ಇಂದಿನ ಆಧುನಿಕ ಶೈಕ್ಷಣಿಕವಾಗಿ ಮುಂದುವರಿದ ಸಮಾಜದಲ್ಲೂ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮೌಢ್ಯಗಳು ನೆಲೆಸಿದೆ ಎಂದರೆ ನಾಚಿಗೆಕೇಡು. ನಮ್ಮ ಮಹಾರಾಷ್ಟçದಲ್ಲಿ ಶಾಲೆಯ ಶೌಚಾಲಯದಲ್ಲಿ ಹೆಣ್ಣಿನ ಮಾಸಿಕ ಮುಟ್ಟುವಿನ ರಕ್ತದ ಕಲೆಗಳು ಕಾಣಿಸಿದಕ್ಕಾಗಿ ಶಿಕ್ಷಕನೋರ್ವ ವಿದ್ಯಾರ್ಥಿನಿಯರ ವಸ್ತç ಬಿಚ್ಚಿಸಿ ತನಿಖೆ ಮಾಡಿದರಂತೆ! ಮಹಿಳಾ ಸಮೂಹಕ್ಕೇ ಇದು ಅವಮಾನದ ಸಂಗತಿ. ಹೆಣ್ಣಿಗೆ ತಾನು ಯಾವ ದಿನಕ್ಕೆ ಮುಟ್ಟಾಗುತ್ತೇನೆಂದು ಸರಿಯಾಗಿ ತಿಳಿಯದೇ ಇರುವ ಪರಿಸ್ಥಿತಿಯಲ್ಲಿರುವಾಗ ಶಾಲೆಯಲ್ಲಿ ರಕ್ತಸ್ರಾವ ಆದಾಗ ಏನು ಮಾಡಬೇಕು? ಹಾರ್ಮೋನಿನ ಏರುಪೇರಿನಿಂದ ಯಾವಾಗಬೇಕಾದರೂ ರಕ್ತ ಕಾಣಿಸಬಹುದು. ಅಂತಹ ಸಮಯದಲ್ಲಿ ಈ ಹೆಣ್ಣಿಗೆ ಸಾಂತ್ವನ, ನೆರವು ನೀಡಬೇಕಾದದ್ದು ಹತ್ತಿರ ಇರುವವರ ಧರ್ಮ. ಶಾಲೆಗಳಲ್ಲಿ, ಕಾಲೇಜಿನಲ್ಲಿ, ಆಫೀಸ್, ಕಚೇರಿಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ, ಬಸ್ಸ್ಟಾಂಡ್ಗಳಲ್ಲಿ ಇಂತಹ ತುರ್ತು ಸಮಯಕ್ಕಾಗಿ ಅಲ್ಪದರದಲ್ಲಿ ಕೈಗೆಟುಕುವಂತೆ
ಪ್ಯಾಡ್’ಗಳು ಸುಲಭವಾಗಿ ಸಿಗುವಂತೆ ಏರ್ಪಾಡು ಇರಬೇಕು. ಶಾಲೆಯಲ್ಲಿ ಇದು ಬಹಳ ಮುಖ್ಯ. ಆ ಸಮಯದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಪಡುವ ಹದಿಹರೆಯದ ಹುಡುಗಿಯರಿಗೆ ಶಿಕ್ಷಕರಿಂದ ಸಾಂತ್ವನ ಮುಖ್ಯ. ಇಂತಹ ಮೂರ್ಖ ಶಿಕ್ಷಕನಿಗೆ ಅಮಾನತು ಮಾಡುವುದೇ ಉತ್ತಮ ಶಿಕ್ಷೆ.
ಭಾರತದಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ, ಅವಮಾನಗಳ ಬಗ್ಗೆ ಪತ್ರಿಕೆಯಲ್ಲಿ ಓದುವಾಗ ಮೈ ಉರಿಯುತ್ತದೆ. ಯಾಕೆ ದಲಿತರು ಇನ್ನೂ ಮೌನ ಆಗಿದ್ದಾರೆ! ಒಗ್ಗಟ್ಟಾಗಿ ಈ ಅನ್ಯಾಯ, ಅಸ್ಪೃಶ್ಯತೆಯ ವಿರುದ್ಧ ಬೀದಿಗೆ ಇಳಿದು ಹೋರಾಟ ನಡೆಸಬಾರದೇಕೆ! ಮೌನ'ವೇ ಇವರ ದುರಂತಕ್ಕೆ ಕಾರಣವಲ್ಲವೇ? ಮೈಸೂರಿನ ಶಾಲೆ ಒಂದರಲ್ಲಿ ಬಿಸಿ ಊಟಕ್ಕೆ ಓರ್ವ ದಲಿತ ಮಹಿಳೆಯನ್ನು ನೇಮಿಸಿದಕ್ಕೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಗೈರು ಹಾಜರಿಯಾಗಿ ಒಬ್ಬನೇ ವಿದ್ಯಾರ್ಥಿ ಉಳಿದನೆಂದು ಸುದ್ದಿ ಓದಿದೆ. ಇದೆಂತಹಾ ಮನಃಸ್ಥಿತಿ! ಕರುವನ್ನು ಮಾರಲು ಬಂದ ದಲಿತರಿಬ್ಬರ ತಲೆ ಬೋಳಿಸಿ ಅವರ ಬಾಯಲ್ಲಿ ಹುಲ್ಲು ತುಂಬಿ ಮೊಣಕಾಲಿನಲ್ಲಿ ತೆವಳಿಸಿಕೊಂಡು ದೌರ್ಜನ್ಯ ನಡೆಸಿದರು ಮೇಲು ಜಾತಿಯವರು. ದಲಿತರ ಓಟು ಈ ದೇಶದ ರಾಜಕೀಯ ಪಕ್ಷಕ್ಕೆ ಅತೀ ಮುಖ್ಯ. ಅವರ ಸಹವಾಸ ಬೇಡ. ಇವರನ್ನು ಉ. ಭಾರತದಲ್ಲಿ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಾರೆಂದರೆ ದಲಿತ ಯುವತಿಯರನ್ನು ಅತ್ಯಾಚಾರ ಮಾಡಿ ಕೊಂದು ಮರಗಳಲ್ಲಿ ನೇತು ಹಾಕುತ್ತಾರೆ. ಅವರೂ ಮನುಷ್ಯರೇ ಅಲ್ಲವೇ? ಮಾನವರೆಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳೆಂದು ಹೇಳುತ್ತದೆ ಧರ್ಮ. ಬಿಳಿಯನೂ-ಕರಿಯನೂ ಸಮಾನರೆಂದು, ಶ್ರೀಮಂತ-ಬಡನೂ ಸಮಾನರೆಂದೂ ಬೋಧಿಸುತ್ತದೆ ಇಸ್ಲಾಮ್. ಅನ್ಯಾಯವನ್ನು ಮೌನವಾಗಿ ಸಹಿಸುವುದೂ ಒಂದು ಅಪರಾಧವೇ ಆಗಿದೆ. ಇನ್ನಾದರೂ ದಲಿತರು ಧ್ವನಿ ಎತ್ತುವಂತಾಗಲಿ. ಭಾರತಕ್ಕೆ ಸ್ವಾತಂತ್ರö್ಯ ಲಭಿಸಿ ಎಪ್ಪತ್ತೆಂಟನೇ ವರ್ಷ. ದಲಿತರಿಗೆ, ಅಲ್ಪಸಂಖ್ಯಾತರಿಗೆ ಸ್ವಾತಂತ್ರö್ಯ ಲಭಿಸಿದೆಯೇ?! ಕೋಮುದ್ವೇಷಿ ರಾಜಕೀಯ ನಮ್ಮನ್ನು ಇಂದು ಬ್ರಿಟಿಷರ ಕಾಲಕ್ಕೆ ದೂಡಿ ಬಿಟ್ಟಿದೆ. ನಾವಿಂದು ಹೋರಾಡ ಬೇಕಾಗಿದೆ ಈ
ಶತ್ರು’ಗಳ ವಿರುದ್ಧ.