ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟ ಆ ವಿಮಾನದಲ್ಲಿ ನೂರಾರು ಕನಸುಗಳನ್ನು ಹೊತ್ತ ಪ್ರಯಾಣಿಕರಿದ್ದರು. ನಗು ನಗುತ್ತಾ ತಮ್ಮ ತವರಿನಿಂದ ಹೊರಟವರು, ತಮ್ಮ ಬಂಧುಗಳನ್ನು ಆಲಂಗಿಸಿಕೊಡು ಬಹುದೂರದ ಪ್ರದೇಶಕ್ಕೆ ಹೋಗುವಾಗ ಬಿಕ್ಕಿ ಬಿಕ್ಕಿ ಅತ್ತವರು, ನಗುತ್ತಾ ಟಾಟಾ ಹೇಳಿದವರು, ಭವಿಷ್ಯದ ಖುಶಿಯ ಕನಸನ್ನು ಹೊತ್ತು ಆ ವಿಮಾನವನ್ನು ಏರಿ ಸಂಭ್ರಮ ಪಟ್ಟವರು… ಮುಂದೆ ಏನಾಗುತ್ತೋ ಎಂಬ ಭೀತಿ ಇಲ್ಲದೇ ನಿರಾಳವಾಗಿ ಸೀಟಿನಲ್ಲಿ ಒರಗಿ ಸೆಲ್ಫಿ ತೆಗೆದವರು ಕೆಲವೇ ನಿಮಿಷದಲ್ಲಿ ಸುಟ್ಟು ಕರಕಲಾಗಿ ಭಸ್ಮವಾಗಿ ಬಿಟ್ಟರು!
ತಾ. 12-6-25 ಒಂದು ಕರಾಳ ದಿನವಾಗಿತ್ತು ಭಾರತಕ್ಕೆ. ಟಿ.ವಿ. ನ್ಯೂಸ್ಗಳು, ಸೋಶಿಯಲ್ ನ್ಯೂಸ್ಗಳು ಈ ವಿಮಾನದ ಅಪಘಾತದ ಬಗ್ಗೆ ಹೇಳ ತೊಡಗಿದಾಗ, ದೃಶ್ಯಗಳನ್ನು ಕಂಡಾಗ ಕುಳಿತಲ್ಲೇ ಶಿಲೆಯಂತಾಗಿದ್ದೆ. ಅದೆಂತಹ ಭೀಕರ ದೃಶ್ಯ! ವಿಮಾನ ತನ್ನ ಒಡಲಿನವರ ಸಾವಿಗೆ ಕಾರಣವಾಗುವುದರ ಜೊತೆಗೆ ಈ ವಿಮಾನಕ್ಕೆ ಸಂಬAಧವೇ ಇಲ್ಲದೇ ತಮ್ಮ ಹಾಸ್ಟೆಲ್ನಲ್ಲಿ ಕುಳಿತು ಊಟ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನೂ ಬಲಿ ಪಡೆದಿತ್ತು! ಹಾಸ್ಟೆಲ್ ಮೇಲೆ ಭಾರೀ ಶಬ್ಧದೊಂದಿಗೆ ಅಪ್ಪಳಿಸಿದ ಬೋಯಿಂಗ್ |7| ವಿಮಾನ ಕಟ್ಟಡದ ಮೇಲೆ ಬಿತ್ತು. ಬೆಂಕಿಯ ಗೋಲದಲ್ಲಿ ಆಕಾಶದತ್ತೆರಕ್ಕೆ ಕಪ್ಪು ಹೊಗೆ ಎದ್ದಿತ್ತು. 274 ಜನರು ಸಜೀವ ದಹನ ಆಯಿತು. ಪೈಲೆಟ್ ಕೊನೆಯ ಕ್ಷಣ ಅಸಹಾಯಕನಾಗಿ `ಮೇಡೇ’ ಎಂದು ಕೂಗುತ್ತಿದ್ದದ್ದು (ನಮಗೆ ನೆರವು ಬೇಕು) ಕೇಳಿ ಬಂತು. ವಿಮಾನದ ಪತನ ಇಡೀ ವಿಶ್ವದಲ್ಲೇ ಬೆರಗು ಹುಟ್ಟಿಸಿತ್ತು.
