ಪತಿ-ಪತ್ನಿಯರ ಸಂಬಂಧ ಕೇವಲ ಶಾರೀರಿಕ ಸುಖಕ್ಕೆ ಮಾತ್ರ ಮೀಸಲು ಎಂಬ ನಂಬಿಕೆ ಕೆಲವರಿಗೆ, ವಂಶ ಬೆಳೆಸುವುದೇ ಮದುವೆಯ ಉದ್ದೇಶ ಎಂದು ಭಾವಿಸುವವರೂ ಇದ್ದಾರೆ. ಇದಕ್ಕಿಂತಲೂ ಮಿಗಿಲಾಗಿ ಪತಿ-ಪತ್ನಿಯು ಪರಸ್ಪರರ ಹಿತಚಿಂತಕರಾಗಿರುತ್ತಾರೆ.
ಆದ್ದರಿಂದಲೇ ಕುರ್ಆನ್ನಲ್ಲಿ ಪತಿ-ಪತ್ನಿಯನ್ನು ಪರಸ್ಪರರ ಉಡುಪು ಎನ್ನಲಾಗಿದೆ. ಅವರನ್ನು ಜೋಡಿ’ ಎನ್ನಲಾಗಿದೆ.ಉಡುಪು’ ಯಾವ ರೀತಿ ಒಂದು ಶರೀರದ ನಗ್ನತೆಯನ್ನು ಮರೆಮಾಡುವ ಮೂಲಕ ಗೌರವಕ್ಕೆ ಪಾತ್ರವಾಗಿರುತ್ತದೋ… ಅದೇ ರೀತಿ ದಂಪತಿಗಳು ಪರಸ್ಪರರ ಗೌರವ ಉಳಿಸುವ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಪತಿಯು ಆರ್ಥಿಕ ಸ್ತಂಭವಾಗಿದ್ದರೆ, ಪತ್ನಿಯು ಮನೆಯ ಜವಾಬ್ದಾರಿಯನ್ನು ಹೊರುವವಳಾಗಿರುತ್ತಾಳೆ. ಅಂತಹದರಲ್ಲಿ ಪತಿಯು ತನ್ನ ಎಲ್ಲಾ ವ್ಯವಹಾರಗಳ ಬಗ್ಗೆ ತನ್ನ ಸಂಗಾತಿಯೊAದಿಗೆ ಸಮಾಲೋಚನೆ ಮಾಡಬೇಕು. ಇಂದು ಕೆಲವು ಪುರುಷರು ಮಾಡುವ ತಪ್ಪು ಏನೆಂದರೆ ತನ್ನ ಕಾರುಬಾರು ವ್ಯವಹಾರದ ಬಗ್ಗೆ, ತನ್ನ ದುಡಿಮೆಯ ಸ್ಥಿತಿಗತಿ ಬಗ್ಗೆ ಹೆಂಡತಿಗೆ ಯಾವುದೇ ವಿಷಯ ತಿಳಿಸುವುದಿಲ್ಲ. ತಾನು ಸಂಪಾದಿಸುವ ಹಣ ಯಾವ ರೀತಿಯದು, ಹೇಗೆ ಸಂಪಾದಿಸುತ್ತಿದ್ದೇನೆAಬ ವಿವರವನ್ನು ರಹಸ್ಯ ಆಗಿ ಇಡುತ್ತಾರೆ.
ಒಂದು ಘಟನೆ ಹೀಗಿದೆ. ಇಕ್ಬಾಲ್ ದೊಡ್ಡ ಉದ್ಯಮಿ. ನಗರದಲ್ಲಿ ಅವನು ಎಲ್ಲರ ಗೌರವಕ್ಕೆ ಪಾತ್ರನಾದ ದೊಡ್ಡ ಶ್ರೀಮಂತ ಸಾಲಿಗೆ ಸೇರಿದವನು. ಮನೆಯಲ್ಲಿ ಐದಾರು ಅದ್ಧೂರಿ ಕಾರುಗಳು, ಹೆಂಡತಿ ಮಕ್ಕಳೊಂದಿಗೆ ವಿದೇಶ ತಿರುಗಾಟ, ಹಲವು ಪಾರ್ಟಿಗಳನ್ನು ಅಯೋಜಿಸುತ್ತಾ ಆಡಂಬರದ ಜೀವನದಲ್ಲಿ ಮಜಾದಲ್ಲಿದ್ದ. ಹೆಂಡತಿಗೆ ತನ್ನ ಪತಿಯು ಇಷ್ಟೊಂದು ಹಣ ಎಲ್ಲಿಂದ ತರುತ್ತಿದ್ದಾನೆಂಬ ಚಿಂತೆ ಬಂದಾಗ ಆಕೆ ಪ್ರಶ್ನಿಸುತ್ತಾಳೆ. ಅವನು ಹೇಳಿದ ನನಗೆ ಈ ಸಲ ಉದ್ಯಮದಲ್ಲಿ ಕೋಟಿಗಟ್ಟಲೇ ಲಾಭ ಬಂತು… ನಿನಗೆ ಅದೆಲ್ಲಾ ವಿಷಯ ಬೇಡಾ, ನಿನಗೆ ಏನು ಬೇಕೋ ಅದನ್ನು ಖರೀದಿಸು, ಎಂಜಾಯ್ ಮಾಡು… ಎಂದ. ಒಂದಿನ ಪತಿಯನ್ನು ಪೊಲೀಸರು ಬಂದು ಕರೆದೊಯ್ದಾಗ ಹೆಂಡತಿಗೆ ಅರಿವಾಯಿತು ತಾನಿರುವ ಮನೆ, ತನ್ನ ಸಂಪತ್ತು ಎಲ್ಲವೂ ಮುಳುಗಿ ಹೋಗಿದೆ ಬ್ಯಾಂಕ್ನವರು ಅವರ ಅದ್ಧೂರಿ ಮನೆ, ಕಾರು ಎಲ್ಲವನ್ನೂ ಸೀಝ್’ ಮಾಡಿದ್ದರು. ವಿಷಯ ಏನೆಂದರೆ ಈ ಉದ್ಯಮಿ ಪತಿರಾಯ ಬ್ಯಾಂಕ್ನಿAದ ಕೋಟಿಗಟ್ಟಲೇ ಲೋನ್ ತೆಗೆದು, ಜನರಿಂದ ಲಕ್ಷಗಟ್ಟಲೇ ಹೂಡಿಕೆಯನ್ನು ಮಾಡಿಸಿ ಎಲ್ಲರಿಗೂ ಪಂಗನಾಮ ಹಾಕಿದ್ದ. ಜನರು ತಾವು ಈ ವ್ಯಕ್ತಿಯನ್ನು ನಂಬಿ ಕೊಟ್ಟ ಕೋಟಿಗಟ್ಟಲೇ ಹಣದಿಂದ ಆತ ಆಡಂಬರದ ಜೀವನ ನಡೆಸುತ್ತಿದ್ದ. ಜನರ ಬೆವರಿನ, ಶ್ರಮದ ಹಣದಲ್ಲಿ ಬೆಲೆಬಾಳುವ ಕಾರುಗಳಲ್ಲಿ ವಿದೇಶಿ ಪ್ರಯಾಣದಲ್ಲಿ ಮಜಾವಾಗಿದ್ದ. ಅರಮನೆಯಿಂದ ಸೀದಾ ಬೀದಿಗೆ ಬಿದ್ದ ಮನೆ ಒಡತಿಗೆ ಸತ್ಯ ತಿಳಿದಾಗ ಆಕೆ ಎಲ್ಲವನ್ನೂ ಕಳೆದುಕೊಂಡು ಬರಿಗೈ ಆಗಿದ್ದಳು. ಪತಿಯು ತನಗೆ ಹೆಚ್ಚು ಆದಾಯ ಬರುತ್ತಿದೆ, ತನ್ನ ಉದ್ಯಮದಲ್ಲಿ ತುಂಬಾ ಲಾಭ ಆಗಿದೆ ಎಂದು ಸದಾ ಅವಳ ಬಳಿ ಹೇಳುತ್ತಿದ್ದ. ಆಕೆ ಅದನ್ನು ನಂಬಿದ್ದಳು. ಇಂದು ಆ ಉದ್ಯಮಿ ಎಲ್ಲಾ ಸಂಪತ್ತು ಕಳೆದುಕಂಡು ಮೂಲೆ ಸೇರಿದ್ದಾನೆ. ಇಲ್ಲಿ ನಮಗೆ ತಿಳಿಯುವ ಒಂದು