ನಿಮಗೊಂದು ಕಥೆ ಹೇಳುತ್ತೇನೆ. ಆಬಿದ್ ಎಂಬ ಯುವಕ ಒಂದು ಶೂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕಠಿಣವಾಗಿ ಪರಿಶ್ರಮ ಪಡುತ್ತಿದ್ದ. ಐದು ವರ್ಷದಿಂದ ವಿಭಿನ್ನ ವಿನ್ಯಾಸಗಳನ್ನು ಮಾಡುತ್ತಿದ್ದ. ಅವನ ವಿನ್ಯಾಸದ ಪ್ರಕಾರ ಬಿಡುಗಡೆಯಾದ ಸ್ಯಾಂಡಲ್ ಮತ್ತು ಶೂಗಳಿಗೆ ಮಾರ್ಕೆಟ್ನಲ್ಲಿ ಉತ್ತಮ ಬೇಡಿಕೆಯಿತ್ತು. ಆದರೂ ಕಂಪೆನಿಯ ಮೆನೇಜರ್ ಆತನನ್ನು ಒಮ್ಮೆಯೂ ಹೊಗಳಲಿಲ್ಲ. ಒಳ್ಳೆಯ ಒಂದು ಮಾತನ್ನೂ ಹೇಳಲಿಲ್ಲ. ಆರು ತಿಂಗಳ ಹಿಂದೆ ಬಂದ ನೌಕರನಿಗೂ ಭಡ್ತಿ ದೊರೆತದ್ದು ಕಂಡು ದುಃಖವಾಯಿತು. ತನ್ನ ಸಾಮರ್ಥ್ಯವನ್ನು ಯಾರೂ ಗುರುತಿಸುತ್ತಿಲ್ಲವಲ್ಲ ಎಂದು ಯೋಚಿಸುತ್ತಾ ದಾರಿಯಲ್ಲಿ ನಡೆಯು ತ್ತಿದ್ದ. ಆಗ ದಾರಿಯಲ್ಲಿ ಒಬ್ಬ ಮುದುಕ ನನ್ನು ಕಂಡ. ಸಮೀಪದಲ್ಲಿ ಬಿದ್ದಿದ್ದ ಸಣ್ಣ ಬೆಣಚು ಕಲ್ಲನ್ನು ತೆಗೆದುಕೊಳ್ಳಲು ಆ ವ್ಯಕ್ತಿ ಹೆಣಗಾಡುತ್ತಿದ್ದರು. ಆಬಿದ್ ಅವರ ಬಳಿ ಹೋಗಿ ಅದನ್ನು ತೆಗೆದುಕೊಟ್ಟ. ಮುದುಕ ಆಬಿದ್ನಿಗೆ ಧನ್ಯವಾದ ಸಲ್ಲಿಸಿದರು.
“ಇದೊಂದು ಸಾಮಾನ್ಯ ಕಲ್ಲಲ್ಲವೇ, ಏನು ಇದಕ್ಕಿಷ್ಟು ವಿಶೇಷತೆ?” ಎಂದು ವ್ಯಕ್ತಿಯೊಂದಿಗೆ ಆಬಿದ್ ಕೇಳಿದ. “ಮಗನೇ, ಈ ಲೋಕದಲ್ಲಿ ಯಾವುದೂ ಸಾಮಾನ್ಯವಲ್ಲ. ಸರಿಯಾದ ಸ್ಥಳದಲ್ಲಿ ಅಥವಾ ಪ್ರತಿಯೊಂದಕ್ಕೂ ತನ್ನದೇ ಆದ ಅಸಾಮಾನ್ಯ ಮೌಲ್ಯವಿದೆ.”