2010ರಲ್ಲಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ದುಬಾಯಿಯಿಂದ ಮುಂಜಾನೆಯಲ್ಲಿ ಬಂದ ವಿಮಾನ ಲ್ಯಾಂಡ್ ಆಗುವಾಗ ರನ್ವೇಯಿಂದ ಜಾರಿ ಆಳವಾದ ಕಂದಕಕ್ಕೆ ಬಿತ್ತು. ಆಗ ಬೆಂಕಿಯ ಜ್ವಾಲೆಯೊಂದಿಗೆ ಭೀಕರವಾದ ದೃಶ್ಯ ಕಂಡು ಬಂತು. ವಿಮಾನದಲ್ಲಿದ್ದ ಪ್ರಯಾಣಿಕರು ಬೆಂದು ಕರಟಿ ಹೋಗಿದ್ದರು. ಬೆರಳೆಣಿಕೆಯಷ್ಟು ಪ್ರಯಾಣಿಕರು ಬದುಕಿ ಉಳಿದಿದ್ದರು ಅಂದು. ಅದೇ ದೃಶ್ಯ ಬೆಂಕಿಯಲ್ಲಿ ಕರಟಿದ ಮಾನವರ ದೇಹಗಳು ಈಗಲೂ ಕಣ್ಣೆದುರು ಹಸಿಯಾಗಿ ಬಂತು. ಇಂತಹ ಭೀಕರ ಸಾವು ಯಾರಿಗೂ ಬಾರದಿರಲಿ. ಗೆಳತಿ ಶಾಹಿನ್ ಈ ಕರಾಳ ದಿನವನ್ನು ಹದಿನೈದು ವರ್ಷವಾದರೂ ಮರೆಯದೇ ದುಃಖಿಸುತ್ತಿರುತ್ತಾಳೆ. ಅವಳ ಪತಿ ಆ ನತದೃಷ್ಟ ವಿಮಾನದಲ್ಲಿದ್ದರು. ಅವರ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿದ್ದ ಶಾಹಿನ್ ಮರುದಿನ ಮುಂಜಾವಿಗೆ ಬರುವ ತನ್ನ ಪತಿಯ ನಿರೀಕ್ಷೆಯಲ್ಲಿ ರಾತ್ರಿ ಕುಳಿತು ತನ್ನ ಎರಡೂ ಕೈಗೆ ಮೆಹಂದಿ ಹಚ್ಚಿದ್ದಳು. ಪತಿಯ ಪ್ರಿಯವಾದ ಬಸಲೆಪುಂಡಿಯನ್ನು ಬೆಳಗ್ಗಿನ ಉಪಹಾರಕ್ಕೆ ಸಿದ್ಧಪಡಿಸಿಟ್ಟಿದ್ದಳು. ಪತಿಯು ದುಬಾಯಿ ವಿಮಾನ ನಿಲ್ದಾಣದಲ್ಲಿದ್ದಾಗ ಹೇಳಿದ್ದ, “ಪ್ರಿಯೆ… ನೀನು ಪ್ರೀತಿಯಿಂದ ಕೊಟ್ಟ ಶರ್ಟ್ನ್ನೇ ನಾನು ಇಂದು ಧರಿಸಿದ್ದೇನೆ.” ಬಹುಶಃ ಆ ಮಾತೇ ಆತನ ಕೊನೆಯದಾಗಬಹುದು ಎಂದು ಶಾಹಿನ್ಗೆ ತಿಳಿದಿರಲಿಲ್ಲ. ತನ್ನ ಮಕ್ಕಳೊಂದಿಗೆ ಮುಂಜಾವಿಗೆ ವಿಮಾನ ನಿಲ್ದಾಣಕ್ಕೆ ಹೋದ ಶಾಹಿನ್ಗೆ ಅಲ್ಲಿಯ ವಾತಾವರಣ ನೋಡಿ ದಿಗಿಲಾಗಿತ್ತು. ಜನರು ಆಚೀಚೆ ಓಡಾಡುತ್ತಾ, “ವಿಮಾನ ಬಿತ್ತು” ಎನ್ನುವುದು ಮಾತ್ರ ಕೇಳಿಸಿತ್ತು. ಮತ್ತೆ ಆದದ್ದೆಲ್ಲಾ ಭೀಕರವಾದ ದುಃಸ್ವಪ್ನದಂತಾಗಿತ್ತು. ಕರಟಿ ಹೋದ ಶವಗಳನ್ನು ಒಂದಾಗಿ ತರುತ್ತಿರುವಾಗ ತನ್ನ ಪತಿಯ ಗುರುತನ್ನು ಪತ್ತೆ ಹಚ್ಚಲಾಗದಂತೇ ಎಲ್ಲವೂ ಕರಟಿ ಹೋಗಿತ್ತು. ಆಗ ಅವಳಿಗೆ ನೆನಪದಾದದ್ದು ತನ್ನ ಪತಿ ಅಂದು ಹಾಕಿದ್ದ ಶರ್ಟ್ ತಾನು ಪ್ರೆಸೆಂಟ್ ಮಾಡಿದ್ದು…! ಆಕೆಯ ಕಣ್ಣು ಒಂದು ಕರಟಿ ಹೋದ ಶರೀರದತ್ತ ನೆಟ್ಟಿತು. ಆ ಶರೀರದಲ್ಲಿ ಕೇವಲ ಒಂದು ಭಾಗದಲ್ಲಿ ಹಾಕಿದ್ದ ವಸ್ತç ಬೆಂಕಿ ಹಿಡಿಯದೇ ಉಳಿದಿತ್ತು. ಆ ತುಂಡು ವಸ್ತçದ ಗುರುತು ಹಿಡಿದ ಶಹೀನ್ಗೆ ಪತಿಯ ದೇಹ ದೊರಕಿತ್ತು! ಆಕೆಯು ಕುಸಿದು ಬಿದ್ದಳು. ಈ ಹದಿನೈದು ವರ್ಷದಲ್ಲಿ ಪ್ರತೀ ಮೇ ತಿಂಗಳು ಅವಳಿಗೆ ಈ ದೃಶ್ಯ ಹಸಿ ಹಸಿಯಾಗಿ ಕಾಡುತ್ತದೆ. ಅಹಮದಾಬಾದ್ನ ವಿಮಾನ ದುರಂತದ ದೃಶ್ಯಗಳನ್ನು ನೋಡುತ್ತಿದ್ದಾಗೇ ಶಾಹಿನ್ ಖಿನ್ನತೆಗೆ ಜಾರಿದ್ದಳು. ನನಗೆ ಕಾಲ್ ಮಾಡಿ ಬಹಳಷ್ಟು ಅತ್ತಳು. ಪತಿ ಇಲ್ಲದೇ ತನ್ನ ಮೂರು ಮಕ್ಕಳನ್ನು ಸಾಕಿ ಬೆಳೆಸಿ ವಿವಾಹ ಮಾಡಿದ ಆ ಕಷ್ಟಕರವಾದ ಸಮಯವನ್ನು ಮೆಲುಕು ಹಾಕಿಕೊಂಡಳು. ಮೂವತ್ತೆöÊದರ ಹರೆಯದಲ್ಲಿ ಆಕೆ ಪತಿಯನ್ನು ಕಳೆದುಕೊಂಡಿದ್ದಳು.