ಪಾಠ ಏನೆಂದರೆ… ಮನೆಯ ಯಜಮಾನಿ (ಪತ್ನಿ) ತನ್ನ ಪತಿಯ ಸಂಪಾದನೆಯ ಬಗ್ಗೆ ಅಲಕ್ಷö್ಯದಿಂದ ಇರುವುದು, ಅವಳಿಗೆ ಬೇಕಾದಷ್ಟು ಹಣ ಕೈಗೆ ನೀಡಿದಾಗ ಅವಳೂ ಖುಶಿಪಟ್ಟಳು. ಪತಿಯು ಯಾವ ರೀತಿ ಸಂಪಾದಿಸುತ್ತಿದ್ದಾನೆAಬ ಚಿಂತನೆ ಅವಳಿಗೆ ಇರಬೇಕಾಗಿತ್ತು. ಬೆಲೆಬಾಳುವ ವಸ್ತç, ಬಂಗಾರ, ಫರ್ನಿರ್ಸ್, ವಿದೇಶ ಯಾತ್ರೆ ಇತ್ಯಾದಿಗಳಲ್ಲಿ ಮೈಮರೆತ ಪತ್ನಿಗೆ ಒಂದು ದಿನ ಇದೆಲ್ಲಾ ನ್ಯಾಯದ ಹಣ ಅಲ್ಲ ಎಂದು ತಿಳಿದಾಗ ಆಕೆ ಕುಸಿದು ಬಿದ್ದಳು.
ಇಂದು ಹೃದಯಾಘಾತ ಹೆಚ್ಚುತ್ತಿದೆ. ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನು ಅಪ್ಪುತ್ತಿದ್ದಾರೆ. ದಿಢೀರನೇ ಬಂದು ಎರಗುವ ಸಾವಿಗೆ ಪತಿಯನ್ನು ಕಳೆದುಕೊಂಡಾಗ ಪತಿಯು ಎಷ್ಟು ಜನರಿಗೆ ಸಾಲ’ ನೀಡಲು ಬಾಕಿ ಇದೆ? ಎಷ್ಟು ಕಡೆ ಅದನ್ನು ಬಿಸಿನೆಸ್ಗೆ ಹಣ ಹೂಡಿಕೆ ಮಾಡಿರುತ್ತಾನೇ ಎಷ್ಟು ಹಣ ಆತನಿಗೆ ಬರಬೇಕಾಗಿದೆ, ಆತನ ವ್ಯವಹಾರ ಏನೂ… ಇತ್ಯಾದಿ ಏನೂ ಪತ್ನಿಗೆ ತಿಳಿಯದೇ ಹೋದಾಗ ನಷ್ಟ’ ಉಂಟಾಗುತ್ತದೆ. ಆದರಿಂದಲೇ ಪತಿ-ಪತ್ನಿಯ ನಡುವೆ ಸಮಾಲೋಚನೆ ಇರಬೇಕು. ತಮ್ಮ ವ್ಯವಹಾರ, ಹಣ, ಬಿಸಿನೆಸ್ ವಿಷಯ ಇತ್ಯಾದಿ ವಿಷಯವನ್ನು ಪತ್ನಿಗೆ ತಿಳಿಸಬೇಕು. ಹೆಂಡತಿಗೆ ಹೇಳುವುದರಿಂದ ತಮ್ಮ ಗಂಡಸುತನಕ್ಕೆ ಪೆಟ್ಟಾಗುವುದಿಲ್ಲ. ಯಾಕೆ ಹೆಂಗಸರಿಗೆ ಹೇಳಬೇಕೆಂದು ಚಿಂತಿಸುವುದೇ ದೊಡ್ಡ ತಪ್ಪು. ಪ್ರತೀಯೊಬ್ಬರೂ ತಮ್ಮ ವ್ಯವಹಾರದ ಸಂಗತಿಯನ್ನು ಪತ್ನಿಗೆ ತಿಳಿಸಬೇಕು. ಅವಳು ನಿಮ್ಮ ಬಾಳಸಂಗಾತಿ. ಭವಿಷ್ಯದ ಲಾಭ, ನಷ್ಟಕ್ಕೆ ಅವಳೂ ಭಾಗಿಯಾಗುತ್ತಾಳೆ. ನನ್ನ ಪತಿ ಈ ರೀತಿ ಜನರಿಗೆ ಮೋಸ ಮಾಡಿ ಹಣ ಸಂಪಾದಿಸುತಿದ್ದ ಎಂದು ಗೊತ್ತಿದ್ದರೆ… ನಾನು ದುಂದುವೆಚ್ಚ ಮಾಡದೇ ಬದುಕುತ್ತಿದ್ದೆ. ನಾನು ಆತನನ್ನು ಅನ್ಯಾಯದ ಗಳಿಕೆಯಿಂದ ತಡೆಯುತ್ತಾ ಇದ್ದೆ… ಎಂದು ನಂತರ ಪಶ್ಚಾತ್ತಾಪ ಪಡುವುದು ಬೇಡ.
