ಇಂದು ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಕಾಡಾನೆಗಳದ್ದೇ ಸುದ್ದಿ. ಅವು ಕಾಡಿನಿಂದ ನಾಡಿಗೆ ಕಾಲಿಟ್ಟು ದಾಂಧಲೆ ನಡೆಸಿದ ಘಟನೆಗಳೇ ಹೆಚ್ಚು. ಕೆಲವೊಮ್ಮೆ ಸಾವು-ನೋವಿನ ವಿಷಾದಕರ ಸುದ್ದಿಯೂ ಇರುತ್ತದೆ. ಆಳವಾದ ಚಿಂತನೆ ಮಾಡಿದರೆ, ಈ ಆನೆಗಳನ್ನು ನಾಡಿಗೆ ಬರ ಮಾಡಿಕೊಂಡದ್ದೇ ನಮ್ಮವರು. ತಮ್ಮ ಸ್ವಾರ್ಥಕ್ಕೆ ಅವರು ನಾನಾ ಕಾರಣಗಳಿಗೆ ಕಾಡನ್ನು ಕಡಿದು ಉರುಳಿಸಿದರು. ಅಭಿವೃದ್ಧಿಯ ನಾಮದಲ್ಲಿ ಜಲ ವಿದ್ಯುತ್, ಗಣಿಕಾರಿಕೆ, ರೈಲ್ವೆ ಹಳಿ, ರಿಸಾರ್ಟ್, ಸುರಂಗ, ಹೆದ್ದಾರಿ ಅನ್ನುತ್ತಾ ಎಲ್ಲಡೆ ಕೊಡಲಿ ಬೀಸಿದರು. ಕೃಷಿ ಭೂಮಿಯ ಒತ್ತುವರಿಯೆಂದು ಸಾಕಷ್ಟು ಅರಣ್ಯವನ್ನು […]