ಅಂದು ನಾನು ಎಂದಿನಂತೆ ಬೆಳಗಿನ ಜಾವ, ಚಹಾ ಕುಡಿಯುತ್ತಾ ಇದ್ದೆ. ನನ್ನ ಮೊಬೈಲ್ ಒಂದೇ ಸವನೆ ರಿಂಗಣಿಸತೊಡಗಿತು. ಇನ್ನೂ ಅರ್ಧ ಚಹಾ ಉಳಿದಿತ್ತು. ತಕ್ಷಣ ಟೀಪಾಯಿ ಮೇಲೆ ಅದನ್ನು ಇಟ್ಟು ಮೊಬೈಲನ್ನು ಕೈಗೆತ್ತಿಕೊಂಡೆ. ಅದು ಅಮೃತ ಫೌಂಡೇಶನ್ ನಿರಾಶ್ರಿತರ ಕೇಂದ್ರ ಮತ್ತು ವೃದ್ಧಾಶ್ರಮ’ದಿಂದ ಕರೆ ಬಂದಿತ್ತು. ಅದನ್ನು ನೋಡಿದಾಗಲೇ ನನಗೆ ಅಚ್ಚರಿ ಸಂತಸ ಏಕಕಾಲದಲ್ಲಿ ಉಂಟಾದವು. ಕರೆಯನ್ನು ಸ್ವೀಕರಿಸಿ ಕಿವಿಯ ಬಳಿ ತಂದೆ. “ಸರ್, ನೀವು ಬರಬೇಕು; ನಿರಾಶ್ರಿತರ ಕೇಂದ್ರ ಮತ್ತು ವೃದ್ಧಾಶ್ರಮ, ಅದು ಈಗ ಹತ್ತು ವರ್ಷಗಳನ್ನು ಪೂರೈಸಿದೆ; ಸಂಸ್ಥೆಯು ಪ್ರಾರಂಭವಾದಾಗಿನಿAದಲೂ ತಾವು ಇದಕ್ಕೆ ಹಣವನ್ನು ಸಂದಾಯ ಮಾಡುತ್ತಾ ಬಂದಿರುವಿರಿ; ಹಾಗಾಗಿ ದಶಮಾನೋತ್ಸವವನ್ನು ಇಟ್ಟುಕೊಂಡಿದ್ದೇವೆ; ಆದ್ದರಿಂದ ನಿಮಗೆ ಸನ್ಮಾನ ಸಮಾರಂಭದ ವ್ಯವಸ್ಥೆ ಮಾಡಿದ್ದೇವೆ” ಎಂದು ಅಲ್ಲಿಯ ವ್ಯವಸ್ಥಾಪಕರು ಹೇಳಿದರು. ಅವರ ಮಾತು ಕೇಳಿ ನನಗೆ ಇನ್ನಷ್ಟು ಖುಷಿಯಾಯಿತು. ಅಂದರೆ… ನಾನು ಸಂದಾಯ ಮಾಡುತ್ತಿರುವ ಹಣವು ಸಕಾಲಕ್ಕೆ ಸೇರುತ್ತದೆಂದಾಯಿತು. ಈಗ ನಾನು ಹತ್ತು ವರ್ಷಗಳ ಹಿಂದೆ ಸರಿಯಬೇಕಾಯಿತು. ನಾನು ಕಟ್ಟಡ ಕಾರ್ಮಿಕನಾಗಿದ್ದೆ. ಎಂದಿನAತೆ ಅಂದು ಕೆಲಸದಲ್ಲಿ ತೊಡಗಿರುವಾಗ, ಯಾರೋ ಒಬ್ಬರು ಕೈಯಲ್ಲಿಕರಪತ್ರ’ಗಳನ್ನು ಹಿಡಿದುಕೊಂಡು ನಾವು ನಿರ್ಮಿಸುತ್ತಿರುವ ಕಟ್ಟಡದ ಹತ್ತಿರ ಬಂದರು. ಅವರು ಎಲ್ಲರಿಗೂ ನೀಡುವಂತೆ ನನಗೂ ಒಂದು ಕರಪತ್ರವನ್ನು ನೀಡಿದರು. ನಾನು ಅದನ್ನು ಸರಿಯಾಗಿ ಮಡಿಕೆ ಮಾಡಿಕೊಂಡು ಜೇಬಿನಲ್ಲಿಟ್ಟುಕೊಂಡೆ. ಮಧ್ಯಾಹ್ನದ ಊಟದ ಸಮಯದಲ್ಲಿ ಅದನ್ನು ಬಿಡಿಸಿ ಓದಿಕೊಂಡೆ. ಮತ್ತೆ ಅದನ್ನು ಭದ್ರವಾಗಿ ಜೇಬಿಗೆ ಇಳಿಸಿದೆ. ಎಂದಿನAತೆ ನನ್ನ ಕಾಯಕದಲ್ಲಿ ಎಂದುತೊಡಗಿದೆ. ಕೆಲಸ ಬಿಟ್ಟು, ಸಾಯಂಕಾಲದ ಹೊತ್ತಿಗೆ ಮನೆಗೆ ಬಂದು ಮಡದಿಗೆ ಕರಪತ್ರವನ್ನು ತೋರಿಸಿದೆ. ಅವಳು ಅದನ್ನು ಬಿಡಿಸಿ ಓದಿಕೊಂಡಳು. ಅವಳ ಮುಖದ ಮೇಲೆ ಯಾವುದೋ ಉತ್ಸಾಹದ ಕಳೆಯು ಗೋಚರಿಸಿತು. ನಾನು ಅದನ್ನು ಸೂಕ್ಷö್ಮವಾಗಿ ಗಮನಿಸಿದ್ದೆ.
“ನೋಡಿ, ನಾವು ನಮ್ಮ ಗಳಿಕೆಯ ಒಂದು ಭಾಗವನ್ನು ಯಾಕೆ ವೃದ್ಧಾಶ್ರಮಕ್ಕೆ ನೀಡಬಾರದು? ಇದರಿಂದ ನಾವು ಸಮಾಜಕ್ಕೆ ಒಂದು ಅಳಿಲು ಸೇವೆಯನ್ನು ಸಲ್ಲಿಸಿದಂತಾಗುತ್ತದೆ!”ಎAದು ಹೃದಯ ತುಂಬಿ ಹೇಳಿದಳು”. ಹೌದು, ನನ್ನ ವಿಚಾರವು ಅದೇ ಆಗಿತ್ತು. ಆದಾಯದ ಸ್ವಲ್ಪ ಭಾಗವನ್ನು ವೃದ್ದಾಶ್ರಮಕ್ಕೆ ಮೀಸಲಿಟ್ಟರೆ ….ಮುಂದೊAದು ದಿನ ಅದರಿಂದ ನಮಗೆ ನೆರವಾಗಬಹುದು. ಯಾವುದಕ್ಕೂ ಕಾಲವು ಹೀಗೆಯೇ ಇರುತ್ತದೆಂದು ಹೇಳಲು ಬರುವುದಿಲ್ಲ. ಇದ್ದ ಮಗನು ತನ್ನ ಮಡದಿ ಮಕ್ಕಳೊಂದಿಗೆ ಮಂಗಳೂರಿನ ಕೆಲಸಕ್ಕೆ ಹೊರಟು ಹೋಗಿದ್ದಾನೆ. ಅವನು ಕೂಡ ನನ್ನಂತೆಯೇ ಕಟ್ಟಡ ಕಾರ್ಮಿಕನಾಗಿದ್ದಾನೆ. ಇಲ್ಲಿಯ ಅಲ್ಪ ಆದಾಯವು ಅವನಿಗೆ ಹಿಡಿಸಿರಲಿಲ್ಲ. ಇತ್ತಿತ್ತಲಾಗಿ ಅವನು ಅಲ್ಲಿ ಫ್ಲಾಟ್ ಕೊಂಡು ಮನೆಯನ್ನು ಕಟ್ಟಿಸಿಕೊಂಡಿದ್ದಾನೆ. ಗೃಹಪ್ರವೇಶಕ್ಕೆ ನಾನು, ಮಡಿದಿಯೊಂದಿಗೆ ಅಲ್ಲಿ ಹೋಗಿ ಬಂದಿದ್ದೇನೆ. ಅವರು ಬರುವುದು ಊರಿನ ಜಾತ್ರೆ ಬಂದಾಗಲೆ! ಅವನು ಕೂಡ ನಮಗೆ ಅಲ್ಲಿಯೇ ಬರುವಂತೆ ಸತಾಯಿಸುತ್ತಿದ್ದ. ಆದರೆ ನಮಗೆ ಅಲ್ಲಿ ಹೊರಡಲು ಇಷ್ಟವಿರಲಿಲ್ಲ. ಹುಟ್ಟಿದ ಮನೆ, ಊರು ಬಿಡಲಾಗುತ್ತಿಲ್ಲ.ಅಲ್ಲದೆ ಮಡದಿಯು ಇಲ್ಲಿಯೆ ಟೈಲರಿಂಗ್
ಅಂಗಡಿಯನ್ನು ಇಟ್ಟುಕೊಂಡಿದ್ದಾಳೆ. ಎಲ್ಲಿಯೂ ಹೋಗುವಂತಿಲ್ಲ! ಪರಿಚಿತರು ಬಟ್ಟೆಗಳನ್ನು ಹೊಲಿಸಿಕೊಳ್ಳಲು ಬರುತ್ತಿರುತ್ತಾರೆ.
