕಡಲೆ ಅಪೂರ್ಣವಾದುದಾಗಿದೆ. ಇದರಲ್ಲಿ ಒಂದೋ ಅದಕ್ಕಿಂತ ಹೆಚ್ಚು ಅಮಿನೊ ಆ್ಯಸಿಡ್ಗಳು ಇರುವುದಿಲ್ಲ. ಧಾನ್ಯಗಳಲ್ಲಿ ಲೈಸಿನ್, ಪ್ರೆಯೋನಿಸ್, ಟ್ರಿಸ್ಟೋಪೆನ್ ಮುಂತಾದವುಗಳ ಕೊರತೆ ಇದೆ. ಬೇಳೆಕಾಳುಗಳಲ್ಲಿ ಮೆಥಿಯೋನಿಲ್, ಲೈಸಿಲ್ ಮುಂತಾದ ಅಮಿನೋ ಆಸಿಡ್ಗಳು ಇರುವುದಿಲ್ಲ. ಸಸ್ಯಾಹಾರಿಗಳಲ್ಲಿ ವಿಟಮಿನ್ ಬಿ12 ಕೊರತೆ ಮತ್ತು ಒಮೆಗಾ- 3ರ ಕೊರತೆಯು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಾಂಸಾಹಾರದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು
ಬಿ12, ಕಬ್ಬಿಣ, ಸತು ಮತ್ತು ಒಮೆಗಾ- 3 ಕೊಲ್ಸಿನಾಮ್ಲಗಳಂತಹ ಜೈವಿಕ ಮೂಲಕ ಪ್ರೊಟೀನ್ಗಳು ಪ್ರಾಣಿ ಉತ್ಪನ್ನಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ. ಈ ಪೋಷಕಾಂಶಗಳು ಸ್ನಾಯುಗಳ ಚಟುವಟಿಕೆ, ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಒಟ್ಟು ಆರೋಗ್ಯವನ್ನು ಉತ್ತಮಪಡಿಸುತ್ತದೆ. ಜೊತೆಗೆ ಲೀನ್ ಮಾಂಸವನ್ನು ಸೇವಿಸುವುದರಿಂದ ಶರೀರ ಭಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಆದರೆ ಮಾಂಸಹಾರದಲ್ಲಿ ಸೇರಿಕೊಂಡಿರುವ ಕೊಬ್ಬಿನಾಂಶ ದೇಹತೂಕವನ್ನು ಹೆಚ್ಚಿಸುತ್ತದೆ. ಹೃದ್ರೋಗ ಸಾಧ್ಯತೆಗಳು, ಬೊಜ್ಜು, ರಕ್ತದೊತ್ತಡ ಹೆಚ್ಚಲು, ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಆರೋಗ್ಯವನ್ನು ಚೆನ್ನಾಗಿರಿಸಲು ಸಸ್ಯಾಹಾರಿಗಳಾದರೂ, ಮಾಂಸಾಹಾರಿಗಳಾದರೂ ನಿಯಂತ್ರಿತ ರೀತಿಯಲ್ಲಿ ಆಹಾರವನ್ನು ಕ್ರಮಬದ್ಧಗೊಳಿಸುವುದು ಬಹಳ ಮುಖ್ಯ.
ಅತ್ಯುತ್ತಮ ಆಹಾರ ಯೋಜನೆಯನ್ನು ಆರಿಸುವುದು ಹೇಗೆ?
ನಿಮ್ಮ ಆಹಾರದಲ್ಲಿ ಈ ಕೆಳಗಿನ ಆಹಾರಗಳು ಸೇರಿವೆಯೇ ಎಂದು ನಿರ್ಣಯಿಸಿ.
ಸ್ಥಿರವಾಗಿ ಸೇವಿಸಲು ಮತ್ತು ರೂಢಿಗೊಳಿಸಲು ಸಾಧ್ಯವಾಗುವ ಆಹಾರ ಕ್ರಮ.
ದೈಹಿಕ ಸ್ಥಿತಿ ಮತ್ತು ಆದ್ಯತೆಯ ಆಹಾರ ಪದಾರ್ಥಗಳನ್ನು ಪರಿಗಣಿಸಿ ಆಹಾರ ಪದ್ಧತಿ ರೂಪಿಸುವುದು.