ಆದರೆ ಮುದುಕನ ಮಾತು ಆಬಿದ್ಗೆ ಅರ್ಥವಾಗಲಿಲ್ಲ ಎಂದು ಮುದುಕನಿಗೆ ಗೊತ್ತಾಯಿತು. ಆತ ಆಬಿದ್ಗೆ ಆ ಕಲ್ಲನ್ನು ಕೊಡುತ್ತಾ, “ನೀನು ಈ ಕಲ್ಲನ್ನು ಆ ಸ್ಟೇಶನರಿ ಅಂಗಡಿಗೆ ಕೊಡು. ಆಗ ಈ ಕಲ್ಲಿಗೆ ಎಷ್ಟು ರೂಪಾಯಿ ಕೊಡುತ್ತೀರಾ ಎಂದು ಕೇಳು.” ಆಬಿದ್ ಆ ಕಲ್ಲನ್ನು ಕೊಂಡು ಹೋದಾಗ ಐವತ್ತು ರೂಪಾಯಿ ಕೊಡುತ್ತೇನೆಂದು ಅಂಗಡಿಯಾತ ಹೇಳಿದ. ಆ ವಿಷಯ ಆಬಿದ್ ವೃದ್ಧನೊಂದಿಗೆ ಹೇಳಿದಾಗ, ಆಭರಣದ ಅಂಗಡಿಗೆ ತೆಗೆದು ಕೊಂಡು ಹೋಗಲು ಸೂಚಿಸಿದ. ಅಲ್ಲಿ ೫೦೦ ರೂಪಾಯಿ ಕೊಡುತ್ತೇವೆ ಎಂದಾಗ ಮುದುಕ ಅದನ್ನು ಮ್ಯೂಸಿಯಂಗೆ ತೋರಿಸಲು ಹೇಳಿದನು. ಇದು ಸಾಮಾನ್ಯ ಕಲ್ಲಲ್ಲವೆಂದೂ ಚಂದ್ರನ ಉಲ್ಕಾ ಶಿಲೆಯ ದ್ದೆಂದು ಮ್ಯೂಸಿಯಂನ ವ್ಯಕ್ತಿ ಹೇಳಿದರು. ೨೦,೦೦೦ ಬೆಲೆಯನ್ನೂ ಹೇಳಿದರು.
ಆಶ್ಚರ್ಯದಿಂದ ಈ ವಿಷಯವನ್ನು ವೃದ್ಧನಿಗೆ ಹೇಳಿದಾಗ, ಕುಳಿತಲ್ಲಿ ಕುಳಿತರೇ, ತಲುಪುವಲ್ಲಿಗೆ ತಲುಪಿದರೇ, ಅದರ ನೈಜ ಮೌಲ್ಯ ದೊರೆಯುತ್ತದೆ ಎಂದು ವೃದ್ಧ ಹೇಳಿದ. ಆ ಕಲ್ಲನ್ನು ಆಬಿದ್ಗೆ ಉಡುಗೊರೆಯಾಗಿ ನೀಡಿದ. ಅಂದು ರಾತ್ರಿ ವೃದ್ಧನು ಹೇಳಿದ ವಿಷಯದ ಕುರಿತೇ ಯುವಕ ಯೋಚಿಸಿದ. ಮರುದಿನ ಆಫೀಸ್ಗೆ ಹೋಗಿ ತನ್ನ ಕೆಲಸಕ್ಕೆ ರಾಜೀ ನಾಮೆ ನೀಡಿದ. ಮ್ಯಾನೇಜರ್ ಎಷ್ಟೇ ವಿನಂತಿಸಿದರೂ ಆತ ಕೇಳಲಿಲ್ಲ.
ಇನ್ನೊಂದು ಶೂ ಕಂಪೆನಿಗೆ ಅವನು ಸೇರಿಕೊಂಡ. ಆಬಿದ್ನ ಪ್ರತಿಭೆಯನ್ನು ತಿಳಿದುಕೊಂಡ ಕಂಪೆನಿಯು ಆತನಿಗೆ ಉತ್ತಮ ಹುದ್ದೆ ನೀಡಿತು.
ಈ ಕತೆಯಿಂದ ಹಲವು ವಿಷಯಗಳು ನಿಮಗೆ ತಿಳಿದಿರಬಹುದು. ನಾವು ಇರುವ ಸ್ಥಳಗಳು ಬಹಳ ಮುಖ್ಯ. ಕೊಳದಲ್ಲಿ ಕಟ್ಟಿದ ನೀರು ಮತ್ತು ಸಮುದ್ರದಲ್ಲಿ ತೆರೆಯಾಗಿ ಅಪ್ಪಳಿಸುವುದು ನೀರೇ ಆಗಿದೆ. ಅದರ ಸ್ಥಳ ವಿಭಿನ್ನವಾಗಿದೆ ಎಂಬುದೇ ವ್ಯತ್ಯಾಸ. ಆದರೆ ಆ ಬದಲಾವಣೆ ಎಷ್ಟು ದೊಡ್ಡದು ಎಂದು ಯೋಚಿಸಿದರೆ ಅರ್ಥಮಾಡಿಕೊಳ್ಳಬಹುದು. ಟಿ