ಮಡದಿಯು ತನ್ನ ದುಡಿಮೆಯಲ್ಲಿನ ಒಂದು ಪಾಲನ್ನು ನನಗೆ ನೀಡಿದಾಗ ನಾನು, ನನ್ನದನ್ನು ಸೇರಿಸಿ ವೃದ್ಧಾಶ್ರಮಕ್ಕೆ ಸಂದಾಯ ಮಾಡುತ್ತಿದ್ದೆ. ಈ ನಡುವೆ ಮಡದಿಯ ಸಾವು ನನ್ನನ್ನು ದಿಕ್ಕು ತೋಚದಂತೆ ಮಾಡಿತು. ಮಗ, ಸೊಸೆ, ಮೊಮ್ಮಕ್ಕಳು ಅಂತಿಮ ಸಂಸ್ಕಾರಕ್ಕೆ ಅತಿಥಿಗಳಂತೆ ಬಂದು ಹೋದರು. ಮಡದಿಯ ನೆನಪು ಕಣ್ಣೀರು ತರಿಸಿತು… ಟೀಪಾಯಿ ಮೇಲಿದ್ದ ಚಹಾದ ಕಪ್ಗೆ ಇರುವೆಗಳು ಮುತ್ತಿಕ್ಕಿದ್ದವು, ಚಹಾದ ಕಪ್ ವೃದ್ಧಾಶ್ರಮದಂತೆ, ಇರುವೆಗಳು ವೃದ್ಧರು, ಅನಾಥರಂತೆ ಗೋಚರಿಸಿದಾಗ ಮತ್ತೆ ನಾನು ವಾಸ್ತವ ಲೋಕಕ್ಕೆ ಬಂದೆ.
ಈಗ ನನಗೆ ಕಾರ್ಮಿಕರ ನಿವೃತ್ತಿ ವೇತನವು ಬರುತ್ತಿದೆ. ಆದರೆ ವದ್ಧಾಶ್ರಮಕ್ಕೆ ಹಣ ಸಂದಾಯ ಮಾಡುವುದನ್ನು ನಿಲ್ಲಿಸಿಲ್ಲ! ನಾನು ಮುಂದಾಲೋಚನೆಯಿಂದ ಈ ಕ್ರಮ ಕೈಗೊಂಡಿದ್ದು ಸರಿಯಾಗಿಯೇ ಇದೆ, ಎಂದು ಈಗ ಅನಿಸುತ್ತಿದೆ. ಎಲ್ಲವೂ ನಾನು ಅಂದುಕೊಳ್ಳುತ್ತಿರುವಂತೆ ನಡೆಯುತ್ತಾ ಬಂದಿದೆ, ಅತ್ತ ಮಗ ಬಂದುಬಿಡು, ಎಂದು ಪದೇಪದೇ ಫೋನಾಯಿಸುತ್ತಲೇ ಇರುತ್ತಾನೆ. ಈಗ ಅವನಿಗೇ ಬೇಸರವಾಗಿ ನಿಲ್ಲಿಸಿದ್ದಾನೆ. ಹಾಗಂತ ನಾನು ಅವರಿಗೆ ಬೇಸರವಾಗಿಲ್ಲ. ಆದರೆ ಅವರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದು ನನಗೆ ಸಂತೋಷ ತಂದಿದೆ. ಕೆಲವೊಂದು ಬಾರಿ ಮನಸ್ಸು ಯೋಚಿಸುತ್ತದೆ… ಅವರೊಂದಿಗೆ ಹೋಗಿ ಕಾಲ ಕಳೆಯಬೇಕೆಂದು! ಮರುಕ್ಷಣ ಮುಂದಿನದನ್ನು ನೆನೆಸಿಕೊಂಡಾಗ ನನಗೆ ತುಂಬಾ ವೇದನೆ ಆಗುತ್ತದೆ. ಇನ್ನೂ ಗಟ್ಟಿಮುಟ್ಟಾಗಿದ್ದೇನೆ. ಮುಂದೆ ಇನ್ನಷ್ಟು ವೃದ್ಧಾಪ್ಯವು ಸಮೀಪಿಸುವ ಪೂರ್ವದಲ್ಲಿಯೇ ವೃದ್ಧಾಶ್ರಮದಲ್ಲಿ ನನ್ನ ಅಂತಿಮ ದಿನಗಳನ್ನು ಕಳೆಯಬೇಕೆಂದಿದ್ದೇನೆ. ಆದರೆ ನಾನು ಆ ವಿಷಯವನ್ನು ಯಾರೊಂದಿಗೂ ಇನ್ನೂ ಹೇಳಿಕೊಂಡಿಲ್ಲ. ನಾನು ಈ ಹಿಂದೆ ತೆಗೆದುಕೊಂಡ ನಿರ್ಧಾರವು ಸರಿಯಾಗಿಯೇ ಇದೆ, ಎಂದೆನಿಸುತ್ತದೆ. ಹೇಗೂ ನಾನು ಅವರಿಗೆ ಹೊಸ ಪರಿಚಯ ಅಲ್ಲ! ಸತತ ಹತ್ತು ವರ್ಷಗಳಿಂದಲೂ ಅವರ ಒಡನಾಟದಲ್ಲಿದ್ದೇನೆ. ನನಗೆ ಅಲ್ಲಿ ಯಾವತ್ತೂ ಸ್ವಾಗತವಿದೆ. ಮುಂದಿನ ದಿನಗಳಲ್ಲಿ ಅವರು ನನ್ನನ್ನು ಚೆನ್ನಾಗಿಯೇ ನಡೆಸಿಕೊಳ್ಳುತ್ತಾರೆಂಬ ಭರವಸೆಯು ನನ್ನಲ್ಲಿದೆ.
ಆಗಾಗ ಮಗ ಫೋನಾಯಿಸುತ್ತಲೇ ಇರುತ್ತಾನೆ. ಆರೋಗ್ಯದ ಬಗ್ಗೆ ಕೇಳುತ್ತಾನೆ. ನಾನು ಹೇಗೂ ನಿರ್ಧಾರ ಮಾಡಿ ಬಿಟ್ಟಾಗಿದೆ! ‘ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ಲ ‘ಎಂಬAತಾಗಿದೆ. ಈ ಹಿಂದೆ ಅದೆಷ್ಟೋ ಆ ಆಶ್ರಮದ ವಿಳಾಸವನ್ನು ಕೇಳಿಕೊಂಡು ಬಂದ ಅನಾಥರಿಗೆ, ಅಸಹಾಯಕರಿಗೆ, ವೃದ್ಧರಿಗೆ ನೀಡಿದ್ದೇನೆ. ಅವರೀಗ ನೆಮ್ಮದಿಯಿಂದಿರಬಹುದು. ಆದರೆ ನಾನೇ ಇದುವರೆಗೂ ಆ ಆಶ್ರಮವನ್ನು ನೋಡಿಯೇ ಇಲ್ಲ! ಈಗ ಅಂತಹ ಸುವರ್ಣಅವಕಾಶವು ಬಂದೊದಗಿದೆ.ಈಗ ವಿಷಯವನ್ನು ಮಗ, ಸೊಸೆಗೆ ಪ್ರಸ್ತಾಪ ಮಾಡಬೇಕೆಂದಿದ್ದೇನೆ. ಮರುಕ್ಷಣ ನನ್ನ ನಿರ್ಧಾರಕ್ಕೆ ಅವರು ಅಡ್ಡಿ ಬಂದರೆ… ನನ್ನ ಕನಸು ನುಚ್ಚುನೂರಾಗುವುದರಲ್ಲಿ ಸಂಶಯವೇ ಇಲ್ಲ!ಎಂದು ಆ ವಿಷಯವನ್ನು ಕೈಬಿಡುತ್ತೇನೆ. ಯಾವುದಕ್ಕೂ ನನ್ನಿಂದಾಗಿ ಅವರಿಗೆ ತೊಂದರೆಯು ಬರಬಾರದು!
ಹೊರಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಮನೆಗೆ ಬೀಗ ಹಾಕಿ ಹೊರಬಂದೆ. ಮನೆಯಿಂದ ಹೊರಡುವಾಗ ಒಂದು ಸಲ ಮನೆಯನ್ನು ಹಿಂದಿರುಗಿ ನೋಡಿದೆ. ಮಡದಿ ಜ್ಞಾಪಕಕ್ಕೆ ಬಂದಳು. ‘ನನ್ನನ್ನು ಕರೆದುಕೊಂಡು ಹೋಗಿರಿ’ ಎನ್ನುತ್ತಿರುವಂತೆ ಭಾಸವಾಯಿತು. ಕಣ್ಣುಗಳ ತುಂಬಾ ದಳದಳ ನೀರು ಇಳಿಯತೊಡಗಿದವು…
ಬಸ್ ನಿಲ್ದಾಣಕ್ಕೆ ಬಂದಾಗ ಬಸ್ಸು ಹೊರಡುವ ಸಿದ್ಧತೆಯಲ್ಲಿತ್ತು. ತಕ್ಷಣ ಬಸ್ ಏರಿದೆ. ಹುಟ್ಟಿದ ಊರು ಹಿಂದೆ ಸರಿಯತೊಡಗಿದಾಗ… ನಾನು ಏನನ್ನೋ ಕಳೆದುಕೊಂಡAತೆನಿಸಿತು. ನಾನು ಅಲ್ಲಿವರೆಗೂ ನಿರ್ಮಿಸಿದ ಕಟ್ಟಡಗಳು ಮಾತ್ರ ಶುಭಾಶಯಗಳು’ ಹೇಳುತ್ತಿರುವಂತೆ ತೋರಿತು. ಆ ಊರಿಗೆ ಬಂದಿದ್ದಾಯ್ತು. ಆಟೋರಿಕ್ಷಾದವನಿಗೆ ವಿಳಾಸ ತೋರಿಸಿ ಹತ್ತಿದ್ದಾಯ್ತು. ಕೆಲ ನಿಮಿಷಗಳಲ್ಲಿ ಆಟೋರಿಕ್ಷಾ ಆ ಊರಿನ ಹೊರವಲಯಕ್ಕೆ ಬಂದಿತು. ಕಟ್ಟಡದ ಮೇಲ್ಭಾಗದಲ್ಲಿ ನಾಮಫಲಕವು ಎದ್ದು ತೋರಿತು. ಅಮೃತ ಫೌಂಡೇಶನ್ ನೀರಾಶ್ರಿತರ ಕೇಂದ್ರ ಮತ್ತು ವೃದ್ಧಾಶ್ರಮ’. ನಾಮಫಲಕದಿಂದ ನನ್ನ ಬಾಳಿನಲ್ಲಿ ಹೊಸ ಬೆಳಕು ಮೂಡಿಬಂದAತಾಯಿತು. ಸ್ವರ್ಗಕ್ಕೆ ಮೂರೇ ಗೇಣು ಎಂಬAತಾಯಿತು…
ವೃದ್ಧಾಶ್ರಮದ ಸುತ್ತಲೂ ಸುಂದರವಾದ ಪಾರ್ಕ್, ಅಲ್ಲಲ್ಲಿ ಕಲ್ಲಿನ ಬೆಂಚುಗಳು ಎತ್ತರವಾದ ಅಶೋಕ ವೃಕ್ಷಗಳು ಇನ್ನಿತರ ಮರಗಳು , ಅರಳಿದ ತರತರಸುಮಗಳು ಗೋಚರಿಸಿದವು. ಕ್ಷಣ ಕಾಲ ನನಗೆ ಸ್ವರ್ಗ ಲೋಕಕ್ಕೆ ಬಂದAತೆನಿಸಿತು. ಯಾರದೋ ಗಣ್ಯರ ಭಾಷಣವು ಸ್ಪೀಕರಿನಿಂದ ಕೇಳಿ ಬರುತ್ತಿತ್ತು. ಆಶ್ರಮವನ್ನು ಪ್ರವೇಶಿಸುತ್ತಿದ್ದಂತೆ … ನನ್ನಲ್ಲಿ ಶಕ್ತಿ ,ಧೈರ್ಯ ಮೈಯಲ್ಲಿ ತುಂಬಿದAತಾಯಿತು. ಸಭಾಭವನವು ಕ್ಕಿಕ್ಕಿರಿದಿತ್ತು. ವೇದಿಕೆಯಲ್ಲಿ ಗಣ್ಯರ ಭಾಷಣವು ಮುಂದುವರೆದಿತ್ತು. ನಾನು ಒಂದು ಮೂಲೆಯಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡೆ. ಅಷ್ಟರಲ್ಲಿ, ಯಾರದೋ ಕರೆ ಬಂದಿತು. ನೋಡಿದಾಗ ಅದು ಮಗನ ಕರೆಯಾಗಿತ್ತು. ಸದ್ದು ಗದ್ದಲದಲ್ಲಿ ಸರಿಯಾಗಿ ಕೇಳಿಸುವುದಿಲ್ಲವೆಂದು ಸಭಾಭವನದಿಂದ ಹೊರಬಂದೆ. ಅವನು ವಾರದ ಹಿಂದೆಯೇ ಕರೆ ಮಾಡಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದ. ಈಗ ನಾನು ಕರೆಯನ್ನು ಸ್ವೀಕರಿಸಿದೆ.
“ಅಪ್ಪಾಜಿ, ಮುಂದಿನ ತಿಂಗಳು ಹತ್ತನೇಯ ತಾರೀಖಿಗೆ ‘ಅಮ್ಮನ ದಿನ’ ವಿದೆ. ನಾನು ನಗರದ ಹೊರವಲಯದಲ್ಲಿ ಮೂರು ಎಕರೆ, ಐದು ಗುಂಟೆ ಜಮೀನನ್ನು ಖರೀದಿಸಿದ್ದೇನೆ. ಅಲ್ಲಿ ಅಮ್ಮನ ಹೆಸರಿನಲ್ಲಿ ವೃದ್ಧಾಶ್ರಮವನ್ನು ಪ್ರಾರಂಭಿಸಬೇಕೆAದಿದ್ದೇನೆ. ಇದರಿಂದ ಸಮಾಜಕ್ಕೆ ನಾವು ಅಳಿಲು ಸೇವೆಯನ್ನು ಸಲ್ಲಿಸಿದಂತಾಗುತ್ತದೆ. ಭೂಮಿ ಪೂಜೆಯನ್ನು ಅಂದೆ ಇಟ್ಟುಕೊಳ್ಳಲು ಶಾಸ್ತ್ರಿಗಳು ಹೇಳಿದ್ದಾರೆ. ಇದರಿಂದ ಅಮ್ಮನ ಆತ್ಮಕ್ಕೆ ಶಾಂತಿಯು ಆದಂತಾಗುತ್ತದೆ. ನೀವು ಬೇಗ ಬಂದುಬಿಡಿ. ಉಳಿದ ವಿಷಯಗಳನ್ನು ಮನೆಯಲ್ಲಿ ಯೇ ಚರ್ಚಿಸೋಣ, ನನ್ನ ಗೆಳೆಯನ ಅಪ್ಪಾಜಿಯವರಿಂದ, ನೀವು ತಪ್ಪದೇ ವೃದ್ಧಾಶ್ರಮಕ್ಕೆ ಹಣವನ್ನು ಸಂದಾಯ ಮಾಡುತ್ತಿರುವಿರೆಂದು ತಿಳಿದು ಬಂದಿತ್ತು. ನಾನು ಆಗಿನಿಂದಲೇ ಒಂದು ನಿರ್ಧಾರಕ್ಕೆ ಬಂದಿದ್ದೆ. ಅಮ್ಮನ ಹೆಸರಿನಲ್ಲಿ ವ್ರದ್ಧಾಶ್ರಮವನ್ನು ಪ್ರಾರಂಭಿಸಬೇಕೆAದು….!” ಮಗನ ಮಾತು ಕೇಳಿ ಇದು ಕನಸೋ, ನನಸೋ ಒಂದೂ ತಿಳಿಯದಂತಾಯಿತು. ಅವನ ಮೇಲೆ ಅಪಾರ ಗೌರವ, ಹೆಮ್ಮೆ ಮೂಡ ತೊಡಗಿತು
ನಾನು ವ್ರದ್ದಾಶ್ರಮವನ್ನು ಸೇರಲು ಹೊರಟರೆ… ಅವನು ಅಂತಹ ವ್ರದ್ದಾಶ್ರಮವನ್ನೇ ನಿರ್ಮಿಸಲು ಹೊರಟಿರುವುದು ನನ್ನ ಸಂತಸಕ್ಕೆ ಪಾರವೇ ಇಲ್ಲದಂತಾಯಿತು. ಯಾವುದಕ್ಕೂ ನನ್ನ ನಿರ್ಧಾರವನ್ನು ತಿಳಿಸದೆ ಒಳ್ಳೆಯದೇ ಆಯಿತು. ಇದು ಎಲ್ಲರಿಗೂ ಸಾಧ್ಯವಾಗದ ಕೆಲಸ! ಅವನ ನಿಸ್ವಾರ್ಥ ಸೇವೆಯ ಮುಂದೆ ನಾನು ಕುಬ್ಜನಾಗಿಬಿಟ್ಟೆ. ಅವನು ನೆರವೇರಿಸುವ ಕಾರ್ಯದಲ್ಲಿ ನಾನು ಭಾಗಿಯಾಗಬೇಕು. ಆಶ್ರಮದಿಂದ ಸಮಾಜದಲ್ಲಿಯ ದೀನದಲಿತರಿಗೆ, ದುರ್ಬಲರಿಗೆ, ವೃದ್ಧರಿಗೆ, ಅಸಹಾಯಕರಿಗೆ, ಅನಾಥರಿಗೆ ನೆಮ್ಮದಿಯ ಜೀವನವನ್ನು ಕಟ್ಟಿ ಕೊಟ್ಟಂತಾಗುತ್ತದೆ. ಮಗನನ್ನು ಹೇಗೆ ಹೊಗಳಿಕೊಳ್ಳಬೇಕೆಂದು ನನಗೆ ಒಂದೂ ತಿಳಿಯಲಿಲ್ಲ. ಆ ಒಂದು ಕರಪತ್ರವು ಮಗನಿಂದ ದೊಡ್ಡ ಸಾಧನೆಯನ್ನೇ ಮಾಡಿಸಿಬಿಟ್ಟಿತು. ಕೂಡಲೇ ನಾನು ಅಲ್ಲಿಂದ ಹಿಂದಿರುಗಿದೆ. ಅಷ್ಟರಲ್ಲಿ… ಧ್ವನಿವರ್ಧಕದಲ್ಲಿ ನನ್ನ ಹೆಸರು ಕೇಳಿ ಬಂದಿತು. ಈಗ ನಾನು ಸನ್ಮಾನಿಸಿಕೊಳ್ಳಲು ಬಯಸಲಿಲ್ಲ! ಮಗನ ಮಾತುಗಳಿಂದಲೇ ನನಗೆ ಹೆಚ್ಚಿನ ಸನ್ಮಾನವಾಗಿ ಬಿಟ್ಟಿತ್ತು. ಆ ವೃದ್ಧಾಶ್ರಮವನ್ನು ಒಂದು ಬಾರಿ ಕಣ್ಣುತುಂಬಾ ನೋಡಿದೆ. `ಅಮೃತ್ ಫೌಂಡೇಶನ್…’ ಎನ್ನುವ ಹೆಸರಿನಲ್ಲಿ ನನ್ನ ಮಡದಿಯ ಹೆಸರು ಗೋಚರಿಸಿತು.