ಆಹಾರ ಗುಂಪುಗಳು (ತರಕಾರಿ, ಹಣ್ಣುಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಮಾಂಸ, ಮೀನು ಮತ್ತು ಡೈರಿ
ಉತ್ಪನ್ನಗಳು ಮತ್ತು ಬೀಜಗಳು) ಸೇರಿದಂತೆ ಸಮತೋಲಿತ ಮತ್ತು ವೈವಿದ್ಯಮಯ ಆಹಾರ
ಶರೀರಕ್ಕೆ ಅಗತ್ಯವಾದ ಶಕ್ತಿಗೆ ಬೇಕಾದ ಪ್ರೊಟೀನ್, ಪಿಷ್ಠ ಮತ್ತು ಉತ್ತಮ ಕೊಬ್ಬುಗಳು ಇರುವಂತಹ ಆಹಾರ.
ಆರೋಗ್ಯಪೂರ್ಣವಾದ ಆಹಾರ ಕ್ರಮವನ್ನು ಕರಾರುವಾಕ್ಕಾಗಿ ಸೂಚಿಸುವ ಶಿಫಾರಸುಗಳನ್ನು ಆಧರಿಸಿದ ಆಹಾರ
ಕ್ರಮ.
ಶರೀರವನ್ನು ಆರೋಗ್ಯದಿಂದಿರಿಸಲು ಕೆಲವು ಸಲಹೆಗಳು
ನೀವು ಸೇವಿಸುತ್ತಿರುವ ಆಹಾರದಲ್ಲಿ ಯಾವ ಪೋಷಕಾಂಶಗಳಿವೆ ಎಂಬುವುದರ ಬಗ್ಗೆ ಅರಿವಿರಲಿ.
ಆಸ್ವಾದಿಸುತ್ತಾ ತಿನ್ನುವುದು ಮುಖ್ಯ. ಆಹಾರ ಪದ್ಧತಿ ಶಿಕ್ಷೆಯಂತೆ ಭಾಸವಾದರೆ ಅದನ್ನು ಹೆಚ್ಚು ಕಾಲ
ಮುಂದುವರಿಸಿಕೊAಡು ಹೋಗಲು ಸಾಧ್ಯವಾಗುವುದಿಲ್ಲ.
ಯಾವುದೇ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದಕ್ಕಿಂತ ಮಿತವಾದ ಪ್ರಮಾಣದಲ್ಲಿ ಪೌಷ್ಠಿಕ ಆಹಾರವನ್ನು
ಅನುಸರಿಸುವುದು ಉತ್ತಮ.
ಉಗುರು ಬೆಚ್ಚಗಿನ ನೀರಿನಿಂದ ದಿನವನ್ನು ಆರಂಭಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.
ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಬೆಳಿಗ್ಗೆ 9 ಗಂಟೆಯ ಮೊದಲು ಉಪಹಾರ. ಮಧ್ಯಾಹ್ನ 1.30ಕ್ಕೆ ಮೊದಲು
ಮಧ್ಯಾಹ್ನದ ಊಟ ಮತ್ತು ರಾತ್ರಿ 8.30ಕ್ಕಿಂತ ಮೊದಲು ರಾತ್ರಿಯ ಊಟ ಮುಗಿಸಲು ಪ್ರಯತ್ನಿಸಿ.
ಮಲಗುವುದಕ್ಕಿಂತ ಕನಿಷ್ಟ ಎರಡು ಗಂಟೆಗಳ ಮೊದಲು ಊಟ ಮುಗಿಸಿ.
ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ತಿನ್ನಿರಿ.
ವ್ಯಾಯಾಮ, ನಿದ್ರೆ ಮತ್ತು ನೀರಿನ ಸೇವನೆಯನ್ನು ಸರಿಯಾದ ಮಟ್ಟದಲ್ಲಿ ಕಾಪಾಡಿಕೊಳ್ಳಬೇಕು. ದಿನಕ್ಕೆ ಕನಿಷ್ಟ
8-12 ಗ್ಲಾಸ್ ನೀರು ಕುಡಿಯಬೇಕು.
ಹೊರಗಿನ ಆಹಾರವನ್ನು ಸಾಧ್ಯವಾದಷ್ಟು ತಪ್ಪಿಸಿ.
ಆಹಾರವನ್ನು ನಿಧಾನವಾಗಿ ಸೇವಿಸಬೇಕು ಮತ್ತು ಚೆನ್ನಾಗಿ ಅಗಿಯಬೇಕು. ಇದು ಹೆಚ್ಚು ತಿನ್ನುವುದರಿಂದ
ತಡೆಯುತ್ತದೆ ಮತ್ತು ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.
ಟಿ.ವಿ. ಮೊಬೈಲ್ ನೋಡುತ್ತಾ ಊಟ ಮಾಡುವ ಅಭ್ಯಾಸವನ್ನು ತೊರೆಯಿರಿ.
