ಬದುಕಿನದ್ದಕ್ಕೂ ದೊಡ್ಡ ಕನಸುಗಳನ್ನು ಕಂಡ ಅಪಾರ ದೂರದರ್ಶಿತ್ವ ಮತ್ತು ಬದ್ಧತೆಯಿದ್ದ ಕೆಎಂ ಶರೀಫ್ ಸಾಹೇಬರು ಇತ್ತೀಚೆಗೆ ಸೃಷ್ಟಿಕರ್ತನೆಡೆಗೆ ಪ್ರಯಾಣ ಬೆಳೆಸಿದರು. ಇವರು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರಾಗಿದ್ದ ನನ್ನ ತಂದೆಯವರಾದ ಇಬ್ರಾಹಿಮ್ ಸಈದ್ ರವರ ಹಿರಿಯಣ್ಣ. ನನ್ನ ದೊಡ್ಡಪ್ಪನವರಲ್ಲಿ ನಾನು ಗುರುತಿಸಿದ ಅತಿ ವಿಶೇಷತೆ ಸಹಜವಾದ ನಾಯಕತ್ವದ ಗುಣ. ಕೆಲಸವನ್ನು ಹಂಚುವುದು, ಅದನ್ನು ಮಾಡಿಸುವುದು, ಅದರ ಮೇಲ್ನೋಟ ವಹಿಸುವುದು, ಸಮಯಕ್ಕೆ ಸರಿಯಾಗಿ ಮುಗಿಸುವಂತೆ ಪ್ರೇರೇಪಿಸುವುದು ಇವರ ವಿಶೇಷತೆಯಾಗಿತ್ತು. ಎಲ್ಲ ವಿಷಯಗಳಲ್ಲಿಯೂ ಗುಣಮಟ್ಟಕ್ಕೆ ಮಹತ್ವವನ್ನು ನೀಡುವುದು. ಕೆಲಸದಲ್ಲಿ ಬದ್ಧತೆ ಮತ್ತು […]