ಅದೆಷ್ಟು ಕನಸುಗಳನ್ನು ಹೊತ್ತು ಲಂಡನ್ಗೆ ಹೊರಟಿರಬಹುದು ಜನರು. ಎಲ್ಲರದೂ ಒಂದೊAದು ದುಃಖಿತ ಕಥೆಗಳು. ಡಾಕ್ಟರ್ ಒಬ್ಬರು ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಲಂಡನ್ಗೆ ತಾನು ಖರೀದಿಸಿದ ಹೊಸ ಮನೆಗೆ ಶಾಶ್ವತವಾಗಿ ನೆಲೆಸಲು ಕರೆಯಲು ಬಂದು ಆ ಸುಂದರ ಕುಟುಂಬ ವಿಮಾನದಲ್ಲಿ ಕುಳಿತು ಸೆಲ್ಫಿ ತೆಗೆದು ತಮ್ಮವರಿಗೆ ಕಳಿಸಿದ್ದೇ ಕೊನೆಯ ಫೋಟೋ ಆಯಿತು. ನವವಧು ಒಬ್ಬಳು ತನ್ನ ಭಾವೀ ಕನಸನ್ನು ನನಸು ಮಾಡಲು ಪತಿಯನ್ನು ಸೇರಲು ಹೊರಟಿದ್ದಳು. ತನ್ನ ಪತ್ನಿಯ ಚಿತಾಭಸ್ಮವನ್ನು ಲಂಡನ್ನಿAದ ಭಾರತಕ್ಕೆ ತಂದು ಈ ನೆಲದಲ್ಲಿ ವಿಸರ್ಜಿಸಿ ಪುನಃ ಮರಳಿ ಲಂಡನ್ಗೆ ಹೋಗಲು ಈ ನತದೃಷ್ಟ ವಿಮಾನ ಹತ್ತಿದ್ದರು. ಲಂಡನ್ನಲ್ಲಿ ಅವರ ಎರಡು ಪುಟಾಣಿ ಮಕ್ಕಳನ್ನು ಬಿಟ್ಟು ಬಂದಿದ್ದರು. ಆ ಮುಗ್ಧ ಮಕ್ಕಳಿಗೆ ತಂದೆ ಶಾಶ್ವತವಾಗಿ ಬಾರದೇ ಹೋದದ್ದೂ ತಿಳಿಯಲಿಲ್ಲ! ಹೀಗೆ ನೂರಾರು ಹೃದಯ ಹಿಂಡುವ ಕಥೆಗಳು ಮಸಣ ಸೇರಿದೆ. ಗುಜರಾತಿನ ಮಾಜಿ ಸಿ.ಎಂ. ತನ್ನ ಪತ್ನಿಯನ್ನು ಕರೆತರಲು ಲಂಡನ್ಗೆ ಪ್ರಯಾಣಿಸಿದ್ದರು. ತಾಯಿ ಓರ್ವಳು ತನ್ನ ಮಕ್ಕಳನ್ನು ಕಾಣಲು ತೆರಳಿದ್ದಳು. ಬಕ್ರೀದ್ ಹಬ್ಬಕಾಗಿ ಊರಿಗೆ ಬಂದ ಒಂದೇ ಮನೆಯ ಐದು ಜನ ಗೋರಿ ಸೇರುವಂತಾಯಿತು!
ಮೆಡಿಕಲ್ ಕಾಲೇಜಿನ ಹಾಸ್ಟೆಲ್ನಲ್ಲಿ ವಿಮಾನ ಅಪ್ಪಳಿಸಿದಾಗ `ಬಲಿ’ ಆದ ವಿದ್ಯಾರ್ಥಿಗಳ ಹಿಂದೆಯೂ ಹಲವು ಹೆತ್ತವರ ಭವಿಷ್ಯದ ಕನಸುಗಳಿವೆ. ಹೆತ್ತವರ ಈ ಕನಸು ಬೆಂಕಿಯ ಜ್ವಾಲೆಗೆ ಭಸ್ಮವಾದವು. ಎಷ್ಟೆಲ್ಲಾ `ಸಾಲ’ ಮಾಡಿ ಈ ಮಕ್ಕಳಿಗೆ ಮೆಡಿಕಲ್ ಕಲಿಸಲು ಹೆತ್ತವರು ತಮ್ಮ ಜೀವನವನ್ನು ಮುಡಿಪ್ಪಾಗಿಟ್ಟಿರಬಹುದು! ನನಸಾಗದ ಕನಸಿನ ಹೆಸರಿನಲ್ಲಿ `ಸಾಲ’ ತೀರಿಸಲು ಪುನಃ ದುಡಿಯುವ ಶ್ರಮ ಜೀವಿಗಳಾಗಿ ಆ ಹೆತ್ತವರು ಜೀವಂತ ಇರಬೇಕಾಗಿದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವುಗಳು! ಸಂಗಾತಿಯನ್ನು ಕಳೆದು ಕೊಂಡವರ ನೋವುಗಳು, ಹೆತ್ತವರನ್ನು, ಸಹೋದರ-ಸಹೋದರಿಯರನ್ನು ಕಳೆದುಕೊಂಡ ನೋವುಗಳು ಅದೆಷ್ಟು ಕುಟುಂಬದ ಆರ್ಥಿಕ ಸ್ತಂಭವೇ ಕುಸಿದು ಬಿದ್ದಿರಬಹುದು… ದುರಂತಗಳು ನಮ್ಮ ಕಣ್ಣ ಎದುರು ನಡೆಯುತ್ತಾ ಇದ್ದರೂ ನಾವು ಮಾನವರಾಗುವುದಿಲ್ಲ. ಸಾವಿನಲ್ಲೂ ರಾಜಕೀಯ ಮಾಡುವ ರಾಜಕಾರಣ ಇರುವ ದೇಶ ನಮ್ಮದು. ನೀಚ, ಕ್ರೂರ, ಮನಃಸ್ಥಿತಿ ಇರುವ ಮನುಷ್ಯರು ಸಾವನ್ನೂ ಸಂಭ್ರಮಿಸುತ್ತಾರೆ. “ಕೋಮು ದ್ವೇಷ” ಎಂಬುವುದು ಸಾವಿನಲ್ಲೂ ಪಾಠ ಕಲಿಯುವುದಿಲ್ಲ.
ನಾವಿಂದು ಇಂತಹ ದುರಂತಗಳ ಹಿಂದಿನ ಕಾರಣಗಳನ್ನು ಅವಲೋಕಿಸಿದರೆ ಎಲ್ಲವೂ `ಭ್ರಷ್ಟಾಚಾರ’ದ ರಾಕ್ಷಸ ಕೈಗೆ ಒಳಪಟ್ಟಿರುವಂತಹದ್ದು. ನಮ್ಮ ವಿಮಾನಗಳ ಅವಸ್ಥೆ ಹೇಗಿದೆ ಎಂದರೆ ಲೇಖಕರಾದ ಇರ್ಶಾದ್ರವರು ನಮ್ಮ ಈ ಮಾಸಿಕದ ಲೇಖನದಲ್ಲಿ ಭಾರತದ ವಿಮಾನಗಳನ್ನು “ಹಾರಾಡುವ ಶವ ಪೆಟ್ಟಿಗೆಗಳು” ಎಂದು ಉಲ್ಲೇಖಿಸಿದ್ದಾರೆ. ನಿಜ… ಭಾರತದ ಹೆಚ್ಚಿನ ವಿಮಾನಗಳು ಯೋಗ್ಯವಾಗಿಲ್ಲ ಪ್ರಯಾಣಕ್ಕೆ. ಅಹಮದಾಬಾದ್ನ ವಿಮಾನದಲ್ಲಿದ್ದ ಓರ್ವ ಯುವಕ ಈ ದುರಂತದ ಕೆಲವೇ ನಿಮಿಷಕ್ಕೆ ಮೊದಲು ತಾನು ಲಂಡನ್ಗೆ ಪ್ರಯಾಣಿಸುವ ವಿಮಾನ ಬೋಯಿಂಗ್ ಎಐ 171ರ ಅಸ್ತವ್ಯವಸ್ಥೆಯ ಬಗ್ಗೆ ವೀಡಿಯೋ ಮಾಡಿದ್ದಾನೆ. ಎಸಿ ವರ್ಕ್ ಆಗ್ತಾ ಇಲ್ಲ ಎಂದು ಹಲವು ವಿಮಾನದಲ್ಲಿ ಆಸನಗಳೂ ಸರಿಯಾಗಿಲ್ಲ… ಕಳಪೆ ಗುಣಮಟ್ಟದ ಹಲವು ವಿಮಾನಗಳ ಬಗ್ಗೆ ಹಲವರು ದೂರಿ ಹೇಳಿರುತ್ತಾರೆ. ಪ್ಲಾಸ್ಟರ್ ಅಂಟಿಸಿದ ಕಿಟಕಿಗಳು, ಹಲವು ವಿಮಾಣಗಳ ಸ್ಥಿತಿಗತಿ ಉತ್ತಮವಾಗಿಲ್ಲ ಎಂದು ಪ್ರಯಾಣಿಕರು ದೂರುತ್ತಾ ಇರುತ್ತಾರೆ. ದುಬಾಯಿ, ಸೌದಿಯ ವಿಮಾನಗಳನ್ನು ಕಂಡವರಿಗೆ ಭಾರತದ ವಿಮಾನಗಳು `ಹಾರುವ ಶವ ಪೆಟ್ಟಿಗೆಗಳಾಗಿ’ ಕಾಣುವುದು ಸಹಜ.
ಏರ್ ಇಂಡಿಯಾದ ಬೋಯಿಂಗ್ ಎಐ 171 ವಿಮಾನದಲ್ಲಿ 242 ಮಂದಿ ಪ್ರಯಾಣಿಕರಿದ್ದು ಒಬ್ಬನೇ ಒಬ್ಬ ಬದುಕಿ ಉಳಿದದ್ದು ಪವಾಡವೇ. ತಾಂತ್ರಿಕ ದೋಷವೇ ಕಾರಣ ಎಂದು ದುರಂತಕ್ಕೆ ಹೇಳಲಾಗುತ್ತಿದೆ. ಇಂತಹ ತಾಂತ್ರಿಕ ದೋಷಗಳಿರುವ ವಿಮಾನಗಳನ್ನು ಪ್ರಯಾಣಕ್ಕೆ ಸಜ್ಜುಗೊಳಿಸುವ ಮೂಲಕ ವಿಮಾನ ಸಂಸ್ಥೆಗಳು ಜನರ ಜೀವದೊಂದಿಗೆ ಆಟ ಆಡುತ್ತಿರುವುದು ನಮ್ಮ ದುರಂತ.
“ಗುಡ್ ಬೈ ಇಂಡಿಯಾ” ಎಂದು ಹೇಳಿದ ಬ್ರಿಟಿಶ್ ಯುವಕರು ಶಾಶ್ವತವಾಗಿ ಇಡೀ ವಿಶ್ವಕ್ಕೇ ಗುಡ್ ಬೈ ಹೇಳಿದ್ದಾರೆ. ಅವರ ಸಂತಸದ ಮುಖ ವೀಡಿಯೋದಲ್ಲಿ ವೈರಲ್ ಆಗಿದೆ. ಯಾಕಾಗಿ ಭಾರತಕ್ಕೆ ತಮ್ಮ ಮಕ್ಕಳು ಹೋದರು ಎಂಬ ಸಂಕಟ ಅವರ ಹೆತ್ತವರಿಗೆ ಆಗಿರಬಹುದು. ಕ್ರಿಕೆಟ್ ಆಟಗಾರ ಒಬ್ಬರು ತಾನು ಇನ್ನು ಮುಂದೆ ಭಾರತದ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದ್ದಾರೆ. ದುಬಾರಿ ಹಣ ಕೊಟ್ಟು ಟಿಕೇಟ್ ಖರೀದಿಸಿದರೂ ಒಂದು ಲಘು ಉಪಹಾರವನ್ನೂ ಕೊಡದ ದರಿದ್ರ ಸಂಸ್ಥೆ ಅಂದರೆ ಭಾರತದ ವಿಮಾನ ಸಂಸ್ಥೆ.