ಇಂದು ಪತಿ ಸಾಲ ಮಾಡಿ ಮಕ್ಕಳ ಬರ್ತ್ಡೇ ಮಾಡುವುದು, ಸಾಲಮಾಡಿ ಪ್ರವಾಸಕ್ಕೆ ಹೋಗುವುದು, ಮದುವೆಗೆ ಗಿಫ್ಟ್ ಖರೀದಿಸುವುದು, ಬಸುರಿಯ ಸೀಮಂತ ಮಾಡುವುದೂ… ಎಲ್ಲವೂ ಮಹಿಳೆಯರ ಒತ್ತಾಯದಿಂದಲೇ ಆಗಿರುತ್ತದೆ. ಗಂಡಸರು ಹಣ ಸಾಲ ಮಾಡಿ ಖರ್ಚು ಮಾಡುವುದು ಕೇವಲ ಮಹಿಳೆಯರಿಗೆ ನೆಮ್ಮದಿ ಸಿಗಲಿ ಎಂದಾಗಿದೆ. ಒಡವೆ, ಸೀರೆ, ಪಾತ್ರೆ… ಸ್ಕೀಮ್ನಲ್ಲಿ ಖರೀದಿಸಿ, ತಿಂಗಳ ಹಣ ಕಟ್ಟಲು ಗಂಡಸರನ್ನು ಒತ್ತಾಯಿಸುವುದು ಅವರು ಎಲ್ಲಿಂದಲಾದರೂ ತರಲಿ ಎಂದು ಸುಮ್ಮನಿರುವುದು ತಪ್ಪು.ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ಗಾದೆ ಮಾತಿದೆ. ಪತಿಯು ತನ್ನ ಕುಟುಂಬದ ಖುಶಿಗಾಗಿ ಸಾಲಗಾರನಾಗುತ್ತಾನೆ.
ಗಲ್ಫ್ನಲ್ಲಿ ಬೆವರು ಸುರಿಸಿ ಶ್ರಮವಹಿಸಿ ದುಡಿದು ಕಳಿಸುವ ಪತಿಯ ಹಣವನ್ನು ಇಲ್ಲಿ ಶಾಪಿಂಗ್ಗಾಗಿ, ಬಗೆ ಬಗೆಯ ತಿಂಡಿ, ಪಾರ್ಟಿಗಾಗಿ ಖರ್ಚು ಮಾಡುವ ಮಹಿಳೆಯರಿಗೆ ಭರವಿಲ್ಲ. ಹಣ ಇರುವಾಗ ಮಾತ್ರ ಪತಿಗೆ ಗೌರವ, ಮನ್ನಣೆ ನೀಡುವ ಆತನು ಬರಿಕೈಯವನಾದಾಗ ಆತನನ್ನು ದೂರ ಮಾಡುವ ಪತ್ನಿಯರೂ ಇದ್ದಾರೆ. ಇಂತಹ ಪತ್ನಿಯರನ್ನು ಕೃತಜ್ಞತೆ ಇಲ್ಲದ ವರ್ಗಕ್ಕೆ ಸೇರಿಸಬಹುದು. ಪತಿ-ಪತ್ನಿಯ ನಡುವೆ ಯಾವುದೇ ವಿಷಯಕ್ಕೂ ರಹಸ್ಯ ಇರಬಾರದು. ಅವರಿಬ್ಬರು ತೆರೆದ ಪುಸ್ತಕದಂತೇ ಪ್ರತೀ ಒಂದು ವ್ಯವಹಾರ, ವಿಷಯ ಪರಸ್ಪರರ ನಡುವೆ ಚರ್ಚೆ ಆಗಬೇಕು. ಪತಿಯನ್ನು ವಿನಾಶದಿಂದ ರಕ್ಷಿಸುವುದು ಪತ್ನಿಯ ಧರ್ಮವಾಗಿದೆ.
ಕೆಲವು ಪತಿಯಂದಿರು ಊರಲ್ಲಿ ತುಂಬಾ ಸಾಲ ಮಾಡಿ ನಂತರ ವಿದೇಶಕ್ಕೆ ಪರಾರಿಯಾಗಿ ಬಿಡುತ್ತಾರೆ. ಊರಲ್ಲಿ ಸಾಲಗಾರರು ಪತ್ನಿಯನ್ನು ಬದುಕಲೂ ಬಿಡುವುದಿಲ್ಲ. ಅವಳಿಗೆ ಕಿರುಕುಳ ನೀಡುತ್ತಾರೆ. ಇಂತಹ ಹಲವು ಕೇಸ್ಗಳು ನಮ್ಮ ಕೌನ್ಸಿಲಿಂಗ್ಗೆ ಬಂದಿದೆ. ಇದರಿಂದ ಬಚಾವ್ ಆಗಲು ಹೆಂಡತಿ ಪತಿಗೆ ತಲಾಕ್ ಕೇಳುತ್ತಾಳೆ. ಆತನ ಹೆಂಡತಿ ಆಗಿ ತಾನು ಈಗ ಇಲ್ಲ ಎಂದು ಸಾಲಗಾರರಿಗೆ ಹೇಳಿ ಆಕೆ ಬಚಾವ್ ಆಗಲು ನೋಡುತ್ತಾಳೆ. ಸಾಲ ಮಾಡಿ ಪರಾರಿ ಆಗುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಅವರ ಕುಟುಂಬ ಜೀವನವೂ ನಷ್ಟ ಆಗುತ್ತದೆ. ಪತ್ನಿಯ ಆತಿ ಆಶೆ, ಬೇಕಾಬಿಟ್ಟಿ ಖರ್ಚು, ಪತಿಯನ್ನು ಸಾಲಗಾರನನ್ನಾಗಿ ಮಾಡುವುದೇ ಸತ್ಯ. ಆದುದರಿಂದ ಪತಿ-ಪತ್ನಿಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಸಾಲ' ಬದುಕನ್ನು ನರಕ ಮಾಡುತ್ತದೆ.
ಸಾಲ’ ಬದುಕನ್ನೇ ಅಂತ್ಯ’ ಮಾಡುತ್ತದೆ. ಪತ್ನಿಯ ಬಳಿ ತಮ್ಮ ವ್ಯವಹಾರವನ್ನು, ಹಣಕಾಸು ವಿಷಯವನ್ನು ಹೇಳುವುದು ತಮ್ಮ ಪುರುಷತ್ವ(ಅಹಂಕಾರ)ಕ್ಕೆ ಅಡ್ಡಿ ಎಂದು ಭಾವಿಸುವುದು ಮೂರ್ಖತನ.
ಪತ್ನಿಯು ಪತಿಯ ಹಿತವನ್ನೇ ಬಯಸುವವಳು. ಅವಳು ಪತಿಯನ್ನುಹರಾಮ್’ ದಾರಿಗೆ ಸಾಗಲು ಅವಕಾಶ ನೀಡಲಾರಳು. ಹರಾಮ್ ಅಥವಾ ವಂಚನೆಯ ಸಂಪಾದನೆಗೆ ಹೆಂಡತಿ, ಮಕ್ಕಳು ಭಾಗೀದಾರರಾಗಿರಲು ಆಶಿಸುವುದಿಲ್ಲ. ಜೀವನ ನ್ಯಾಯದ ಸಂಪಾದನೆಯಲ್ಲಿರಲಿ. ನಾಳೆ ದೇವನ ಬಳಿ ಅಪರಾಧಿ ಆಗಿ ನಿಲ್ಲುವ ಹೀನ ಸ್ಥಿತಿ ಬಾರದಿರಲಿ.
ಶಮು