ಇಂದು ಪ್ರಚಾರದಲ್ಲಿರುವ ವಿವಿಧ ರೀತಿಯ ಡಯಟ್ ಪ್ಲಾನ್ಗಳು
- ಕಿಟೋ ಡಯಟ್
ಇದು ಕಡಿಮೆ ಪ್ರಮಾಣದಲ್ಲಿ ಪಿಷ್ಟ ಸೇವಿಸುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಹೊಂದಿರುವ ಆಹಾರ ಕ್ರಮ.
ಕೀಟೋ ಡಯಟ್ನ ಪ್ರಯೋಜನಗಳು:
ಔಷಧಗಳಿಗೆ ಪ್ರತಿಕ್ರಿಯಿಸದ ಅಪಸ್ಮಾರ ರೋಗಿಗಳಿಗೆ ಅನುಕೂಲಕರ ಡಯಟ್.
ಹಸಿವನ್ನು ನಿಯಂತ್ರಿಸುತ್ತದೆ.
ಶೀಘ್ರವಾಗಿ ದೇಹತೂಕ ಕಡಿಮೆ ಮಾಡಲು ಸಹಾಯಕ.
ಕಿಟೋ ಡಯಟ್ನ ದುಷ್ಪರಿಣಾಮಗಳು
ಯೂರಿಕ್ ಆ್ಯಸಿಡ್, ಎಲ್.ಡಿ.ಎಲ್. ಕೊಲೆಸ್ಟಾçಲ್, ಹೃದ್ರೋಗದ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಆಸ್ಟಿಯೇ ಪೊರೋಸಿಸ್, ಮೂತ್ರಪಿಂಡದ ಕಾಯಿಲೆಗಳಂತಹ ರೋಗಗಳಿಗೆ ಕಾರಣವಾಗುತ್ತದೆ.
ದೀರ್ಘಕಾಲ ಇದನ್ನು ಅನುಸರಿಸುವುದು ಒಳ್ಳೆಯದಲ್ಲ.
2. ಮೆಡಿಟರೇನಿಯನ್ ಡಯಟ್:
ನ್ಯಾಚುರೇಟೆಡ್ ಕೊಬ್ಬುಗಳ (ಕೆಂಪು ಮಾಂಸ, ಬೆಣ್ಣೆ) ಬದಲಾಗಿ ಅಪರ್ಯಾಪ್ತ ಕೊಬ್ಬುಗಳನ್ನು (ಆಲಿವ್ ಎಣ್ಣೆ, ಬೀಜಗಳು, ಮೀನುಗಳು) ಬಳಸಲಾಗುತ್ತದೆ. ಹಣ್ಣುಗಳು, ಹಸಿರು ತರಕಾರಿಗಳು, ದಾನ್ಯಗಳು, ಬೀಜಗಳು ಮುಂತಾದವುಗಳನ್ನು ಒಳಗೊಂಡ ಪೋಷಕಾಂಶಗಳಿರುವ ಆಹಾರ ಕ್ರಮ.
ಮೆಡಿಟರೇನಿಯನ್ ಡಯಟ್ನ ಪ್ರಯೋಜನಗಳು:
ಎದೆಯುರಿ ಕಡಿಮೆ ಮಾಡುತ್ತದೆ.
ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಹೃದ್ರೋಗ, ಪಾರ್ಶ್ವವಾಯು ಮುಂತಾದವುಗಳನ್ನು ತಡೆಯುತ್ತದೆ.
ಬೊಜ್ಜು, ಮಧುಮೇಹ, ಕೊಲೆಸ್ಟಾçಲ್ ಹೆಚ್ಚುವುದು, ರಕ್ತದೊತ್ತಡ ಹೆಚ್ಚುವುದು ಮುಂತಾದವುಗಳ ಸಾಧ್ಯತೆಯನ್ನು
ಕಡಿಮೆ ಮಾಡುತ್ತದೆ.
ಇದರ ದುಷ್ಪರಿಣಾಮಗಳು
ಪ್ಯಾಂಕ್ರಿಯಾಟೈಸಿಸ್, ಗ್ಯಾಸ್ಟೊçÃ, ಈಸೋ ಫೇಜಿಯಲ್ ರಿಫ್ಲೆಕ್ಟ್ ಡಿಸೀಸ್ ಮುಂತಾದ ಕಾಯಿಲೆಗಳು ಇರುವವರಿಗೆ ಸೂಕ್ತವಲ್ಲ.
3. ವೀಗನ್ ಡಯಟ್: ಮಾಂಸದ
ಜೊತೆಗೆ ಡೈರಿ ಉತ್ಪನ್ನಗಳು, ಮೊಟ್ಟೆಗಳು, ಜಿಲಾಟಿನ್ ಮತ್ತು ಜೇನು ತುಪ್ಪಂದAತಹ ಪ್ರಾಣಿ ಉತ್ಪನ್ನಗಳನ್ನು ಸಂಪೂರ್ಣ ತ್ಯಜಿಸಲಾಗುತ್ತದೆ. ಇದಕ್ಕೆ ಬದಲಾಗಿ ಸೋಯಾ ಉತ್ಪನ್ನಗಳು, ಬೀಜಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು, ಹಣ್ಣುಗಳನ್ನು ಈ ಆಹಾರದಲ್ಲಿ ಸೇರಿಸಲಾಗುತ್ತದೆ.
ವೀಗನ್ ಡಯಟ್ನ ಪ್ರಯೋಜನಗಳು:
ಸಸ್ಯಾಹಾರಿ ಆಹಾರ ಕ್ರಮವು ಹೃದ್ರೋಗ ಮತ್ತು ಮಧುಮೇಹದ ಟೈಪ್ 2 ಅಪಾಯವನ್ನು ಕಡಿಮೆ ಮಾಡುತ್ತದೆ.
ವೀಗನ್ ಡಯಟ್ನ ದುಷ್ಪರಿಣಾಮಗಳು
ವಿಟಮಿನ್ ಬಿ12 ಮತ್ತು ಕಬ್ಬಿಣಾಂಶದAತಹ ಪೋಷಕಾಂಶಗಳ ಕೊರತೆ ಸಂಭವಿಸಬಹುದು.
4. ಮಧ್ಯಂತರ ಉಪವಾಸ (ಇಂಟರ್ ಮೀಡಿಯೇಟ್ ಫಾಸ್ಟಿಂಗ್).
ಇದು ನಿರ್ದಿಷ್ಟ ಸಮಯದಲ್ಲಿ ಊಟ ಮಾಡಿ ಉಳಿದ ಸಮಯವನ್ನು ಉಪವಾಸದಲ್ಲಿ ಕಳೆಯುವ ವಿಧಾನವಾಗಿದೆ. ಇದನ್ನು ಎರಡು ರೀತಿಯಲ್ಲಿ ಮಾಡಬಹುದು. ಪ್ರತಿದಿನ ಸಮಯ ನಿರ್ಬಂಧಿತ ಆಹಾರ ಸೇವನೆ. ನಿದ್ರೆ ಸೇರಿದಂತೆ ದಿನಕ್ಕೆ 16-18 ಗಂಟೆಗಳ ಕಾಲ ಉಪವಾಸ. ಉಳಿದ 6-8 ಗಂಟೆಗಳ ಕಾಲ ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಪ್ರೋಟೀನ್ ಒಳಗೊಂಡ ಆಹಾರವನ್ನು ಸೇವಿಸಲಾಗುತ್ತದೆ. ವಾರದಲ್ಲಿ ಕೆಲವು ದಿನ ಉಪವಾಸ. ವಾರದಲ್ಲಿ ಎರಡು ದಿನ ಉಪವಾಸ. ಉಳಿದ 5 ದಿನ ಸಾಮಾನ್ಯ ಆಹಾರ ಸೇವನೆ.
ಇದರ ಪ್ರಯೋಜನಗಳು:
ದೇಹದ ತೂಕ ಕಡಿಮೆ ಮಾಡಲು ಸಹಾಯಕ
ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.
ಉರಿಯೂತವನ್ನು ಕಡಿಮೆ ಮಾಡುತ್ತದೆ.
ಇನ್ಸುಲಿನ್, ಸಂವೇದನಾಶೀಲತೆ, ಜೀರ್ಣಕ್ರಿಯೆ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಇದರ ದುಷ್ಪರಿಣಾಮಗಳು:
ಇದು ಉತ್ತಮ ಪೋಷಣೆ ಮತ್ತು ಆರೋಗ್ಯವಂತ ಜನರಿಗೆ ಸುರಕ್ಷಿತವಾಗಿದ್ದರೂ ಎಲ್ಲರಿಗೂ ಸೂಕ್ತವಲ್ಲ. ಇದು ತಲೆನೋವು ಮತ್ತು ಆಯಾಸ ನಿದ್ರಾಹೀನತೆಗೆ ಕಾರಣವಾಗಬಲ್ಲದು.