ದುರAತ ಕಂಡ ವಿಮಾಣದಲ್ಲಿ ನತದೃಷ್ಟ ಎರಡು ಪೈಲಟ್ನಲ್ಲಿ ಒಬ್ಬರು ಮಂಗಳೂರು ಮೂಲದ ಕ್ಲೆöÊವ್ ಕುಂದರ್. ಅನುಭವೀ ಪೈಲಟ್ಗಳಿದ್ದರೂ ವಿಮಾಣವೇ ಕಳಪೆ ಸ್ಥಿತಿಯಲ್ಲಿದ್ದಾಗ ದುರಂತ ಸಂಭವಿಸುವುದು ಸತ್ಯ.
ನಮ್ಮ ದೇಶದ ಶ್ರೀಮಂತ ಲಕ್ಷಾಧೀಶರಿಗೆಲ್ಲಾ ಹೆಚ್ಚಿನ ರಾಜಕಾರಣಿ, ಸೆಲೆಬ್ರಿಟಿಗಳಿಗೆಲ್ಲಾ ಏರ್ಜೆಟ್, ಹೆಲಿಕಾಫ್ಟರ್ ಇತ್ಯಾದಿ ಸುಸಜ್ಜಿತವಾದ ಖಾಸಗಿ ವಿಮಾನಗಳಿರುತ್ತದೆ. ಅಂತಹ ಸೌಲಭ್ಯ ಇರುವವರಿಗೆ ಜನಸಾಮಾನ್ಯರು ಸಂಚರಿಸುವ ಕಳಪೆ ವಿಮಾನದ ಪರಿಚಯವೂ ಇರುವುದಿಲ್ಲ. ಅದಾನಿ-ಅಂಬಾನಿ, ಟಾಟಾ ಮುಂತಾದ ಉದ್ಯಮಿಗಳ ಕುಟುಂಬ ಇಂತಹ ವಿಮಾನವನ್ನೂ ಹತ್ತುವುದಿಲ್ಲ. ದುರಂತದಲ್ಲಿ ಮಡಿದವರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಟಾಟಾ ಸಂಸ್ಥೆ ಘೋಷಿಸಿದೆ. ಒಂದು ದುಃಖಿತ ಕುಟುಂಬದ ಸದಸ್ಯರು ಹೇಳಿದರು. ನಾವು ನಿಮಗೆ ಎರಡು ಕೋಟಿ ಕೊಡುತ್ತೇವೆ, ನಾವು ಕಳೆದುಕೊಂಡ ಪ್ರೀತಿಪಾತ್ರರನ್ನು ನಮಗೆ ಮರಳಿಕೊಡುವಿರಾ?! ಎಂದು. ಸತ್ಯ… ಬೆಲೆ ಕಟ್ಟಲಾಗದ `ಜೀವ’ವನ್ನೇ ಕಳೆದುಕೊಂಡವರಿಗೆ `ಕೋಟಿ’ಯ ಪರಿಹಾರ ಅವರಿಗಾದ `ನಷ್ಟ’ ತುಂಬಲಾರದು.
ವಿಮಾನದಲ್ಲಿದ್ದ ಪ್ರಯಾಣಿಕರು, ಗಗನ ಸಖಿಗಳು, ವಿಮಾನ ಬಿದ್ದ ಪ್ರದೇಶದಲ್ಲಿದ್ದ ಅಮಾಯಕ ನಾಗರಿಕರು, ವಿದ್ಯಾರ್ಥಿಗಳು ಎಲ್ಲಾ ಆ ಕರಾಳ ದಿನದ `ದುರಂತ’ದ ನತದೃಷ್ಟ ಮನುಷ್ಯರು. `ಸಾವು’ ಪರಮ ಸತ್ಯ. ಹುಟ್ಟಿದವರೆಲ್ಲಾ ಸಾಯಲೇಬೇಕು. ಆದ್ರೆ… ಈ ರೀತಿಯ ಭೀಕರತೆಯಲ್ಲಿ ನಮ್ಮ `ಅಂತ್ಯ’ ಆಗದಿರಲಿ. ದೇವನು ನಮ್ಮ ಸಾವಿನ ವಿಧಿ ಬರಹವನ್ನು ಉತ್ತಮವಾಗಿ ಬರೆದಿರಲಿ ಎಂದು ಪ್ರಾರ್ಥಿಸುತ್ತೇನೆ.
ಶಮು